ಅಕ್ಕಿ ಕೊಟ್ಟಿದ್ದು ಮೋದಿ, ಸಿದ್ದರಾಮಯ್ಯ ಕೊಟ್ಟಿದ್ದು ತಟ್ಟಿನ ಚೀಲ ಮಾತ್ರ: ಗೋವಿಂದ ಕಾರಜೋಳ ವಾಗ್ದಾಳಿ

By Ravi JanekalFirst Published Apr 8, 2024, 8:24 PM IST
Highlights

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದಕರನ್ನು ಹುಟ್ಟು ಹಾಕಿತು. ದುರಂತವೆಂದರೆ ಅದೇ ಭಯೋತ್ಪಾದಕರಿಂದ ಇಂದಿರಾ ಗಾಂಧಿ ಹತ್ಯೆಯಾಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದಕರು ಬಿಲ ಸೇರಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ (ಏ.8): ರಾಜ್ಯದ ಜನರಿಗೆ ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿ. ಸಿದ್ದರಾಮಯ್ಯ ಕೊಟ್ಟಿದ್ದು ಬರೀ ತಟ್ಟಿನ ಚೀಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೊಳ ವಾಗ್ದಾಳಿ ನಡೆಸಿದರು.

ಇಂದು ಚಿತ್ರದುರ್ಗದ ನಗರದ ಉಮಾಪತಿ ಸಭಾಂಗಣದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಕಾರಜೋಳ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದಕರನ್ನು ಹುಟ್ಟು ಹಾಕಿತು. ದುರಂತವೆಂದರೆ ಅದೇ ಭಯೋತ್ಪಾದಕರಿಂದ ಇಂದಿರಾ ಗಾಂಧಿ ಹತ್ಯೆಯಾಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದಕರು ಬಿಲ ಸೇರಿದ್ದಾರೆ ಎಂದರು.

ಸಿದ್ದರಾಮಯ್ಯ ಅಭಿವೃದ್ಧಿ ಇಲ್ಲದ ಸೌಂಡ್ ಬಾಕ್ಸ್ : ಅಶ್ವತ್ಥ ನಾರಾಯಣಗೌಡ ವ್ಯಂಗ್ಯ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಕಳೆದಿದೆ. ಆಗಲೇ ಲಂಚದ ಹಣಕ್ಕಾಗಿ ರಣಹದ್ದುಗಳಂತೆ ಕಾದಾಡುತ್ತಿದ್ದಾರೆ. ನೀರಾವರಿ, ರಸ್ತೆ, ಶಾಲಾ‌ ಕಟ್ಟಡ ನಿರ್ಮಾಣ ಕಾಮಗಾರಿಗಳಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕಾಂಗ್ರೆಸ್ ಶಾಸಕರು ಹಳ್ಳಿಗಳಿಗೆ ಹೋಗಲು ಅಂಜುತ್ತಿದ್ದಾರೆ. ಐದು ಗ್ಯಾರಂಟಿಗಳನ್ನ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳ್ತಾರೆ. ಯಾವುದೇ ಅಭಿವೃದ್ಧಿ ಮಾಡದಿದ್ದರೂ ನುಡಿದಂತೆ ನಡೆದಿದ್ದೇವೆ ಅನ್ನುತ್ತಾರೆ. ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಮತಹಾಕಿದರೆ ನೀರಿಗೆ ಹಾಕಿದಂತೆ ಎಂದು ವ್ಯಂಗ್ಯ ಮಾಡಿದರು.

ಮೋದಿ ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ವಾ?: ಸಚಿವ ಶಿವರಾಜ ತಂಗಡಗಿ

ಈ ಚುನಾವಣೆಯಲ್ಲಿ ಕಾಂಗ್ರೆಸ್ ದೇಶದಲ್ಲಿ 35-40 ಸ್ಥಾನ ಮಾತ್ರ ಗೆಲ್ಲಲಿದೆ. ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಎಂದಾಗ ಇಂಡಿಯಾ ಒಕ್ಕೂಟದ ಉಳಿದ ಪಕ್ಷದವರು ಹೊರನಡೆದರು. ರಸ್ತೆಯಲ್ಲಿ ಓಡಾಡುವ ಹುಚ್ಚ ಸಹ ರಾಹುಲ್ ಪ್ರಧಾನಿಯಾಗಲಿ ಅನ್ನೊಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಆಗುವಂತಹ ಸಾಮಾರ್ಥ್ಯವಿರುವವರೇ ಇಲ್ಲ ಎಂದರು. ಹೀಗಾಗಿ ಪ್ರತಿಬಾರಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳ್ತಾನೆ ಇರ್ತಾರೆ. ರಾಹುಲ್ ಗಾಂಧಿ ಯಾವತ್ತೂ ಪ್ರಧಾನಿಯಾಗೊಲ್ಲ. ಈ ಬಾರಿಯೂ ಬಿಜೆಪಿ ಗೆಲ್ಲುತ್ತದೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!