ಹಣ ಪಡೆದ ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತರ ಪರ ಮತ ಚಲಾಯಿಸದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಇದರಿಂದ ಚುನಾವಣೆ ಪ್ರಕ್ರಿಯೆ ಮುಗಿದು ಹೊರ ಬರುತ್ತಿದ್ದಂತೆ ಸೋತ ಅಭ್ಯರ್ಥಿಗಳು ಹಣ ಪಡೆದ ಸದಸ್ಯರೊಂದಿಗೆ ನಡೆದ ಮಾತಿನ ಚಕಮಕಿ
ಕೆ.ಆರ್. ಪೇಟೆ(ಆ.04): ಹಣ ಪಡೆದು ಬೆಂಬಲಿತ ಅಭ್ಯರ್ಥಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಬಹಿರಂಗವಾಗಿ ಕೈಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡ ಘಟನೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ನಡೆದು ಒಟ್ಟು 21 ಜನ ಚುನಾಯಿತ ಸದಸ್ಯರಲ್ಲಿ 12 ಮಂದಿ ಕಾಂಗ್ರೆಸ್ ಮತ್ತು 9 ಮಂದಿ ಜೆಡಿಎಸ್ ಬೆಂಬಲಿತರು ಇದ್ದರು. ಪಂಚಾಯ್ತಿ ಅಧಿಕಾರ ಹಿಡಿಯಲು ಜೆಡಿಎಸ್ ಬೆಂಬಲಿಗರು ಇಬ್ಬರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತಲಾ 1.5 ಲಕ್ಷ ಹಣ ನೀಡಿದ್ದರು ಎನ್ನಲಾಗಿದೆ.
undefined
ಮಳವಳ್ಳಿ: ಕಾರ್ಯಾಚರಣೆ ಯಶಸ್ವಿ, 9 ಕಾಡಾನೆಗಳು ಮತ್ತೆ ಶಿಂಷಾ ಕಾಡಿನತ್ತ
ಹಣ ಪಡೆದ ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತರ ಪರ ಮತ ಚಲಾಯಿಸದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಇದರಿಂದ ಚುನಾವಣೆ ಪ್ರಕ್ರಿಯೆ ಮುಗಿದು ಹೊರ ಬರುತ್ತಿದ್ದಂತೆ ಸೋತ ಅಭ್ಯರ್ಥಿಗಳು ಹಣ ಪಡೆದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿ ಗಲಾಟೆ ಆರಂಭಿಸಿದ್ದಾರೆ.
ಹಣ ಪಡೆದು ಮತ ಚಲಾಯಿಸದೆ ಮೋಸ ಮಾಡಿದ್ದಾರೆ ಎಂದು ಜೆಡಿಎಸ್ ಬೆಂಬಲಿತ ಸದಸ್ಯರು, ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ಆರಂಭವಾಯಿತು. ಪರಸ್ಪರರು ಕುತ್ತಿಗೆ ಪಟ್ಟಿಹಿಡಿದು ಜಗಳವಾಡಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ಪೊಲೀಸರು ಮತ್ತು ಇತರ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದರು. ಚುನಾವಣಾ ಗಲಭೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.
ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಹೆಚ್ಚಳ: ಸಚಿವ ಚಲುವರಾಯಸ್ವಾಮಿ
ಅಧ್ಯಕ್ಷ - ಉಪಾಧ್ಯಕ್ಷರಾಗಿ ಕುಮಾರ, ಬೈರಯ್ಯ ಆಯ್ಕೆ
ಕೆ.ಆರ್.ಪೇಟೆ: ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕುಮಾರ್ ಹಾಗೂ ಬೈರಯ್ಯ ಆಯ್ಕೆಯಾದರು. ಗುರುವಾರ ಬೆಳಗ್ಗೆ 11ಕ್ಕೆ ಪೂರ್ವ ನಿಗದಿಯಂತೆ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ 2 ಎ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಕಾಳೇಗೌಡನ ಕೊಪ್ಪಲು ಗ್ರಾಮದ ಸದಸ್ಯ ಕುಮಾರ್, ಜೆಡಿಎಸ್ ಬೆಂಬಲಿತ ಪಲ್ಲವಿ ಗಣೇಶ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬೈರಯ್ಯ ಮತ್ತು ಜೆಡಿಎಸ್ ಬೆಂಬಲಿತ ಚಂದ್ರೋಜಿರಾವ್ ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ 12 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕುಮಾರ್ ಮತ್ತು ಬೈರಯ್ಯ ಅವರನ್ನು ಸದಸ್ಯರು, ಬೆಂಬಲಿಗರು ಅಭಿನಂದಿಸಿದರು.