ಜ.22ರಂದು ನಾನು ನನ್ನ ಕುಟುಂಬ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೇವೆ: ಎಚ್.ಡಿ.ದೇವೇಗೌಡ

By Govindaraj S  |  First Published Jan 19, 2024, 11:04 AM IST

ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ನನ್ನ ಪತ್ನಿ, ಕುಮಾರಸ್ವಾಮಿ ಕುಮಾರಸ್ವಾಮಿ ಪತ್ನಿ ಅನಿತಾ ಹಾಗು ನಿಖಿಲ್‌ ಹೋಗ್ತೇವೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ತಿಳಿಸಿದರು. 
 


ಹಾಸನ (ಜ.19): ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ನನ್ನ ಪತ್ನಿ, ಕುಮಾರಸ್ವಾಮಿ ಕುಮಾರಸ್ವಾಮಿ ಪತ್ನಿ ಅನಿತಾ ಹಾಗು ನಿಖಿಲ್‌ ಹೋಗ್ತೇವೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ತಿಳಿಸಿದರು. ಜನವರಿ 22 ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ ಅದರಲ್ಲೆ ಹೋಗ್ತೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದೆ. ಎಸ್ ಎಂ ಕೃಷ್ಣ, ಡಿ.ಕೆ.ಶಿವಕುಮಾರ್, ನಾನು ನಮ್ಮ ಸ್ವಾಮಿಜಿ ಎಲ್ಲರೂ ಭಾಗಿಯಾಗ್ತೆರವೆ ಎಂದು ದೇವೇಗೌಡರು ಹೇಳಿದರು.

ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ: ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು. ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದ್ರು. ಶೇಕಡಾ 15 ಎಸ್ ಸಿಗಳಿಗೆ, ಶೇಕಡಾ 3 ಎಸ್ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಸೇಕಡಾ 15 ರಿಂದ 18 ಕ್ಕೆ ಶೇಕಡಾ 3 ರಿಂದ 5 ಕ್ಕೆ ಏರಿಸಿದೆ. 

Tap to resize

Latest Videos

ಇದೆಲ್ಲವನ್ನೂ ಕೂಡ ನಾನು ಸಿಎಂ ಆಗಿದ್ದ ಅವದಿಯಲ್ಲಿ ಮಾಡಿದೆ. ಮೀಸಲಾತಿ ಬಗ್ಗೆ ತಮ್ಮ ಅವಧಿಯಲ್ಲಿ ಕೈಕೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಸ್ಮರಿಸಿದರು. ಅಂದು ಶೇಕಡ 23 ತೀರ್ಮಾನ ಮಾಡಿದ್ದು ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ.  ಇಷ್ಟು ವರ್ಷ ಕೆಲವೇ ಕೆಲವು ಕುಟುಂಬಗಳು ಫಲ ಅನುಭವಿಸಿವೆ. ನಾವು ಮಾಡಿರೊ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬ ಗಳು ಈ ಮೀಸಲಾತಿಯ ಫಲ ಅನುಭವಿಸಿವೆ. ನಮ್ಮ ಅವಧಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ರು. ಆಗ ಖರ್ಗೆ ಅವರು ಆಗ ವಿಪಕ್ಷದ ನಾಯಕರಾಗಿದ್ದರು. 

