ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಎರಡೂವರೆ ವರ್ಷದ ಎರಡನೇ ಅವಧಿಗೆ ಚಿಕ್ಕಮಗಳೂರು (ಗುರುವಾರ )ಚುನಾವಣೆ ನಡೆಯಲಿದ್ದು, ಗಾದಿ ಹಿಡಿಯುವವರಾರು ಎನ್ನುವುದು ತೀವ್ರ ಕುತೂಹಲಕ್ಕೆಡೆಮಾಡಿದೆ. ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಿ.ಟಿ ರವಿ ವರ್ಸಸ್ ಕಾಂಗ್ರೆಸ್ ಶಾಸಕ ಹೆಚ್ ಡಿ ತಮ್ಮಯ್ಯ ನಡುವಿನ ಪ್ರತಿಪ್ಠೆಗಾಗಿ ಫೈಟ್ ಎಂದೇ ಬಿಂಬಿತವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.21): ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಎರಡೂವರೆ ವರ್ಷದ ಎರಡನೇ ಅವಧಿಗೆ ಚಿಕ್ಕಮಗಳೂರು (ಗುರುವಾರ )ಚುನಾವಣೆ ನಡೆಯಲಿದ್ದು, ಗಾದಿ ಹಿಡಿಯುವವರಾರು ಎನ್ನುವುದು ತೀವ್ರ ಕುತೂಹಲಕ್ಕೆಡೆಮಾಡಿದೆ. ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಿ.ಟಿ ರವಿ ವರ್ಸಸ್ ಕಾಂಗ್ರೆಸ್ ಶಾಸಕ ಹೆಚ್ ಡಿ ತಮ್ಮಯ್ಯ ನಡುವಿನ ಪ್ರತಿಪ್ಠೆಗಾಗಿ ಫೈಟ್ ಎಂದೇ ಬಿಂಬಿತವಾಗಿದೆ.
ಮೈತ್ರಿಕೂಟಕ್ಕೆ ಅಧಿಕಾರದ ಹಾದಿ ಸುಗಮ : ತೆರೆಮರೆಯಲ್ಲಿ ಕೈ ಪ್ರಯತ್ನ
undefined
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಬಲಾ ಬಲವನ್ನು ಗಮನಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಅಧಿಕಾರದ ಹಾದಿ ಸುಗಮವಾಗಿದೆ. ಆದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಹಂತದ ಬೆಳವಣಿಗೆಗಳು ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿವೆ.ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ನಗರಸಭೆಗೂ ವಿಸ್ತರಿಸಲು ಪಕ್ಷದ ಮುಖಂಡರು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಗರಸಭೆ ಸದಸ್ಯರು ಒಟ್ಟಿಗೆ ಪ್ರವಾಸ ತೆರಳಿದ್ದು, ತಡರಾತ್ರಿ ನಗರಕ್ಕಾಗಮಿಸಿಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ನ ಸದಸ್ಯರೂ ಸಹ ಪ್ರವಾಸಕ್ಕೆ ತೆರಳಿದ್ದು, ಮ್ಯತ್ರಿ ಕೂಟಕ್ಕೆ ಸೆಡ್ಡು ಹೊಡೆಯಲು ತಂತ್ರಗಳನ್ನು ಹೆಣೆಯುತ್ತಿದ್ದಾರೆ.ಈ ನಡುವೆ ಬಿಜೆಪಿಯ ಇಬ್ಬರು ಮಹಿಳಾ ಸದಸ್ಯರು ಒಂದು ವಾರದಿಂದ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಕಾಂಗ್ರೆಸ್ ಪರ ವಾಲಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಅವರೊಂದಿಗೆ ಪಕ್ಷದ ತೀರ್ಮಾನ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರೂ ಕಾಂಗ್ರೆಸ್ ಪರವಾಗಿ ಮತ ಹಾಕುವ ಸಾಧ್ಯತೆಗಳಿವೆ ಅದರೊಂದಿಗೆ ಒಬ್ಬರು ಎಸ್ಡಿಪಿಐ ಸದಸ್ಯರ ಬೆಂಬಲ ಕಾಂಗ್ರೆಸ್ಗಿದೆ. ಶಾಸಕ ಎಚ್.ಡಿ.ತಮ್ಮಯ್ಯ ಮತವೂ ಸೇರಿ ಕಾಂಗ್ರೆಸ್ ಸಂಖ್ಯಾಬಲ 17 ಆಗುತ್ತದೆ.
