Karnataka election 2023: ತಿಪ್ಪಾರೆಡ್ಡಿ ರೋಡ್‌ ಶೋಗೆ ಚಿತ್ರದುರ್ಗ ಕೇಸರಿಮಯ!

Published : Apr 21, 2023, 05:50 AM IST
Karnataka election 2023: ತಿಪ್ಪಾರೆಡ್ಡಿ ರೋಡ್‌ ಶೋಗೆ ಚಿತ್ರದುರ್ಗ ಕೇಸರಿಮಯ!

ಸಾರಾಂಶ

ತ್ರದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ತಿಪ್ಪಾರೆಡ್ಡಿ ಗುರುವಾರ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದುವರೆಗೂ ನಾಮಪತ್ರ ಸಲ್ಲಿಸಿದವರಿಗಿಂತ ಅಧಿಕ ಪ್ರಮಾಣದ ಜನ ಜಮಾವಣೆಯನ್ನು ತಿಪ್ಪಾರೆಡ್ಡಿ ಬೆಂಬಲಿಗರು ದಾಖಲು ಮಾಡಿದರು.

ಚಿತ್ರದುರ್ಗ (ಏ.21) : ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ತಿಪ್ಪಾರೆಡ್ಡಿ ಗುರುವಾರ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದುವರೆಗೂ ನಾಮಪತ್ರ ಸಲ್ಲಿಸಿದವರಿಗಿಂತ ಅಧಿಕ ಪ್ರಮಾಣದ ಜನ ಜಮಾವಣೆಯನ್ನು ತಿಪ್ಪಾರೆಡ್ಡಿ ಬೆಂಬಲಿಗರು ದಾಖಲು ಮಾಡಿದರು. ನೆತ್ತಿ ಮೇಲೆ ಕೆಂಡ ಸುರಿದಂತೆ ಭಾಸವಾಗುವ ಬಿಸಿಲ ನಡುವೆಯೂ ಕೇಸರಿ ಶಾಲು ಹಾಗೂ ಬಿಜೆಪಿ ಬಾವುಟ ಹಿಡಿದು ಬೆಂಬಲಿಗರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜೆಎಂಐಟಿ ವೃತ್ತ ಸಮೀಪದ ತಮ್ಮ ನಿವಾಸದಿಂದ ತೆರೆದ ವಾಹನದಲ್ಲಿ ಬೆಳಗ್ಗೆ 11 ಗಂಟೆಗೆ ರೋಡ್‌ ಶೋ ಆರಂಭವಾಯಿತು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಸಂಸದ ಜನಾರ್ದನ ಸ್ವಾಮಿ ಸೇರಿದಂತೆ ಹಲವು ಮುಖಂಡರು ರೋಡ್‌ ಶೋ ನಲ್ಲಿ ಪಾಲ್ಗೊಂಡರು. ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಕಿತ್ತೂರು ರಾಣಿ ಚೆನ್ನಮ್‌ ಸರ್ಕಲ್‌, ಪ್ರವಾಸಿ ಮಂದಿರದವರೆಗೆ ರೋಡ್‌ಶೋ ನಡೆಯಿತು. ನಂತರ ತಿಪ್ಪಾರೆಡ್ಡಿ ವಿಪ ಸದಸ್ಯ ಕೆ.ಎಸ್‌.ನವೀನ್‌ ರೊಂದಿಗೆ ತೆರಳಿ ತಹಸೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

KARNATAKA ELECTION 2023: ಚಂದ್ರಪ್ಪ ನಾಮಪತ್ರ ಸಲ್ಲಿಕೆಗೆ ಕೇಸರಿಯಲ್ಲಿ ಮಿಂದ ಹೊಳಲ್ಕೆರೆ!

