ಮುಸ್ಲಿಂರಿಗೆ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳಬೇಡಿ, ಮುಸ್ಲಿಂರು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಲಿ ಅಂತಾರೆ. ದೇಶ ವಿಭಜನೆ ಆಗೋಕ್ಕೆ ನೆಹರು ಕಾರಣ ಅಂತ ಟೀಕಿಸುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿ (ಏ.14): ಮುಸ್ಲಿಂರಿಗೆ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳಬೇಡಿ, ಮುಸ್ಲಿಂರು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಲಿ ಅಂತಾರೆ. ದೇಶ ವಿಭಜನೆ ಆಗೋಕ್ಕೆ ನೆಹರು ಕಾರಣ ಅಂತ ಟೀಕಿಸುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಬಿಜೆಪಿಯವರು ನಹರು ಅವರಿಗೆ ಧನ್ಯವಾದ ಹೇಳಬೇಕು. ಅಲ್ಲಿ ಹೋಗುವವರು ಅಲ್ಲಿಗೆ ಹೋದರು. ಇಲ್ಲಿ ಉಳಿದವರು ನಮ್ಮವರು. ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳಬೇಡಿ. ಚುನಾವಣೆ ಬಂದಿದೆ ಅಂತ ಮುಸ್ಲಿಂ ರನ್ನ ಗುರಿ ಮಾಡಿ ಮತ ಕೇಳಬೇಡಿ. ಉಳುವವನೆ ಭೂ ಒಡೆಯ ಕಾಯ್ದೆ ತಂದವರು ಇಂದಿರಾ ಗಾಂಧಿ. ಬ್ಯಾಂಕ್ ರಾಷ್ಟೀಕರಣ ಮಾಡಿದೆವು. ಮೋದಿ ಹುಟ್ಟಿದಾಗ ದೇಶದ ಬಜೆಟ್190 ಕೋಟಿ ಆಗಿತ್ತು ಎಂದರು.
ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಅಂತ ಕೇಳಬೇಡಿ. ನೀವು ಹತ್ತು ವರ್ಷದಲ್ಲಿ ಮಾಡಿದ ಕರ್ಮ ಕಾಂಡ ಜನರ ಮುಂದೆ ಹೇಳಿ, ಕಳಸಾ ಬಂಡೋರಿ ಹೋರಾಟ ನಡೆಯಿತು. ಮೋದಿ ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸಿದ್ದೇವೆ ಅಂತಾರೆ. ಆದ್ರೆ ಮಹದಾಯಿ ಯೋಜನೆಗೆ ಇರೋ ಅಡೆತಡೆ ನೀವಾರಿಸಲು ಆಗಿಲ್ಲ. ಗೋವಾ, ಮಹಾರಾಷ್ಟ್ರ, ಕರ್ನಾಟಕ ದಲ್ಲಿಯೂ ಸರ್ಕಾರಗಳಿದ್ದವು. ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿಕೊಂಡಿತು. ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಿಸಿತು. ಆದ್ರೆ ಪರಿಸರ ಕ್ಲಿಯರೆನ್ಸ್ ಕೊಡಿಸಲು ಆಗಿಲ್ಲ. ಮೋದಿ ಅವರೇ ಸುಳ್ಳು ಹೇಳೋದನ್ನ ನಿಲ್ಲಿಸಿ ಎಂದು ಲಾಡ್ ವಾಗ್ದಾಳಿ ನಡೆಸಿದರು.
ಹಿಂದೂ ಕೊಡಿಫಿಕೇಶನ್ ತಂದವರು ಅಂಬೇಡ್ಕರ್: ಅಂಬೇಡ್ಕರ್ ಕೇವಲ ಎಸ್.ಸಿ. ಎಸ್.ಟಿ ಜನಾಂಗಕ್ಕೆ ಸೀಮಿತವಾಗಿರಲಿಲ್ಲ. ಸಾಹು ಮಹಾರಾಜ್ ರು ಶೇ 50 ರಷ್ಟು ಮೀಸಲಾತಿ ಕೊಟ್ಟ ಮೊದಲಿಗರು. ಬಸವಣ್ಣ ಅವರು ಸಮಾನತೆಗಾಗಿ ಶ್ರಮಿಸಿದ ಕ್ರಾಂತಿಕಾರಿ ನಾಯಕ. ಬಸವಣ್ಣನವರ ಹಾದಿಯಲ್ಲಿ ಅಂಬೇಡ್ಕರ್ ನಡೆದಿದ್ದಾರೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತ ಮೋದಿ ಕೇಳ್ತಾರೆ. ಮೋದಿ ಹುಟ್ಟಿದ ವರ್ಷದಲ್ಲಿಯೇ ಈ ದೇಶಕ್ಕೆ ಸಂವಿಧಾನ ಜಾರಿಗೆ ಬಂತು ಎಂದರು.
ಸಂವಿಧಾನ ಮುಟ್ಟಿದರೆ ನೀವು ಸುಟ್ಟು ಭಸ್ಮ ಆಗ್ತೀರಿ: ಬಿಜೆಪಿ ನಾಯಕರಿಗೆ ಪ್ರಸಾದ್ ಅಬ್ಬಯ್ಯ ಎಚ್ಚರಿಕೆ
ಬಾಬಾ ಸಾಹೇಬ್ ರ ಬಗ್ಗೆ ಮೋದಿ ಓದಿ ಅರ್ಥ ಮಾಡಿಕೊಳ್ಳಲಿ. ಹಿಂದೂ ಕೊಡಿಫಿಕೇಶನ್ ತಂದವರು ಅಂಬೇಡ್ಕರ್. ಹಿಂದೂ, ಹಿಂದುತ್ವ ದ ಬಗ್ಗೆ ಮಾತನಾಡುವವರೇ ಹಿಂದೂ ಕೊಡಿಫಿಕೇಶನ್ ವಿರೋಧಿಸಿದ್ರು. ಹಿಂದೂ ಮಹಾಸಭಾ ಹಿಂದೂ ಕೊಡಿಫಿಕೇಶನ್ ವಿರೋಧಿಸಿತು. ಇದ್ರ ಬಗ್ಗೆ ಬಿಜೆಪಿಯವರು ಮಾತನಾಡೋಲ್ಲ. ಬಿಜೆಪಿ ಮತ್ತು ಆರ್.ಎಸ್.ಎಸ್ ಎಂದು ಅಂಬೇಡ್ಕರ್‌ರನ್ನು ಒಪ್ಪಿಲ್ಲ ಎಂದು ವಿಶ್ವ ಮಾನವರ ಸಮಾವೇಶದಲ್ಲಿ ವಿಶ್ವ ಮಾನವರ ಸಮಾವೇಶದಲ್ಲಿ ಸಂತೋಷ್ ಲಾಡ್ ತಿಳಿಸಿದರು.