ಗೃಹ ಜ್ಯೋತಿ ಯೋಜನೆಯ ವಿದ್ಯುತ್ ಕದ್ದ ಕಾಂಗ್ರೆಸ್ ನಾಯಕಿ; 1 ಲಕ್ಷ ರೂ. ದಂಡ ವಿಧಿಸಿದ ಮೆಸ್ಕಾಂ!
ಮೈತ್ರಿ ಪಕ್ಷಕ್ಕೆ ಅಧಿಕಾರ :
ಇತ್ತ 18 ಸಂಖ್ಯಾ ಬಲ ಹೊಂದಿರುವ ಬಿಜೆಪಿಗೆ ಮೂರು ಮಂದಿ ಕೈಕೊಟ್ಟರೂ ಇಬ್ಬರು ಜೆಡಿಎಸ್, ಒಬ್ಬರು ಪಕ್ಷೇತರರ ಬೆಂಬಲ ಇದೆ. ಅವರೊಂದಿಗೆ ಮೂರು ಜೆಡಿಎಸ್ನ ಎಸ್.ಎಲ್.ಬೋಜೇಗೌಡ, ಬಿಜೆಪಿಯ ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್ ಸೇರಿ ಮೂರು ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಮತವೂ ಇರವುದರಿಂದ ಬಿಜೆಪಿ ಒಟ್ಟು ಸಂಖ್ಯೆ 22 ಆಗುತ್ತದೆ. ಈ ಎಲ್ಲಾ ಲೆಕ್ಕಾಚಾರಗಳ ಪ್ರಕಾರ ಬಿಜೆಪಿ-ಜೆಡಿಎಸ್ ಮ್ಯತ್ರಿಕೂಟ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಬಹುದು.
ಯಾರಿಗೆ ಅದೃಷ್ಠ...
ಬಿಜೆಪಿ-ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತ ಎನ್ನುವ ಅಭಿಪ್ರಾಯಗಳ ನಡುವೆ ಅಧ್ಯಕ್ಷ-ಉಪಾದ್ಯಕ್ಷರಾಗುವ ಅದೃಷ್ಟ ಯಾರದ್ದು ಎನ್ನುವ ಕುತೂಹಲಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.ಎರಡೂವರೆ ವರ್ಷ ಅವಧಿಯನ್ನು ಮೂರು ಅವಧಿಗೆ ಹಂಚಿಕೆ ಮಾಡಿ ಎರಡು ಅವಧಿಗೆ ಬಿಜೆಪಿ ಹಾಗೂ ಮತ್ತೊಂದು ಅವಧಿಗೆ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರು ಈಗಾಗಲೇ ತೀರ್ಮಾನಕ್ಕೆ ಬಂದಿದ್ದಾರೆ.ಆದರೆ ಮೊದಲ ಅವಧಿಗೆ ಯಾರು ಅದ್ಯಕ್ಷ ಉಪಾಧ್ಯಕ್ಷರು ಎನ್ನುವುದು ಗುರುವಾರ ರಾತ್ರಿವರೆಗೂ ಅಂತಿಮಗೊಂಡಿಲ್ಲ. ನಾಳೆ (ಗುರುವಾರ )ನಡೆಯುವ ಚುನಾವಣೆಗೆ ಕೆಲವು ಗಂಟೆಗಳ ಮೊದಲು ಎರಡೂ ಪಕ್ಷದ ಮುಖಂಡರು ಸೇರಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.ಈ ನಡುವೆ ಬಿಜೆಪಿಗೆ ಮೊದಲ ಅವಧಿ ಹಂಚಿಕೆ ಆಗುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೀಪಾ ರವಿಕುಮಾರ್, ಸುಜಾತ ಶಿವಕುಮಾರ್, ಉಮಾದೇವಿ ಕೃಷ್ಣಪ್ಪ ಸೇರಿ ಇನೊಂದಿಬ್ಬರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಜೆಡಿಎಸ್ ಬೆಂಬಲಿತ ಶೀಲಾ ದಿನೇಶ್ ಸ್ಪರ್ಧೆಯಲ್ಲಿದ್ದಾರೆ.
ಸಚಿವರ ಆದೇಶದಿಂದ ಮಲೆನಾಡಿಗರಲ್ಲಿ ಗೊಂದಲ ಸೃಷ್ಟಿ; ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೆಗೆ ಆಗ್ರಹ
ಚಿಕ್ಕಮಗಳೂರು ನಗರಸಭೆಯಲ್ಲಿ ಸಂಖ್ಯಾಬಲ
ಒಟ್ಟು-25
ಒಟ್ಟು-15