ಭರ್ಜರಿ ಗೆಲುವಿನ ನಗೆ ಚೆಲ್ಲಿದ ತೇಜಸ್ವಿ ಸೂರ್ಯ ಮದ್ವೆಗೆ ಮುಹೂರ್ತ ಫಿಕ್ಸ್? ವಿಡಿಯೋ ವೈರಲ್

Published : Jun 05, 2024, 04:11 PM IST
ಭರ್ಜರಿ ಗೆಲುವಿನ ನಗೆ ಚೆಲ್ಲಿದ ತೇಜಸ್ವಿ ಸೂರ್ಯ ಮದ್ವೆಗೆ ಮುಹೂರ್ತ ಫಿಕ್ಸ್? ವಿಡಿಯೋ ವೈರಲ್

ಸಾರಾಂಶ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ತೇಜಸ್ವಿ ಸೂರ್ಯ ಅವರಿಗೆ ಮದುವೆಯ ಬಗ್ಗೆ ಕೇಳಿದ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅದರಲ್ಲಿ ಅವರು ಹೇಳಿದ್ದೇನು?  

ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ಪಾಳಯಕ್ಕೆ ಮರ್ಮಾಘಾತವನ್ನೇ ನೀಡಿದ್ದರೂ ಬೆಂಗಳೂರಿನ ಮಟ್ಟಿಗೆ ನಗುವಿನ ಅಲೆ ಎಬ್ಬಿಸಿದೆ. ಉಚಿತ ಭಾಗ್ಯಗಳ ನಡುವೆ ಎಲ್ಲಿ ಕರ್ನಾಟಕದ ಜನತೆ ತಮ್ಮ ಕೈಬಿಡುವರೋ ಎಂದು ಗಾಬರಿಯಲ್ಲಿದ್ದ ಬಿಜೆಪಿ, ಕಳೆದ ಬಾರಿಯಷ್ಟು ಅಲ್ಲದಿದ್ದರೂ, ಈ ಬಾರಿ ಸಮಾಧಾನ ಪಟ್ಟುಕೊಳ್ಳುವಷ್ಟು ಸೀಟುಗಳನ್ನು ಗೆದ್ದಿದೆ. ಅದರಲ್ಲಿಯೂ ಬೆಂಗಳೂರಿನ ಎಲ್ಲಾ  ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸಿದೆ. ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಬಿಜೆಪಿಯ ಭದ್ರ ನೆಲೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​  ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ . 2,77,083  ಮತಗಳ ಅಂತರದಿಂದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನಿಂದ ಸೌಮ್ಯಾ ರೆಡ್ಡಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
 
ಈಗ ತೇಜಸ್ವಿ ಅವರ ಭರ್ಜರಿ ಗೆಲುವಿನ ಬೆನ್ನಲ್ಲೇ, ಅವರ ಅಭಿಮಾನಿಗಳು ಈಗ ಅವರ ಮದುವೆಯ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ಈಗಷ್ಟೇ ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದು, ಮುಂದೆ ಮಾಡಬಹುದಾದ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಅವರ ಅಭಿಮಾನಿಗಳಿಗೆ ಅವರ ಮದುವೆಯ ಚಿಂತೆ ಶುರುವಾಗಿದೆ. ಅವರು ಗೆದ್ದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಕಳೆದ ಬಾರಿಗಿಂತಲೂ 10 ಪಟ್ಟು ಅಧಿಕ  ಶ್ರಮಿಸುವೆ. ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಬೇಡಿಕೆ ಇದ್ದು, ಅದನ್ನು ಸ್ಥಾಪಿಸಲು ಪ್ರಯತ್ನಿಸುವೆ ಎಂದಿದ್ದಾರೆ.  ಆದರೆ ಅವರ ಅಭಿಮಾನಿಗಳು ಬೇಗ ಮದುವೆಯಾಗಿ ಎಂದು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ, ಅವರು ಇತ್ತೀಚೆಗ ಆ್ಯಂಕರ್​ ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ್ದ ಸಂದರ್ಶನವೊಂದು ವೈರಲ್​ ಆಗುತ್ತಿದೆ.

ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗುವೆ: ತೇಜಸ್ವಿ ಸೂರ್ಯ

1990ರ ನವೆಂಬರ್​ನಲ್ಲಿ ಜನಿಸಿರುವ ತೇಜಸ್ವಿ ಸೂರ್ಯ ಅವರಿಗೆ ಇದಾಗಲೇ 33 ವರ್ಷ ದಾಟಿದೆ. ಮದುವೆಗೆ ಇದು ಸೂಕ್ತ ಎನ್ನುವುದು ಅಭಿಮಾನಿಗಳ ಅಭಿಮತ. ಅವರು ಹೋದಲ್ಲಿ, ಬಂದಲ್ಲಿ ರಾಜಕೀಯದ ಹೊರತಾಗಿಯೂ ಅವರಿಗೆ ಮದುವೆಯ ಬಗ್ಗೆಯೇ ಪ್ರಶ್ನೆ ಎದುರಾಗುವುದು ಸಹಜ. ಹಿಂದೊಮ್ಮೆ ಅವರು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಎಲೆಕ್ಷನ್ ಟೈಮಲ್ಲಿ ಬಿಜೆಪಿ ಗೆಲ್ಲೋ ತನಕ ಮದ್ವೆ ಆಗೋಲ್ಲ ಅಂದಿದ್ದರು. ಆದರೆ ಅಲ್ಲಿ ಬಿಜೆಪಿ ಗೆಲ್ಲಲಿಲ್ಲ. ಇದೀಗ  ಎಂಪಿ ಎಲೆಕ್ಷನ್​ನಲ್ಲಿಯೂ  ಬಿಜೆಪಿಯದ್ದು ಪಶ್ಚಿಮ ಬಂಗಾಳದಲ್ಲಿ  ಶೂನ್ಯ ಸಾಧನೆಯಾಗಿದೆ. ಹೀಗಿರುವಾಗ ತೇಜಸ್ವಿ ಸೂರ್ಯ ಮದುವೆಯೇ ಆಗುವುದಿಲ್ಲವೆ ಎನ್ನುವುದು ಅಭಿಮಾನಿಗಳ ಪ್ರಶ್ನೆ. 

ಆದರೆ ಇದರ ನಡುವೆಯೇ ರ‍್ಯಾಪಿಡ್ ರಶ್ಮಿ ಅವರಿಗೆ ನೀಡಿರುವ ಸಂದರ್ಶನವೊಂದು ವೈರಲ್​ ಆಗಿದ್ದು, ಅದರಲ್ಲಿ ತೇಜಸ್ವಿ ಸೂರ್ಯ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸುಮಾರು ಎರಡು ಗಂಟೆಗಳ ಈ ಸಂದರ್ಶನದಲ್ಲಿ ಅವರು ತಮ್ಮ ಮದುವೆಯ ವಿಷಯವಾಗಿಯೂ ಮಾತನಾಡಿದ್ದಾರೆ. ನಿಮ್ಮ ಮದುವೆ ಯಾವಾಗ, ನಿಮ್ಮ ಮನೆಯಲ್ಲಿ ಹುಡುಗಿ ನೋಡುತ್ತಿದ್ದಾರಂತೆ ಹೌದಾ ಎಂದು ರಶ್ಮಿ ಅವರು ಕೇಳಿದಾಗ, ಜೋರಾಗಿ ನಕ್ಕಿರುವ ತೇಜಸ್ವಿ ಅವರು, ಕಳೆದ ಐದು ವರ್ಷಗಳಿಂದ ನನ್ನಮ್ಮ ಹುಡುಗಿ ನೋಡುತ್ತಲೇ ಇದ್ದಾರೆ. ಮದುವೆಯಾಗು ಎಂದು ಆಗಿನಿಂದಲೂ ಫೋರ್ಸ್​ ಮಾಡುತ್ತಲೇ ಇದ್ದಾರೆ ಎಂದಿದ್ದಾರೆ. ನಾನು ಹಲವಾರು ಕಡೆಗಳಲ್ಲಿ ಭಾಷಣ ಮಾಡಿದಾಗ ತುಂಬಾ ಪ್ರಶಂಸೆ ಸಿಗುತ್ತದೆ. ಅದರ ಬಗ್ಗೆ ನಮ್ಮ ಮನೆಯಲ್ಲಿ ಖುಷಿಯಿಂದ ಹೇಳಿಕೊಳ್ಳುತ್ತೇನೆ. ಅದರೆ ನನ್ನಮ್ಮ ಅದೆಲ್ಲಾ ಓಕೆ, ಮದುವೆ ಯಾವಾಗ ಆಗ್ತಿಯಾ, ಬೇಗ ಆಗು ಎನ್ನುತ್ತಿರುತ್ತಾರೆ ಎಂದಿದ್ದ ತೇಜಸ್ವಿ ಅವರು ಈ ಚುನಾವಣೆ ಮುಗಿದ ಬಳಿಕ ಆಗುತ್ತೇನೆ ಎಂದಿದ್ದಾರೆ. ಚುನಾವಣೆ ಮುಗಿದು, ಫಲಿತಾಂಶವೂ ಬಂದು ಭರ್ಜರಿ ಗೆಲುವನ್ನು ಸಾಧಿಸಿರುವ ತೇಜಸ್ವಿ ಅವರ ಮದುವೆ ಯಾವಾಗ ಎನ್ನುವುದು ಮತ್ತೊಮ್ಮೆ ಅಭಿಮಾನಿಗಳ ಪ್ರಶ್ನೆಯಾಗಿದೆ. 

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್​ ಖೇರ್​ ನಿಗೂಢ ಪೋಸ್ಟ್​!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