* ನಾವು ಆಜನ್ ಪರ ಎಂದ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ಕಿಡಿ
* ಕಾಂಗ್ರೆಸ್ ಯಾವತ್ತೂ ಹಿಂದೂಗಳ ಪರ ಇಲ್ಲ
* ಇದು ಮತೀಯ ವಾದದ ಓಲೈಕೆ ಅಲ್ಲದೆ ಮತ್ತೇನು ಅಲ್ಲ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಮೇ.12) : ಮಸೀದಿ- ದೇವಾಲಯಗಳಲ್ಲಿ ಮೈಕ್ ಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ನೋಡಿದರೆ ಅವರು ಈ ದೇಶದ ನ್ಯಾಯಾಲಯದ ತೀರ್ಪಿಗಿಂತ ತಮ್ಮ ಮತ ಬ್ಯಾಂಕ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು, ಮತೀಯವಾದದ ಓಲೈಕೆ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತಾಡಿದ ಸಿ.ಟಿ ರವಿ, ಎಷ್ಟು ಡೆಸಿಬೆಲ್ನಲ್ಲಿ ಧ್ವನಿವರ್ಧಕ ಬಳಕೆ ಮಾಡಬೇಕು, ಯಾವ ಸಮಯದಿಂದ ಎಷ್ಟು ಸಮಯದವರೆಗೆ ಅವಕಾಶ ನೀಡಬೇಕು ಎಂಬುದನ್ನು ನಿಯಮದಲ್ಲಿ ಹೇಳಲಾಗಿದೆ. ಆದರೆ, ಅವರು ಏಕಾಏಕಿಯಾಗಿ ತಾವು ಮುಸ್ಲಿಂ ಪರವಾಗಿದ್ದೇನೆ. ಹಿಂದೂಗಳ ಪರವಾಗಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಯಾವತ್ತೂ ಹಿಂದುಗಳ ಪರವಾಗಿಲ್ಲ. ಅವರು ಮುಸ್ಲಿಂ ಪರವಾಗಿದ್ದರಿಂದಲೇ ದೇಶ ವಿಭಜನೆ ಆಯ್ತು, ಅವರು ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಎಂದರು.
ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ
ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿ
ಕಾಂಗ್ರೆಸ್ ಪಕ್ಷದ್ದು, ಮತೀಯ ವಾದದ ಓಲೈಕೆ ರಾಜಕಾರಣ, ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಮತೀಯ ಅಧಾರದಲ್ಲಿ ತಾರತಮ್ಯ ಮಾಡುವುದನ್ನು ಸಮರ್ಥಿಸಿಲ್ಲ, ಅದಕ್ಕೆ ವಿರುದ್ಧವಾಗಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಈ ಮಹಾನ್ ಭಾವರು, ಮತೀಯ ವಾದದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಸಂವಿಧಾನಕ್ಕೆ, ಸುಪ್ರೀಂ ಕೋರ್ಟ್ನ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಓಲೈಕೆ ರಾಜಕಾರಣಕ್ಕೆ ಈ ರಾಜ್ಯ, ದೇಶದ ಜನ ಆಗಾಗ ಉತ್ತರ ಕೊಟ್ಟಿದ್ದಾರೆ. ಈಗಲೂ ಉತ್ತರ ಕೊಡ್ತಾರೆ, ಭಜನೆ ಮಾಡುವ ಜನ ಕಾಂಗ್ರೆಸ್ನವರಿಗೆ ಭಯೋತ್ಪಾದಕರಂತೆ ಕಾಣುತ್ತಾರೆ. ಅವರದೆ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿಸಿದವರು ಬ್ರದರ್ಸ್ ತರ ಕಾಣುತ್ತಾರೆ. ಇದು, ಆ ಪಕ್ಷ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.ಡಿಕೆಶಿವಕುಮಾರ್ ಎಂ ಬಿ ಪಾಟೀಲ್ ಶೀತಲ ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ ಒಂದೇ ವೇದಿಕೆ, ಭೇಟಿ ಆಗಿದ್ದಾರೆ ಎಂದ ತಕ್ಷಣ ಮೊರೆಹೋಗಿದ್ದರು ಅನ್ನೋ ಪರಿಸ್ಥಿತಿಯನ್ನು ಇರುವುದಿಲ್ಲ, ಕಾಂಗ್ರೇಸ್ ಅಂತರೀಕ ವಿಚಾರಕ್ಕೆ ನಾವು ಮೂಗುತೋರಿಸುವುದಕ್ಕೆ ಹೋಗುವುದಿಲ್ಲ. ಅದು ಆ ಕಾಂಗ್ರೆಸ್ ಪಕ್ಷದ ಅಂತರೀಕ ಕಲಹ, , ಅವರ ಜಗಳವನ್ನು ಅವರಿಗೆ ಬಿಟ್ಟಿದ್ದು ಎಂದರು.