ಪ್ರಧಾನಿ ಮೋದಿ ದೈವಾಂಶ ಸಂಭೂತ, ಸಂಸ್ಕಾರವಂತ ಮನುಷ್ಯ: ಎಚ್‌.ಡಿ.ದೇವೇಗೌಡ

ಅವರು ತಮ್ಮ ಸೀಟ್ ನಿಂದ ನೆಗೆದು ಬಂದು ಆ ನಿರ್ಣಯ ಪ್ರತಿಯನ್ನ ಹರಿದು ಹರಿದು ಅವರ ಮುಖಕ್ಕೆ ಎಸೆದರು. ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ದೇವೇಗೌಡರು ಮಾಡಿದ ಕೆಲಸವನ್ನು ಮರೆ ಮಾಚೊ‌ ಕೆಲಸವನ್ನು ಇಷ್ಡು ದಿನ ಮಾಡಿದಿರಿ. ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ರಾಜಣ್ಣ. ಚುನಾವಣೆ ಮುಗಿಯೋ ವೇಳೆಯಲ್ಲಿ ನನಗೆ ಜ್ವರ ಬಂದು ಮಲಗಿದ್ದೆ. ಆಗ ಅವರು ನೀವು ಬಂದರೆ ನಾನು ಗೆಲ್ತಿನಿ ಇಲ್ಲಾ ಗೆಲ್ಲಲ್ಲ ಎಂದರು. ಅವರು ಜನರಲ್‌ ಕ್ಷೇತ್ರದಲ್ಲಿ ಸ್ಪರ್ದೆ ಮಾಡಿದ್ದರು. ಆಗ ಅವರು 700+ ಮತಗಳಿಂದ ಗೆದ್ದರು. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ.  

ನಾನು ತುಮಕೂರಿನಿಂದ ಸ್ಪರ್ದೆ ಮಾಡಿದಾಗ ನೀವು ಮುದ್ದು ಹನುಮೇಗೌಡರ ಸ್ಥಾನ ಕಿತ್ತುಕೊಂಡ್ರಿ ಅಂತಾ ಬಹಿರಂಗ ಸಭೆಯಲ್ಲಿ ಹೇಳಿದ್ರು. 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಣ್ಣ ಮಾತನಾಡಿದ್ದ ಬಗ್ಗೆ ದೇವೇಗೌಡರು ಬೇಸರ ವ್ಯಕ್ತಪಡಿಸಿದರು. ಮೀಸಲಾತಿ ಬಗ್ಗೆ ಏನಾಗಿದೆ ಎನ್ನೋ ಬಗ್ಗೆ ಚರ್ಚೆ ಆಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ನಾನು ಕೊಂಡೊಯ್ಯುತ್ತೇನೆ. ನನಗೆ ನಾಲ್ಕು ಸೀಟ್ ಕೊಡ್ತಾರೊ‌ಮೂರು ಕೊಡ್ತಾರೊ ಗೊತ್ತಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು, 13 ತಿಂಗಳಿಗೆ. ನನ್ನ ಪ್ರಧಾನ ಮಂತ್ರಿ ಸ್ಥಾನ ತೆಗೆದಿದ್ದು ಯಾರು. 

ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಇಲ್ಲದಿದ್ದರೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ: ಕೊಪ್ಪಳ ಸಂಸದ ಸಂಗಣ್ಣ ಕರಡಿ

ನನ್ನ ರಾಜಕೀಯ ಜೀವನದಲ್ಲಿ 60 ವರ್ಷ ದುಡಿದಿದ್ದೇನೆ. ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಲಾಭ ಆಗಿದೆ. ಇದರ ಲಾಭವನ್ನು ಯಾರು ಪಡೆದಿದ್ದಾರೆ ಚರ್ಚೆ ಆಗಬೇಕು ಎಂದು ಒತ್ತಾಯ ಮಾಡಿದರು. ಒಳ‌‌ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಹೊತ್ತುಹಾಕೊ‌ ಕೆಲಸ ಮಾಡಿದ್ದಾರೆ. ಇದನ್ನೇ ಮುಂದಿಟ್ಟು ಈ ಚುನಾವಣೆಯಲ್ಲಿ ಹೋರಾಟ ಮಾಡ್ತೇನೆ. ನಾನು ಚುನಾವಣೆ ಗೆ ಸ್ಪರ್ಧೆ ಮಾಡೊ‌ ಪ್ರಶ್ನೆ ಇಲ್ಲ. ತಾವು ಚುನಾವಣೆ ಗೆ ಸ್ಪರ್ಧೆ ಮಾಡಲ್ಲ ಎಂದು ಮತ್ತೊಮ್ಮೆ ದೇವೇಗೌಡರು ಸ್ಪಷ್ಟಪಡಿಸಿದರು.

click me!