ವಿಧಾನಸಭಾ ಚುನಾವಣೆಗೆ ತಂತ್ರ, ಚಿಕ್ಕಮಗಳೂರು ಜೆಡಿಎಸ್ ಟಿಕೆಟ್ ಆಕ್ಷಾಂಕಿಯಿಂದ ಆರೋಗ್ಯ ಶಿಬಿರ ಆಯೋಜನೆ

By Suvarna News  |  First Published Dec 11, 2022, 8:40 PM IST

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳಗಳೇ ಬಾಕಿ. ಟಿಕೆಟ್ ಆಕ್ಷಾಂಕಿಗಳಿಂದ ಜನರನ್ನು ಸೆಳೆಯುವ ತಂತ್ರ. ಯಾವುದೇ ಅಧಿಕಾರ ಇಲ್ಲದಿದ್ದರೂ ಏಳು ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದೇನೆ . ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಟಿಕೆಟ್ ಆಕ್ಷಾಂಕಿ ತಿಮ್ಮಶೆಟ್ಟಿ .


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.11) : ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳಗಳೇ ಬಾಕಿ ಉಳಿದಿದೆ. ಈಗಾಗಲೇ ವಿಧಾನಸಭಾ ಚುನಾವಣೆಯ ಆಕ್ಷಾಂಕಿಗಳು ಕೂಡ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಕಸರತ್ತುಗಳನ್ನು ಕೂಡ ಆರಂಭಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ  ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ  ಜೆಡಿಎಸ್ ಪಕ್ಷದ ಟಿಕೆಟ್ ಆಕ್ಷಾಂಕಿ ತಿಮ್ಮಶೆಟ್ಟಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ನಾನಾ ರೀತಿಯ ಕಸರತ್ತುನ್ನು ಆರಂಭಿಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರದ ಮೂಲಕ ಜನರನ್ನು  ಸೆಳೆಯುವ ನಿಟ್ಟಿನಲ್ಲಿ ಕಾರ್ಯನ್ಮಾಕವಾಗಿದ್ದು  ಇಂದು ಕೂಡ ಆರೋಗ್ಯ ಮೇಳವನ್ನು ನಡೆಸುವ ಮೂಲಕ ನನಗೊಂದು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಜೆಡಿಎಸ್ ಪಕ್ಷ ಆಕ್ಷಾಂಕಿ ತಿಮ್ಮಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

Tap to resize

Latest Videos

ನನಗೊಂದು ಅವಕಾಶ ನೀಡಿದರೆ ಮತ್ತಷ್ಟು ಕೆಲಸ: 
ಯಾವುದೇ ಅಧಿಕಾರ ಇಲ್ಲದಿದ್ದರೂ ಏಳು ವರ್ಷಗಳಿಂದ ಜನರ ಜೊತೆಗಿದ್ದು ನಾನಾ ರೀತಿಯ ಜನೋಪಯೋಗಿ ಕೆಲಸ ಮಾಡುತ್ತಿದ್ದೇನೆ. ನನಗೊಂದು ಅವಕಾಶ ನೀಡಿದರೆ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದು ಜನರಿಗೆ ಹೇಳಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಆರೋಗ್ಯ ಮೇಳವನ್ನ ಉದ್ಘಾಟಿಸಿ ಮಾತನಾಡಿದ ಅವರು, ಇದು ನನ್ನ 60ನೇ ಮೆಡಿಕಲ್ ಕ್ಯಾಂಪ್. ಅಲ್ಲಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಆರೋಗ್ಯ ಮೇಳವನ್ನ ಹಮ್ಮಿಕೊಂಡಿದ್ದೇವೆ. ಸುತ್ತಮುತ್ತಲಿನ ಜನ ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.

ಈ ಆರೋಗ್ಯ ಮೇಳದಲ್ಲಿ 9 ವಿವಿಧ ಸ್ಪೆಷಲಿಸ್ಟ್ಗಳು ಭಾಗಿಯಾಗಿದ್ದಾರೆ. ಬಂದಂತಹಾ ಎಲ್ಲಾ ರೋಗಿಗಳಿಗೂ ಕೂಡ ಉಚಿತ ಔಷಧಿ, ಮಾತ್ರೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೆಂಗಳೂರಿನ ಆಸ್ಪತ್ರೆಗೂ ಸೇರಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದರು. ಇಲ್ಲಿಗೆ ಬಂದಿರುವ ಎಲ್ಲರಿಗೂ ಕನ್ನಡಕದ ಅವಶ್ಯಕತೆ ಇದೆ. ಶೀಘ್ರದಲ್ಲೇ ಕಣ್ಣಿನ ತಪಾಸಣೆ ನಡೆಸಿ ಎಲ್ಲರಿಗೂ ಕನ್ನಡಕ ವಿತರಿಸಲಾಗುವುದು ಎಂದರು. ಅಲ್ಲಂಪುರದಲ್ಲೇ ಅಲ್ಲ, ನಗರದಲ್ಲೂ ಅಸಂಘಟಿತ ಕಾರ್ಮಿಕರಿಗೂ ಕ್ಯಾಂಪ್ ನಡೆಯುತ್ತಿದೆ. ಅವರಿಗೂ ಕೂಡ ಉಚಿತ ಔಷಧಿ, ಮಾತ್ರೆ ನೀಡಲಿದ್ದೇವೆ ಎಂದರು.

