ಕನ್ನಡಿಗರ ಪರವಾಗಿ ಮಾತನಾಡುವವರು ಯಾರಿದ್ದಾರೆ ಬಿಜೆಪಿ ಸರ್ಕಾರದಲ್ಲಿ? ಇನ್ ಕಮ್ ಟ್ಯಾಕ್ಸ್ 7 ಲಕ್ಷಕ್ಕೆ ಏರಿಕೆ ವಿಚಾರ ದೇಶದಲ್ಲಿ ಆರ್ಥಿಕ ಅಸಮಾನತೆ ಜಾಸ್ತಿಯಾಗಿದೆ. ಜನರ ಆದಾಯ ಕಡಿಮೆಯಾಗಿದೆ, 25 ಕೋಟಿ ಜನ ವಾಪಾಸ್ ಬಡತನ ರೇಖೆಗಿಂತ ಕೆಳಗಡೆ ಹೋಗಿದ್ದಾರೆ. ಇದಕ್ಕೆ ಪರಿಹಾರ ಹುಡುಕೋ ಬದಲು ಲಿಮಿಟ್ ಜಾಸ್ತಿ ಮಾಡಿದ್ದರಿಂದ ಪ್ರಯೋಜನವಿಲ್ಲ: ಖರ್ಗೆ
ಕಲಬುರಗಿ(ಫೆ.02): ಇದು ಸಂಪೂರ್ಣ ಫ್ಲಾಫ್ ಬಜೆಟ್, ಬರೀ ಘೋಷಣೆಗಳ ಬಜೆಟ್, ಬಜೆಟ್‌ನಲ್ಲಿ ಕನ್ನಡಿಗರಿಗೆ ಮಹಾ ಮೋಸ ಆಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಯುವಕರ ಭವಿಷ್ಯಕ್ಕೆ ಮಾರಕವಾದ ಬಜೆಟ್ ಇದಾಗಿದೆ. ಎರಡು ಬಾರಿ ರಾಜ್ಯದಿಂದ ಆಯ್ಕೆಯಾದ ಖುಣ ತಿರಿಸಬೇಕು ಅಂತ ನಿರ್ಮಲಾ ಸಿತಾರಾಮ ಅವರಿಗೆ ಅನ್ನಿಸಲೇ ಇಲ್ಲ ಎಂದು ಟೀಕಿಸಿದ್ದಾರೆ.
ಕನ್ನಡಿಗರ ಪರವಾಗಿ ಮಾತನಾಡುವವರು ಯಾರಿದ್ದಾರೆ ಬಿಜೆಪಿ ಸರ್ಕಾರದಲ್ಲಿ? ಇನ್ ಕಮ್ ಟ್ಯಾಕ್ಸ್ 7 ಲಕ್ಷಕ್ಕೆ ಏರಿಕೆ ವಿಚಾರ ದೇಶದಲ್ಲಿ ಆರ್ಥಿಕ ಅಸಮಾನತೆ ಜಾಸ್ತಿಯಾಗಿದೆ. ಜನರ ಆದಾಯ ಕಡಿಮೆಯಾಗಿದೆ, 25 ಕೋಟಿ ಜನ ವಾಪಾಸ್ ಬಡತನ ರೇಖೆಗಿಂತ ಕೆಳಗಡೆ ಹೋಗಿದ್ದಾರೆ. ಇದಕ್ಕೆ ಪರಿಹಾರ ಹುಡುಕೋ ಬದಲು ಲಿಮಿಟ್ ಜಾಸ್ತಿ ಮಾಡಿದ್ದರಿಂದ ಪ್ರಯೋಜನವಿಲ್ಲ ಎಂದಿದ್ದಾರೆ.
undefined
Union Budget: ಕೇಂದ್ರದ ಬಜೆಟ್‌ಗೆ ಪರ-ವಿರೋಧ
ಪ್ರಧಾನಿ ಮತ್ತೆ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರವಾಗಿ ಪ್ರಸ್ತಾಪಿಸಿದ ಅವರು ನಾವು ಆಣೆಕಟ್ಟು ಕಟ್ಟಿದ್ದೇವೆ, ಗೇಟು ತೆಗೆಯೋಕೆ ಅವರು ಬರ್ತಿದ್ದಾರೆ, ಚಾಯ್ ಪೇ ಚರ್ಚಾ ಎಂದು ಹೇಳುತ್ತಾರಲ್ಲಾ. ಚರ್ಚೆಗೆ ಬರಲಿ ನಾವು ಸಿದ್ದರಿದ್ದೇವೆ. ಅವರಿಗೆ ಚಹಾ ಸಹ ನಾವೇ ಕುಡಿಸುತ್ತೇವೆ. ಚರ್ಚೆಗೆ ಬರಲಿ ಎಂದು ಪ್ರಧಾನಿ ಮೊದಿ ಅವರಿಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ.