ಸಂಸದರಾಗಿರುವ ಪ್ರತಾಪ್ ಸಿಂಹ ಅವರೇ, ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ ಅಲ್ವಾ?. ಕೊಚ್ಚೆಗೆ ಕೈ ಹಾಕೋ ಕೆಲಸ ನೀವ್ಯಾಕೆ ಮಾಡ್ತಿದ್ದೀರಿ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.
ಶಿವಮೊಗ್ಗ (ಜ.19): ಸಂಸದರಾಗಿರುವ ಪ್ರತಾಪ್ ಸಿಂಹ ಅವರೇ, ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ ಅಲ್ವಾ?. ಕೊಚ್ಚೆಗೆ ಕೈ ಹಾಕೋ ಕೆಲಸ ನೀವ್ಯಾಕೆ ಮಾಡ್ತಿದ್ದೀರಿ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರು ಏಕವಚನದಲ್ಲಿ ಕರೆಯುವುದು ನಮಗೆ ಇಷ್ಟವಾಗೋಲ್ಲ. ಪ್ರತಾಪ್ ಸಿಂಹ ಹಾಗೂ ಅನಂತ ಕುಮಾರ್ ಹೆಗಡೆ ಯಾವ ದೊಡ್ಡ ನಾಯಕರು ಎಂದು ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರತಾಪ್ ಸಿಂಹ ಕೊಚ್ಚೆ ಎಂದು ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಾರೆ. ಕೊಚ್ಚೆಯಲ್ಲಿ ಇರುವುದು ಹಂದಿ ಮಾತ್ರ. ನಾನು ಈ ನಾಯಕರುಗಳಿಗೆ ಗೌರವ ನೀಡುವುದು ಅವರಿಗೆ ಗೌರವ ಇದೆ ಎಂದು ಅರ್ಥ ಅಲ್ಲ ನಮಗೆ ಆ ಸಂಸ್ಕಾರ ಇದೆ ಎಂಬ ಕಾರಣಕ್ಕೆ ಗೌರವ ನೀಡುತ್ತೇನೆ ಎಂದರು. ಬಗರ್ ಹುಕುಂ ರೈತರ ಸಮಸ್ಯೆ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮಧು ಬಂಗಾರಪ್ಪ ಬಗೆಹರಿಸುತ್ತಾರೆ. ಪ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ಹೆಸರನ್ನು ರಾಜ್ಯ ಸರ್ಕಾರ ಇಟ್ಟಿದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಮಧು ಬಂಗಾರಪ್ಪ ಹೊಸ ರೂಪವನ್ನು ನೀಡುತ್ತಿದ್ದಾರೆ.
ಜ.22ರಂದು ನಾನು ನನ್ನ ಕುಟುಂಬ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೇವೆ: ಎಚ್.ಡಿ.ದೇವೇಗೌಡ
ಕೋಚಿಂಗ್ ಸೆಂಟರ್ ಗೆ ನಿಯಂತ್ರಣ ಹೇರುವ ವಿಚಾರವಾಗಿ ಕೋಚಿಂಗ್ ಸೆಂಟರ್ ವಾರ್ಷಿಕ ಆರು ಸಾವಿರ ಕೋಟಿ ರೂ ತಲುಪಿದೆ 18 % ಜಿಎಸ್ಟಿ ಕಟ್ಟುತ್ತೇವೆ. ಸೂಪರ್ 60 ಮಾದರಿ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನನ್ನ ಕ್ಷೇತ್ರದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿದ್ದೇನೆ. ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಗಳನ್ನು ಒಂದಕ್ಕೊಂದು ಸೇರಿಸುವ ಪ್ರಯತ್ನ ಮಾಡಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಯಾವುದೇ ಸರ್ಕಾರ ಬಂದರೂ ಬದಲಾವಣೆ ತರಲು ಮುಂದಾಗಿರುವ ಕ್ರಮ ಸರಿಯಲ್ಲ.
ಹಿಂದಿನ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತಂದಿದ್ದು ಸರಿಯಲ್ಲ. ಸರ್ಕಾರದ ಶಾಲಾ ಕಾಲೇಜುಗಳಲ್ಲಿ ಹೊರಗಿನ ವ್ಯಕ್ತಿಗಳನ್ನು ಒಳಗೆ ಪ್ರವೇಶಿಸಿದಂತೆ ನೋಡಿಕೊಳ್ಳಬೇಕು. ಚಿಕ್ಕಬಳ್ಳಾಪುರದ ಶಾಲಾ-ಕಾಲೇಜುಗಳಲ್ಲಿ ಹೊರಗಿನ ವ್ಯಕ್ತಿಗಳಿಗೆ ನಿಷೇಧ ಹೇರಲಾಗಿದೆ ಎಂದರು. ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ವಿಚಾರವಾಗಿ ನಾನು ಶ್ರೀ ರಾಮನ ಭಕ್ತರು. ನನ್ನ ಎದೆ ಸೀಳಿದರೂ ಶ್ರೀ ರಾಮ, ಸಿದ್ದರಾಮಯ್ಯ, ಶಿವಕುಮಾರ್ ಸ್ವಾಮಿ, ಆಂಬೇಡ್ಕರ್ ಇದ್ದಾರೆ. ಕೋಮು ಗಲಭೆಗಳಲ್ಲಿ ಯುವಕರು ಪಾಲ್ಗೊಳ್ಳ ಬೇಡಿ. ಶ್ರೀ ರಾಮನ ವಿಚಾರದಲ್ಲಿ ಗೌರವವಿದೆ. ಹಾಗೆಯೇ ಅಲ್ಲಾ ನನ್ನು ಗೌರವಿಸುತ್ತೇನೆ.
ಚಿಕ್ಕಬಳ್ಳಾಪುರ ದಲ್ಲಿ ಆಕ್ರಮ ಕಲ್ಲುಕ್ವಾರಿಗಳ ವಿಚಾರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 130 ಕಲ್ಲು ಕ್ವಾರಿಗಳಿದ್ದು ಈಗಾಗಲೇ 30 ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಮಾಜಿ ಸಚಿವ ಸುಧಾಕರ್ ಅವರಿಗೆ ಸೇರಿದ ಎರಡು ಕಲ್ಲು ಕ್ವಾರಿ ಹಾಗೂ ಆಂಧ್ರ ಸಿಎಂ ಜಗನ್ಮೋಹನ ರೆಡ್ಡಿ ಸೇರಿದ ಒಂದು ಕಲ್ಲುಕ್ವಾರಿಗಳನ್ನು ನೋಟಿಸ್ ನೀಡಿ ನಿಲ್ಲಿಸಲಾಗಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಸುಧಾಕರ್ ಸ್ಪರ್ಧಾ ವಿಚಾರವಾಗಿ ಮಾಜಿ ಸಚಿವ ಸುಧಾಕರ್ ನಮ್ಮೂರ ಹುಡುಗ ಹಾಗಾಗಿ ಒಮ್ಮೆ ಚುನಾವಣೆಯಲ್ಲಿ ಸೋತು ಮತ್ತೆ ಲೋಕಸಭೆಯಲ್ಲಿ ಸೋಲುವುದು ಬೇಡ.
ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಇಲ್ಲದಿದ್ದರೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ: ಕೊಪ್ಪಳ ಸಂಸದ ಸಂಗಣ್ಣ ಕರಡಿ
ಮುಂದಿನ ಐದು ವರ್ಷಗಳ ಬಳಿಕ ವಿಧಾನಸಭೆಗೆ ಸ್ಪರ್ಧೆ ಮಾಡಿ ಅದೃಷ್ಟವಿದ್ದರೆ ಜನಶಕ್ತಿ ಬೆಂಬಲಿಸಿದರೆ ನಾನು ಗೆಲ್ಲುತ್ತೇನೆ ಇಲ್ಲದಿದ್ದರೆ ನೀವು ಗೆಲ್ಲಿ, ನನ್ನನ್ನು ಬಹಳ ಸ್ಪೀಡ್ ಎಂದು ಹೇಳುತ್ತಾರೆ 65 ,70 ವರ್ಷಗಳಾದ ಬಳಿಕ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ. ನನಗೀಗ 38 ವರ್ಷ ಹಾಗಾಗಿ ಸ್ಪೀಡ್ ಆಗಿ ಕೆಲಸ ಮಾಡುತ್ತಿದ್ದೇನೆ ಈಗಲ್ಲದೆ ಇನ್ಯಾವಾಗ ಮಾಡಲಿ, ಅದೇ ಯಡಿಯೂರಪ್ಪನವರು, ಸಿದ್ದರಾಮಯ್ಯನವರು, ಡಿಕೆಶಿ, ಕುಮಾರಸ್ವಾಮಿ ಮೊದಲಾದವರು ಈ ವಯಸ್ಸಿನಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.