ಹಣ, ಹೆಂಡ ಹಂಚೋದಿಲ್ಲ ಎಂದು ಪಕ್ಷಗಳು ಘೋಷಿಸಲಿ
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಹಣ, ಹೆಂಡವನ್ನು ಹಂಚದೇ ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಲಿ. ಇದಕ್ಕೆ ಆಮ್‌ ಆದ್ಮಿ ಪಾರ್ಟಿ ಸಹ ಬೆಂಬಲ ನೀಡಲಿದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ಡಾ.ಸುಂದರಗೌಡ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಆಮ್‌ ಆದ್ಮಿ ಪಾರ್ಟಿ ಶೃಂಗೇರಿ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಭ್ರಷ್ಟಾಚಾರವಿಲ್ಲದ ಚುನಾವಣೆ ಬಯಸುತ್ತದೆ.ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲವು ಮುಖಂಡರು ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆದು ಬಲಾಢ್ಯರಾಗಿದ್ದಾರೆ. ಪೆಟ್ರೋಲ್‌, ಗ್ಯಾಸ್‌ ಸೇರಿದಂತೆ ದಿನ ಬಳಕೆ ವಸ್ತುಗಳು ಗಗನಕ್ಕೆ ಏರಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿದರು.

ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯುವ ಪ್ರಯತ್ನ ಒಪ್ಪಿಕೊಂಡ: ಡಿಕೆಶಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋಟಿಗಟ್ಟಳೆ ಆಸ್ತಿ ಮಾಡಿಕೊಂಡವರು ಮಾತ್ರ ಚುನಾವಣೆಗೆ ನಿಲ್ಲುತ್ತಿದ್ದಾರೆ. ಉಳಿದವರು ಅವರ ಗುಲಾಮರಾಗಿ ಬದುಕುವ ಸ್ಥಿತಿ ಎದುರಾಗಿದೆ. ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಜನರ ತೆರಿಗೆ ಹಣ ಲೂಟಿ ಮಾಡಿ ಭ್ರಷ್ಟಾಚಾರ ಮಾಡಿ ಶ್ರೀಮಂತರಾದವರ ಬಳಿ ಇರುವ ಸಂಪತ್ತು ಮುಟ್ಟುಗೋಲು ಹಾಕಿ, ಬಡವರ್ಗದ ಜನರಿಗೆ ಹಂಚುವ ಕೆಲಸ ಮಾಡಲಾಗುವುದು ಎಂದರು.

ನಿಜವಾದ ಪ್ರಜಾಪ್ರಭುತ್ವ ಹುಟ್ಟು ಹಾಕಬೇಕಾದರೆ ಕಳಂಕರಹಿತ, ಪ್ರಾಮಾಣಿಕರಿಗೆ ಸಂಪೂರ್ಣ ಬೆಂಬಲ ನೀಡಬೇಕು. 10 ವರ್ಷದ ಹಿಂದೆ ದೆಹಲಿಯಲ್ಲಿ ಹುಟ್ಟಿದ ಆಮ್‌ ಆದ್ಮಿ ಪಕ್ಷವು ಈಗ ಹಳ್ಳಿಹಳ್ಳಿಯಲ್ಲೂ ವೇಗವಾಗಿ ಬೆಳೆಯುತ್ತಿದೆ. ಆಮ್‌ ಆದ್ಮಿ ಪಕ್ಷ ಕೇವಲ ರಾಜಕೀಯ ಪಕ್ಷವಾಗಿರದೇ, ಸೇವಾ ಮನೋಭಾವದಿಂದಲೂ ಕೆಲಸ ಮಾಡುತ್ತಿದೆ. ಯುವಕರ ಕೈಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ತಲುಪಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.

ಜನಾರ್ಧನ ರೆಡ್ಡಿ ಜತೆಗಿನ ಸ್ನೇಹ ರಾಜಕೀಯ ಹೊರತಾದದ್ದು: ಸಚಿವ ಶ್ರೀರಾಮುಲು

ಶೃಂಗೇರಿ ವಿಧಾನಸಭಾ ಕ್ಷೇತ್ರದ ಎಎಪಿ ಟಿಕೆಟ್‌ ಆಕಾಂಕ್ಷಿ ಎಸ್‌.ಎಸ್‌.ಎಸ್‌. ರಾಜನ್‌ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಇದುವರೆಗೆ ಆಡಳಿತ ನಡೆಸಿದ ಪಕ್ಷಗಳು ಕ್ಷೇತ್ರದ ಸಮಸ್ಯೆ ಬಗೆಹರಿಸಲು ವಿಫಲವಾಗಿವೆ. ಅಧಿಕಾರಕ್ಕಾಗಿ ಆರೋಪ, ಪ್ರತ್ಯಾರೋಪ ಮಾಡುತ್ತಿವೆ. ಅಡಕೆಗೆ ಹಳದಿ ಎಲೆಚುಕ್ಕಿ ರೋಗ, ನಿವೇಶನ ಸಮಸ್ಯೆ, ಮೀಸಲು ಅರಣ್ಯ ಸಮಸ್ಯೆಗೆ 2 ವರ್ಷದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಎಎಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್‌ ಜಮೀಲ್‌ ಅಹಮ್ಮದ್‌, ಮುಖಂಡರಾದ ಐ.ಎಸ್‌. ತೇಜಸ್ವಿ, ಎಂ.ಪಿ.ಈರೇಗೌಡ, ಮ್ಯಾಥ್ಯೂ, ಎಲ್ದೋಸ್‌, ರಿತಿನ್‌ ರಾಜು ಪೌಲ್‌ ಮತ್ತಿತರರು ಇದ್ದರು.

click me!