ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅನೇಕರು ಮಾತನಾಡುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಅಧಿಕಾರ ಹಿಡಿದ ಕೆಲವೇ ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಆರ್ಥಿಕ ತಜ್ಞ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಅವರ ಗಟ್ಟಿ ನಿಲುವು, ಸ್ವಭಾವ ಹಾಗೂ ಗುಣಗಳಿಂದಲೇ ವಿರೋಧ ಪಕ್ಷದವರಿಂದಲೂ ಮೆಚ್ಚುಗೆ ಪಡೆದು ಧೀಮಂತ ನಾಯಕರಾಗಿದ್ದಾರೆ: ಶಾಸಕ ಎಚ್.ವೈ.ಮೇಟಿ
ಬಾಗಲಕೋಟೆ(ಆ.04): ಸಿಎಂ ಸಿದ್ದರಾಮಯ್ಯ ಅವರು ಬಡವರ, ದೀನ-ದಲಿತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುತ್ತಾರೆ ಎನ್ನುವುದಕ್ಕೆ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನವನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಹಾಲು-ಬ್ರೆಡ್ ವಿತರಿಸಿ ಮಾತನಾಡಿ, ಇಲ್ಲಿಯವರೆಗೆ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ಗಳನ್ನು ನೋಡಿದರೆ ಅವರಿಗೆ ಮಧ್ಯಮ ಹಾಗೂ ಬಡಜನರ ಮೇಲಿನ ಕಾಳಜಿ ಎಂಥದ್ದೆಂಬುದು ಗೊತ್ತಾಗುತ್ತದೆ ಎಂದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅನೇಕರು ಮಾತನಾಡುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಅಧಿಕಾರ ಹಿಡಿದ ಕೆಲವೇ ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಆರ್ಥಿಕ ತಜ್ಞ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಅವರ ಗಟ್ಟಿನಿಲುವು, ಸ್ವಭಾವ ಹಾಗೂ ಗುಣಗಳಿಂದಲೇ ವಿರೋಧ ಪಕ್ಷದವರಿಂದಲೂ ಮೆಚ್ಚುಗೆ ಪಡೆದು ಧೀಮಂತ ನಾಯಕರಾಗಿದ್ದಾರೆ ಎಂದು ಹೇಳಿದರು.
undefined
ಮದ್ಯದ ದರ ಹೆಚ್ಚಳ: ಕುಡುಕರು ತಿರುಗಿಬಿದ್ರೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ: ಕಾರಜೋಳ ವಾಗ್ದಾಳಿ
ನಾಲ್ಕೂವರೆ ದಶಕಕ್ಕಿಂತ ಹೆಚ್ಚಿನ ಕಾಲ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಅವರು ರಾಜ್ಯದ ಉದ್ದಗಲದ ಎಲ್ಲ ಮಾಹಿತಿಯನ್ನು ಹೊಂದಿದ್ದಾರೆ. ಮಾತೃಹೃದಯಿಯಾಗಿರುವ ಅವರು, ರೈತರು ಹಾಗೂ ದೀನ ದಲಿತರ ಪರವಾಗಿ ಧ್ವನಿ ಎತ್ತಿದವರು. ಹಸಿವಿನಿಂದ ರಾಜ್ಯದ ಜನ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಮೂಲಕ ರಾಜ್ಯದ ಹಸಿವನ್ನು ನೀಗಿಸಿದವರು ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಸದಾ ಬಡವರ ಬಗ್ಗೆ ಯೋಚಿಸುವ ಸಿದ್ದರಾಮಯ್ಯ ಅವರು, ನಾಡು ಕಂಡ ಧೀಮಂತ ನಾಯಕ. ಜನರ ಸೇವೆ ಮಾಡಬೇಕೆಂದೇ ರಾಜಕೀಯಕ್ಕೆ ಬಂದಿರುವ ಅವರು, ರಾಜ್ಯದ ಜನರ ಜೀವನ ಮಟ್ಟಸುಧಾರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲಿಯವರೆಗೆ ಮಂಡಿಸಿರುವ 14 ಬಜೆಟ್‌ಗಳು ರಾಜ್ಯದ ಮೇಲೆ ಹೊರೆಯಾಗಿಲ್ಲ ಎಂದರು.
ಮುಖಂಡರಾದ ಎಸ್.ಎನ್.ರಾಂಪುರ, ಮುತ್ತು ಜೋಳದ, ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ವೈ.ವೈ.ತಿಮ್ಮಾಪುರ, ರಾಜು ಮನ್ನಿಕೇರಿ ಇತರರಿದ್ದರು.
ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಜನಮೆಚ್ಚಿದ ನಾಯಕರಾದ ಸಿದ್ದರಾಮಯ್ಯ ಅವರು ಜೀವನದ 76ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದೇವರು ಅವರಿಗೆ ರಾಜ್ಯವನ್ನು ಮತ್ತಷ್ಟುಅಭಿವೃದ್ಧಿಯತ್ತ ಕೊಂಡೊಯ್ಯುವ ಶಕ್ತಿ ಕರುಣಿಸಲಿ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದ್ದಾರೆ.
ಬಾಗಲಕೋಟೆ: ಕುಡಚಿ ರೈಲುಮಾರ್ಗ 2025ರೊಳಗೆ ಪೂರ್ಣ
ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರಲಿ. ಯೋಜನೆ ಜಾರಿಯಿಂದ ಎಷ್ಟುಜನರಿಗೆ ಲಾಭವಾಗುತ್ತದೆ? ಅದಕ್ಕೆ ತಗಲುವ ಖರ್ಚು ಹಾಗೂ ಆ ಹಣವನ್ನು ಹೇಗೆ ಹೊಂದಿಸಬೇಕು? ಎಂದು ಯೋಚಿಸಿರುತ್ತಾರೆ. ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ 5 ವರ್ಷ ಸರ್ಕಾರದ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಬರದ ರೀತಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದ್ದಾರೆ.
ಭರವಸೆ ಈಡೇರಿಸಲು ಸದಾ ಸಿದ್ಧ
ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾದಾಗ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವುದನ್ನು ನಿರಾಕರಿಸಿದರೂ ಕುಗ್ಗದ ಸಿದ್ದರಾಮಯ್ಯ ಅವರು, 5 ಕೆ.ಜಿ ಅಕ್ಕಿ ಬದಲಾಗಿ ಅದಕ್ಕೆ ತಗಲುವ 172 ರು. ಹಣವನ್ನು ನೀಡಲು ಪ್ರಾರಂಭಿಸಿದರು. ಇದರಿಂದ ಕೊಟ್ಟಮಾತನ್ನು ಈಡೇರಿಸಲು ತಾವು ಸದಾ ಸಿದ್ಧ ಎಂದು ತೋರಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.