ಕೊಟ್ಟ ಮಾತಿನಂತೆ ಶಾಸಕ ಸ್ಥಾನಕ್ಕೆ ಪ್ರದೀಶ್ ಈಶ್ವರ್ ರಾಜೀನಾಮೆ; ವೈರಲ್ ಪತ್ರದ ಅಸಲಿಯತ್ತೇನು?

By Sathish Kumar KH  |  First Published Jun 5, 2024, 5:22 PM IST

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುವುದಾಗಿ ಹೇಳಿದ್ದ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಚಿಕ್ಕಬಳ್ಳಾಪುರ (ಜೂ.05): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಬಳ್ಳಾಪುರದಲ್ಲಿ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರನ್ನು ಸೋಲಿಸಿದ್ದ ಪ್ರದೀಪ್ ಈಶ್ವರ್ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಈಗ ಸುಧಾಕರ್ ಗೆಲುವಿನ ಬೆನ್ನಲ್ಲಿಯೇ ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ರ ವೈರಲ್ ಆಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಅವರು ಸೋಲುತ್ತಾರೆ. ಅವರೇನಾದರೂ ಚಿಕ್ಕಬಳ್ಳಾಪುರದಲ್ಲಿ ಒಂದೇ ಒಂದು ಮತ ಲೀಡ್ ತೆಗೆದುಕೊಂಡರೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಾನು ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುವುದಾಗಿ ಸವಾಲು ಹಾಕಿದ್ದರು. ನನ್ನ ಸವಾಲನ್ನು ಸ್ವೀಕರಿಸುವ ಒಪ್ಪಿದರೆ ಸುಧಾಕರ್ ಬಂದು ಪ್ರಮಾಣ ಮಾಡಲಿ ಎಂದು ಹೇಳಿದ್ದರು. ಆದರೆ, ಈಗ ಲೋಕಸಭಾ ಫಲಿತಾಂಶದಲ್ಲಿ ಡಾ.ಕೆ. ಸುಧಾಕರ್ ಗೆಲುವು ಖಚಿತವಾಗುತ್ತಿದ್ದಂತೆಯೇ ಈ ಹಿಂದೆ ಪ್ರದೀಪ್ ಈಶ್ವರ್ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೆಲವೇ ಕ್ಷಣಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಈಗ ಪ್ರದೀಪ್ ಈಶ್ವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆಂಬ ಪತ್ರ ವೈರಲ್ ಆಗುತ್ತಿದೆ.

Tap to resize

Latest Videos

ಇನ್ಫೋಸಿಸ್ ಸುಧಾಮೂರ್ತಿ ಹರಕೆಯಿಂದಲೇ ಗೆದ್ದುಬಂದ ಹೃದಯವಂತ ಡಾ. ಸಿ.ಎನ್. ಮಂಜುನಾಥ್!

ಆದರೆ, ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಶಾಸಕ ಪ್ರದೀಪ್ ಈಶ್ವರ್ ಅವರು, ಇದೆಲ್ಲ ಯಾರೂ ಕಿಡಿಗೇಡಿಗಳು ಮಾಡಿರುವ ಫೇಕ್ ಲೆಟರ್. ಆ ರೀತಿ ಯಾವುದೇ ರಾಜೀನಾಮೆ ಪತ್ರವನ್ನು ನಾನು ನೀಡಿಲ್ಲ. ಸುವರ್ಣ ನ್ಯೂಸ್ ಗೆ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಿನ್ನೆ ಸಂಜೆಯಿಂದ ಬೆದರಿಕೆ ಕರೆಗಳು ಬರಲು ಶುರುವಾಗಿದೆ. ಇದನ್ನೆಲ್ಲಾ ನಾನು ಪೋಲೀಸರ ಗಮನಕ್ಕೆ ತಂದಿದ್ದೇನೆ ಎಂದು ಮಾಹಿತಿ ನೀಡಿದರು.

click me!