ಸೋಮವಾರ ನಾಮಪತ್ರ ಸಲ್ಲಿಕೆಗೂ ಭಾನುವಾರ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠಕ್ಕೆ ದಿಢೀರ್ ಭೇಟಿ ನೀಡಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಇಂಚಗೇರಿ ಗುರುಗಳ ಆಶಿರ್ವಾದ ಪಡೆದರು.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.14): ಸೋಮವಾರ ನಾಮಪತ್ರ ಸಲ್ಲಿಕೆಗೂ ಭಾನುವಾರ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠಕ್ಕೆ ದಿಢೀರ್ ಭೇಟಿ ನೀಡಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಇಂಚಗೇರಿ ಗುರುಗಳ ಆಶಿರ್ವಾದ ಪಡೆದರು.
ಶ್ರೀಮಠದ ಆಶೀರ್ವಾದ ಪಡೆಯಲು ಬಂದಿರುವೆ: ಇಂಚಗೇರಿ ಮಠಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿದರು. ನಮ್ಮ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಇಂಚಗೇರಿ ಮಠಗಳಿವೆ. ಬಹಳ ದಿನಗಳಿಂದ ಈ ಸಂಪ್ರದಾಯದ ಮಠಕ್ಕೆ ಭೇಟಿ ನೀಡಬೇಕು ಎನ್ನುವ ಬಯಕೆ ಇತ್ತು, ಇವತ್ತು ಕೂಡಿ ಬಂದಿದೆ. ಸೋಮವಾರ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಅದಕ್ಕು ಮುನ್ನ ಇಂಚಗೇರಿ ಮೂಲ ಮಠದ ಗುರುಗಳ ದರ್ಶನ ಪಡೆಯುತ್ತಿದ್ದೇನೆ. ಇಲ್ಲಿ ದರ್ಶನ ಪಡೆದು ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಚಿಕ್ಕೋಡಿಯಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ. ಮೋದಿಯವರು ಮಾಡಿದ ಕೆಲಸ, ನಾನು ಕೋವಿಡ್ ನಲ್ಲಿ ಮಾಡಿದ ಕೆಲಸ ನನ್ನ ಕೈ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರೇ ನೀವು 10 ವರ್ಷದಲ್ಲಿ ಮಾಡಿದ ಕರ್ಮಕಾಂಡ ಜನರ ಮುಂದೆ ಹೇಳಿ: ಸಚಿವ ಸಂತೋಷ್ ಲಾಡ್
ಚಿಕ್ಕೋಡಿಯಲ್ಲಿ ಪುನರ್ ಆಯ್ಕೆ ನಿಶ್ಚಿತ: ಇನ್ನು ಮಗಳನ್ನ ಗೆಲ್ಲಿಸಲು ಸತೀಶ ಜಾರಕಿಹೊಳಿ ಓಡಾಟ ವಿಚಾರವಾಗಿ, ಅದು ಸ್ವಾಭಾವಿಕ, ತಮ್ಮ ತಮ್ಮವರನ್ನ ಗೆಲ್ಲಿಸಲು ಓಡಾಡೋದು ಸಹಜ. ನಮ್ಮ ಗೆಲುವು ನಿಶ್ಚಿತ ಎಂದರು.
ಉತ್ತಮ ಪಾಟೀಲ್ ಜಾರಕಿಹೊಳಿ ಭೇಟಿ ಎಫೆಕ್ಟ್ ಆಗಲ್ಲ: ಉತ್ತಮ ಪಾಟೀಲ್ ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಜೊಲ್ಲೆ ಪ್ರತಿಕ್ರಿಯಿಸಿ, ಉತ್ತಮ ಪಾಟೀಲ್ ಸತೀಶ್ ಜಾರಕಿಹೊಳಿ ಜೊತೆ ಹೊಂದಾಣಿಕೆಯಿಂದ ನಮಗೆ ಯಾವುದೇ ಎಫೆಕ್ಟ್ ಇಲ್ಲ. ರಾಜಕೀಯದಲ್ಲಿ ಇಬ್ಬರು ಆಕಡೆಗೆ ಹೋಗೋದು ಈಕಡಗೇ ಬರೋದು ಸಾಮಾನ್ಯ. ಉತ್ತಮ ಪಾಟೀಲ್ ಈಗಾಗಲೇ ನಮ್ಮ ವಿರೋಧಿ ಪಾಳಯದಲ್ಲೆ ಇದ್ದಾರೆ. ಉತ್ತಮ ಪಾಟೀಲರಿಂದ ನಮಗೆ ಲಾಭ ನಷ್ಟ ಎರಡು ಇಲ್ಲ ಎಂದರು.
ನಮ್ಮ ಮಕ್ಕಳನ್ನು ದತ್ತು ಪಡೆದು ಬಿಜೆಪಿಗರು ಕಳೆದ ಬಾರಿ ಸರ್ಕಾರ ಮಾಡಿದ್ರು: ಸಚಿವ ಶಿವಾನಂದ ಪಾಟೀಲ
ಕ್ಯಾಂಡಿಡೆಟ್ ಸಿಗದೆ ಮಕ್ಕಳನ್ನ ಎಲೆಕ್ಷನ್ ಇಳಿಸಿದ್ದಾರೆ, ಕೈ ಸಚಿವರಿಗೆ ಟಾಂಗ್: ಚಿಕ್ಕೋಡಿ ಲೋಕಸಭೆಯ 8 ಮತಕ್ಷೇತ್ರಗಳಲ್ಲಿ ನಾವು ಲೀಡ್ ಆಗುತ್ತೇವೆ. ವಿರೋಧಿಗಳಿಂದ ಹೆಚ್ಚಾಗಿಯೇ ನಾವು ರಣತಂತ್ರ ಹೆಣೆಯುತ್ತಿದ್ದೇವೆ. ಈಗ ಹೇಳಲ್ಲ, ನಾವು ರಣತಂತ್ರ ಹೂಡಿದ್ದೇವೆ ಎಂದರು. ಮಕ್ಕಳನ್ನ ಕಣಕ್ಕಿಳಿಸಿದ ಕಾಂಗ್ರೆಸ್ ಸಚಿವರು ವಿಚಾರವಾಗಿ ಜೊಲ್ಲೆ ಮಾತನಾಡಿ, ಅವರಿಗೆ ಕ್ಯಾಂಡಿಡೆಟ್ ಸಿಕ್ಕಿಲ್ಲ ಅದಕ್ಕೆ ಮಕ್ಕಳನ್ನ ಕಣಕ್ಕಿಳಿಸಿದ್ದಾರೆ. ಒತ್ತಾಯ ಪೂರ್ವಕವಾಗಿ ಮಕ್ಕಳನ್ನ ಕಣಕ್ಕೆ ಇಳಿಸಿದ್ದಾರೆ ಅಂತ ಎನಿಸ್ತಿದೆ. ಮಕ್ಕಳನ್ನ ಯಾಕೆ ಕಣಕ್ಕೆ ಇಳಿಸಿದರು ಅನ್ನೋದನ್ನು ಸಿಎಂ, ಡಿಸಿಎಂ ಬಳಿ ಕೇಳಿ ಎಂದರು. ಚಿಕ್ಕೋಡಿಯಲ್ಲಿ ಮೋದಿ ಅಲೆ ಇದೆ. ನಾನು ಮಾಡಿದ ಕೆಲಸ ಕಾರ್ಯಗಳು ಗೆಲುವು ತಂದು ಕೊಡಲಿದೆ ಎಂದು ಅಣ್ಣಾಸಾಹೇಬ್ ಜೊಲ್ಲೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.