
ದೆಹಲಿ (ಆ.21): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದಲ್ಲೊಂದು ವಿಚಾರಕ್ಕೆ ಟೀಕೆ ಮಾಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡುವ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಹೌದು ಪ್ರಧಾನಿ ಮೋದಿ ರಾಜಕಾರಣಕ್ಕೆ ನಿವೃತ್ತ ಘೋಷಿಸುವ ವಿಚಾರ ಸಂಬಂಧ ಟ್ವೀಟ್ಟರ್ ಎಕ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಬರೆದುಕೊಂಡಿದ್ದು, ಮುಂದಿನ ತಿಂಗಳು ಸೆ.17ಕ್ಕೆ ಪ್ರಧಾನಿ ಮೋದಿ ತಮ್ಮ 74ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದು 75ನೇ ಬರ್ತಡೇ ವೇಳೆಗೆ ಆರೆಸ್ಸೆಸ್ ಅಲಿಖಿತ ನಿಯಮಕ್ಕೆ ಬದ್ದರಾಗಿ ನಿವೃತ್ತರಾಗುತ್ತಾರೆ. ಒಂದು ವೇಳೆ ನಿವೃತ್ತರಾಗದಿದ್ದರೆ ಆರೆಸ್ಸೆಸ್ ಮಾರ್ಗದರ್ಶನ ಮಂಡಳಿ ಬೇರೆ ಮಾರ್ಗದ ಮೂಲಕ ನಿವೃತ್ತಿ ಘೋಷಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!
ಒಟ್ಟಿನಲ್ಲಿ ಮೋದಿ ತಮ್ಮ 75ನೇ ಹುಟ್ಟುಹಬ್ಬದ ನಂತರ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಹಿಂದೆ ಹಲವು ಬಾರಿಯೂ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಿಜೆಪಿಯ ಹಲವು ಹಿರಿಯ ನಾಯಕರು 75 ವರ್ಷ ದಾಟಿದ ನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿಯಂತಹ ದಿಗ್ಗಜರು ‘ಮಾರ್ಗದರ್ಶಕ ಮಂಡಲ’ದಲ್ಲಿ ಕೂರಬೇಕಾಯಿತು. ಸುಮಿತ್ರಾ ಮಹಾಜನ್ ಅವರಂತಹ ದೊಡ್ಡ ನಾಯಕರೂ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದೀಗ ಪ್ರಧಾನಿ ಮೋದಿಯವರಿಗೆ 75 ವರ್ಷ ತುಂಬಲಿದ್ದು ಅವರು ಸಹ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಇದರಿಂದ ಪ್ರಧಾನಿ ಪಟ್ಟದಿಂದ ಕೆಳಗಿಳಿಯುತ್ತಾರೆ ಎಂದಿದ್ದಾರೆ.
ಮಗನ ಸಾವಿನ ತನಿಖೆ ಬಗ್ಗೆ ನಿರ್ಲಕ್ಷ್ಯ; ಪೊಲೀಸರ ವಿರುದ್ಧ ಸಿಎಂ ಬಳಿ ದೂರು ನೀಡಿದ ಮಹಿಳೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ, ಆದರೆ ಈ ಚುನಾವಣೆಯಲ್ಲಿ ಅದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದ್ಯಾಗೂ ಪ್ರಧಾನಿ ಮೋದಿ ಮೈತ್ರಿ ಹಿಡಿತದಲ್ಲಿರುವ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.