Karnataka Politics ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ನಡುವೆ ಗಲಾಟೆ, ಮಧ್ಯಪ್ರವೇಶಿಸಿದ ಪೊಲೀಸ್ರು

Published : Feb 10, 2022, 04:02 PM IST
Karnataka Politics ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ನಡುವೆ ಗಲಾಟೆ, ಮಧ್ಯಪ್ರವೇಶಿಸಿದ ಪೊಲೀಸ್ರು

ಸಾರಾಂಶ

* ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ನಡುವೆ ಗಲಾಟೆ * ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ * ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ರು

ಹೊಸಕೋಟೆ, (ಫೆ.10): ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ  (Sharath Bachegawda) ಹಾಗೂ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ನಡುವೆ ಕಟ್ಟಡ ಉದ್ಘಾಟನೆ ವಿಚಾರಕ್ಕಾಗಿ ಜಟಾಪಟಿ ನಡೆದಿದೆ.

ಹೌದು... ಟೆಪ್ ಕಟ್ ಮಾಡಲು ನಾ ಮುಂದು ತಾ ಮುಂದು ಅಂತಾ ಇಬ್ಬರ ನಡುವೆ ಕಿತ್ತಾಟವಾಗಿದೆ. ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. 

ಬಿಜೆಪಿ ಗೆಲುವು ನಿಶ್ಚಿತ ಎಂದ ಎಂಟಿಬಿ : ಶರತ್ ಬಚ್ಚೇಗೌಡರ ವಿರುದ್ಧ ಕಿಡಿಕಿಡಿ

ಉದ್ಘಾಟನೆಗೆ ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಎತ್ತಿಕೊಂಡು ಟೇಪ್ ಕಟ್ ಮಾಡಲು ಮುಂದಾದಾಗ ಎಂಟಿಬಿ ಗರಂ ಆಗಿದ್ದಾರೆ. ಸಚಿವ ಎಂಟಿಬಿ ಗರಂ‌ ಆದರೂ ತಲೆಕೆಡಿಸಿಕೊಳ್ಳದೇ ಶಾಸಕ ಶರತ್ ಟೆಪ್ ಕಟ್ ಮಾಡಿದ್ದಾರೆ. ಕಟ್ ಮಾಡಿ‌ ಒಳಗೆ ಹೋಗುತ್ತಿದ್ದಂತೆ ಬಚ್ಚೇಗೌಡ ನಿಂದು ಇದೇ ಆಗೋಯ್ತು ಅಂತ ಶರತ್ ಬಗ್ಗೆ ಎಂಟಿಬಿ ಗರಂ ಆಗಿ ಹೇಳಿದ್ದಾರೆ.

ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಆಗ ಸಚಿವ ಎಂಟಿಬಿಯನ್ನು ಒಂದುಕಡೆ ತಳ್ಳಿ ಶಾಸಕ ಶರತ್ ಒಳ‌ನುಗ್ಗಿದ್ದಾರೆ. ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ತಂದೆ, ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಗರಂ ನಡುವೆ ಕೈ ಬೆರಳು ತೋರಿಸಿ ಮಾತನಾಡದಂತೆ ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟಿದ್ದಾರೆ. ಈ‌ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದೆ

ಹೀಗೆ  ಶರತ್ ಬಚ್ಚೇಗೌಡ ಹಾಗೂ ಶಾಸಕ ಎಂಟಿಬಿ ನಾಗರಾಜ್ ನಡುವೆ ಟಾಕ್ ವಾರ್ ಶುರುವಾಗಿದ್ದು, ಟಾಕ್ ವಾರ್ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಶಾಸಕರು ಹಾಗೂ ಸಚಿವರನ್ನು ಶಾಂತಗೊಳಿಸಿದ್ದಾರೆ.

ಇನ್ನು ಘಟನೆ ಸಂಬಂಧ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದು, ಉದ್ಘಾಟನೆಗೆ ಈಶ್ವರಪ್ಪ, ಸುಧಾಕರ್ ಬರದಿದ್ದಕ್ಕೆ ಬಂದಿದ್ದೆ. ಸರ್ಕಾರದ ಪರವಾಗಿ ನಾನು ಉದ್ಘಾಟಕನಾಗಿ ಬಂದಿದ್ದೇನೆ. ಶಾಸಕರು ಅಧ್ಯಕ್ಷತೆ ವಹಿಸಿದ್ದಾರೆ ಹೊರತು ಉದ್ಘಾಟಕರಲ್ಲ. ಈ‌ ಜಿಲ್ಲೆಯನ್ನ ನೋಡಲ್ ಜಿಲ್ಲೆಯಾಗಿ ಪಡೆದುಕೊಂಡಿದ್ದೇನೆ. ನಾವು ಕೊಡುವ ಕಾಮಗಾರಿಗಳೆಲ್ಲ ಇವರೆ ಉದ್ಘಾಟಿಸ್ತಿದ್ದಾರೆ. ನಾವು ಮಾಡಿದರೆ ಮಾತ್ರ ಪ್ರೋಟೋಕಾಲ್ ಅಂತಾರೆ. ಇವರು ಮಾಡಿದ್ರೆ ಪ್ರೋಟೋಕಾಲ್ ಬರಲ್ವ ಎಂದು ಎಂಟಿಬಿ ಪ್ರಶ್ನೆ ಮಾಡಿದ್ದಾರೆ. ಇವರು ಹಿಂದೆ ಹೇಗೆ ಆಡಳಿತ ಮಾಡಿದ್ದಾರೆ ಜನಕ್ಕೆ ಗೊತ್ತು. ಇದೀಗ ಮತ್ತೆ ಅದನ್ನೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಜನರೆ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

ಶರತ್ ವಿರುದ್ಧ ಮೂಲಕ ಕೈ ಕಾರ್ಯಕರ್ತರು ಅಸಮಾಧಾನ 
 ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶರತ್ ವಿರುದ್ಧ ಸಿಡಿದೆದ್ದ ಕೈ ಅಸಮಾಧಾನಿತರು ಎಂಟಿಬಿ ನಾಗರಾಜ್ ಪರವಾಗಿ ಬ್ಯಾಟ್ ಬೀಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಗೆದ್ದಿದ್ದ ಶರತ್ ಇತ್ತೀಚೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯನಾಗಿ ಸೇರ್ಪಡೆಗೊಂಡಿದ್ದರು. ಶರತ್ ಕಾಂಗ್ರೆಸ್ ಸೇರ್ಪಡೆಗೊಂಡ ಆರಂಭದಲ್ಲಿ ಎಲ್ಲವೂ ಸರಿಯಿದ್ದರೂ ಇದೀಗ ಅಸಮಾಧಾನ
ಮೂಲ ಕಾಂಗ್ರೆಸ್ಸಿಗರಿಂದ ಶುರುವಾಗಿದೆ.

ಶರತ್ ಬಚ್ಚೇಗೌಡ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡುತ್ತಿದ್ದಾರೆ. ತಮ್ಮ ತಂದೆಯ ಶೈಲಿಯ ರಾಜಕೀಯ ಆರಂಭಿಸಿದ್ದಾರೆ. ಕುಟುಂಬ ಸದಸ್ಯರ ಟೀಮ್ ಮಾಡಿಕೊಂಡಿದ್ದಾರೆ ಎಂಬುದು ಅಸಮಾಧಾನಿತ ಕೈ ಕಾರ್ಯಕರ್ತರ ಆರೋಪವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!