50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ:

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ತಿಪ್ಪಾರೆಡ್ಡಿ, ಆರು ಬಾರಿ ನನ್ನನ್ನು ಚಿತ್ರದುರ್ಗದ ಜನರು ಗೆಲ್ಲಿಸಿದ್ದಾರೆ. ಇದು ನನ್ನ 7ನೇ ಚುನಾವಣೆ. ಇಷ್ಟುದೊಡ್ಡ ಪ್ರಮಾಣದ ಜನ ಹಿಂದೆಂ ದೂ ಸೇರಿರಲಿಲ್ಲ. ತಾರತಮ್ಯ ಮಾಡದೇ ಎಲ್ಲ ಸಮುದಾಯಗಳಿಗೆ ಕೆಲಸ ಮಾಡಿದ್ದೇನೆ. ಈ ಬಾರಿಯೂ ಐವತ್ತು ಸಾವಿರ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಈ ಬಾರಿ ಟಿಕೆಟ್‌ ಹಂಚುÜವಾಗ ಗುಜರಾತ್‌ ಮಾದರಿ ಅನುಸರಿಸಲಾಗುತ್ತದೆ. 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್‌ ಇಲ್ಲವೆಂಬ ಮಾತುಗಳು ಕೇಳಿ ಬಂದಿತ್ತು. ಅನೇಕ ಕ್ಷೇತ್ರ, ರಾಜ್ಯಗಳಲ್ಲಿ ವಯಸ್ಸಿನ ನಿರ್ಬಂಧ ಇದ್ದರೂ ನನಗೆ ಟಿಕೆಚ್‌ ಕೊಟ್ಟಿದ್ದಾರೆ. ಗುಜರಾತ್‌ನಲ್ಲಿ 75 ದಾಟಿದ ಇಬ್ಬರಿಗೆ ಅವಕಾಶ ಕೊಟ್ಟಿದ್ದಾರೆ. ಪಕ್ಷದ ಮುಖಂಡರು ನನ್ನ ಮೇಲೆ ಇಟ್ಟಿರುವ ವಿಶ್ವಾಸದಿಂದ ಈಗ ಅವಕಾಶ ಸಿಕ್ಕಿದೆ ಎಂದರು.

ಕಳೆದ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಬಹುಮತ ಸಾಧ್ಯವಾಗದೆ ಅಧಿಕಾರ ಹಿಡಿಯುವುದಕ್ಕೆ ಬಹಳ ಕಷ್ಟಪಡಬೇಕಾಯಿತು. ಆದರೆ ಈ ಸಲ 130 ಸ್ಥಾನ ಬರಬೇಕು. ಈ ನಿಟ್ಟಿನ ಎಲ್ಲ ಪ್ರಯತ್ನಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಅಕ್ಕಿ, ಲಸಿಕೆ, ರೈತರಿಗೆ ಕಿಸಾನ್‌ ಸಮ್ಮಾನ್‌ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಮೋದಿ ಕೊಟ್ಟಿದ್ದಾರೆ ಎಂದರು.

ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಿರಿ: ಎಚ್‌.ಆಂಜನೇಯ

ಜಿಲ್ಲೆಯಲ್ಲಿ ಆರು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕು. ಪೂರ್ಣ ಪ್ರಮಾಣದ ಬಹುಮತ ಸಿಕ್ಕಿದರೆ ಅತ್ಯುತ್ತಮ ಆಡಳಿತ ನೀಡಲು ಸಾಧ್ಯ ಆಗಲಿದೆ. ರಾಜ್ಯದ ಜನತೆ ಅತಂತ್ರ ವಿಧಾನಸಭೆ ಆಗಿ ಸಂಕಷ್ಟಸನ್ನಿವೇಶಗಳ ನೋಡಿದ್ದಾರೆ. ಹಾಗಾಗಿ ಈ ಬಾರಿ ಪೂರ್ಣ ಪ್ರಮಾಣದ ಬಹುಮತವನ್ನು ಬಿಜೆಪಿಗೆ ನೀಡಲಿದ್ದಾರೆ ಎಂದು ತಿಪ್ಪಾರೆಡ್ಡಿ ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!