ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!

By Ravi Janekal  |  First Published Aug 21, 2024, 5:13 PM IST

ಹೆಚ್‌ಡಿ ಕುಮಾರಸ್ವಾಮಿ ಅವರನ್ನ ಅರೆಸ್ಟ್ ಮಾಡೋಕೆ ನೂರು ಸಿದ್ದರಾಮಯ್ಯ ಬೇಕಿಲ್ಲ ಒಬ್ಬ ಕಾನ್‌ಸ್ಟೇಬಲ್ ಸಾಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.


ವಿಜಯಪುರ (ಆ.21) ಹೆಚ್‌ಡಿ ಕುಮಾರಸ್ವಾಮಿ ಅವರನ್ನ ಅರೆಸ್ಟ್ ಮಾಡೋಕೆ ನೂರು ಸಿದ್ದರಾಮಯ್ಯ ಬೇಕಿಲ್ಲ ಒಬ್ಬ ಕಾನ್‌ಸ್ಟೇಬಲ್ ಸಾಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.

100 ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗಲ್ಲ ಎಂದಿದ್ದ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು. ಬಂಧನಕ್ಕೆ ಹೆದರಿ ಕುಮಾರಸ್ವಾಮಿ ಪ್ರೆಸ್‌ಮೀಟ್ ಮಾಡ್ತಿದ್ದಾರೆ. ಕುಮಾರಸ್ವಾಮಿದು ಬರೀ ಹಿಟ್ ಅಂಡ್ ರನ್. ದಾಖಲೆ ಬಿಡ್ತೀವಿ ಬಿಡ್ತೀವಿ ಅಂತಾರೆ ಯಾವ ದಾಖಲೆನೂ ಇಲ್ಲ.  ಇದುವರೆಗೆ ಯಾವ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಪೆನ್‌ಡ್ರೈವ್, ಪೆನ್‌ಡ್ರೈವ್ ಅಂದ್ರು. ಅದನ್ನ ಜೇಬಿನಲ್ಲಿಟ್ಕೊಂಡು ಒಡಾಡ್ತಿದ್ರು. ನಾವು ಬಿಡುಗಡೆ ಮಾಡಿ ಅಂತಾ ಸವಾಲು ಹಾಕಿದರೂ ಇದುವರೆಗೆ ಅದರ ಕತೆ ಏನಾಯ್ತು ಗೊತ್ತಿದೆಯಲ್ಲ ಎಂದು ಅಣಕ ಮಾಡಿದರು. 

Tap to resize

Latest Videos

ಮಗನ ಸಾವಿನ ತನಿಖೆ ಬಗ್ಗೆ ನಿರ್ಲಕ್ಷ್ಯ; ಪೊಲೀಸರ ವಿರುದ್ಧ ಸಿಎಂ ಬಳಿ ದೂರು ನೀಡಿದ ಮಹಿಳೆ

21ನೇ ಇಸ್ತಿಯಲ್ಲಿ ಕೊಟ್ಟ ಅರ್ಜಿ ಮೇಲೆ ಕೊಟ್ಟ ಅಲಾಟ್ ಆಗಿದೆ. ಆಗ ಮೂಡಾ ಬಿಜೆಪಿ ಕೈಯಲ್ಲಿತ್ತು. ಅದರ, ಅಧ್ಯಕ್ಷ ಬಿಜೆಪಿಯವರಿದ್ದರು. ಬಿಜೆಪಿ ಜೆಡಿಎಸ್‌ನವರೇ ಜಾಸ್ತಿ ಇದ್ದರು. ಅಲಾಟ್ ಆಗಿದ್ದಕ್ಕೆ ಯಾರು ಜವಾಬ್ದಾರರು ಮಿಸ್ಟರ್ ಬೊಮ್ಮಾಯಿ ಎಂದು ಪ್ರಶ್ನಿಸಿದರು.

click me!