Latest Videos

ಚನ್ನಪಟ್ಟಣ ಉಪಚುನಾವಣೆ: ಯಾರೇ ಅಭ್ಯರ್ಥಿ ಇದ್ರೂ ನನ್ನ ಮುಖ ನೋಡಿ ಓಟು ಹಾಕಿ: ಡಿಕೆ ಶಿವಕುಮಾರ

By Ravi JanekalFirst Published Jul 2, 2024, 5:37 PM IST
Highlights

ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆದಿಲ್ಲ. ಜನರ ಮನೆ ಬಾಗಿಲಿಗೇ ಸರ್ಕಾರವೇ ಬಂದಿರೋದು ಇದೇ ಮೊದಲು ಎಂದು ಡಿಸಿಎಂ ಡಿಕೆ ಶಿವಕುಮಾರ ನುಡಿದರು.

ಚನ್ನಪಟ್ಟಣ (ಜು.2): ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆದಿಲ್ಲ. ಜನರ ಮನೆ ಬಾಗಿಲಿಗೇ ಸರ್ಕಾರವೇ ಬಂದಿರೋದು ಇದೇ ಮೊದಲು ಎಂದು ಡಿಸಿಎಂ ಡಿಕೆ ಶಿವಕುಮಾರ ನುಡಿದರು.

ಇಂದು ಚನ್ನಪಟ್ಟಣದ ಭೈರಾಪಟ್ಟಣದಲ್ಲಿದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ, ಪ್ರತಿ ಜಿಲ್ಲೆಯಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಸಲು ಸಿಎಂ ಸೂಚನೆ ನೀಡಿದ್ರು. ಅದರಂತೆ ಚನ್ನಪಟ್ಟಣದಲ್ಲಿ ನಾನು ವಿಶೇಷ ಆದ್ಯತೆ ನೀಡಿ ಕಾರ್ಯಕ್ರಮ ಮಾಡ್ತಿದ್ದೇನೆ. ಜನರ ಸಮಸ್ಯೆಗಳನ್ನ ಬಗೆಹರಿಸಿ ತೊಂದರೆ ತಪ್ಪಿಸಬೇಕು. ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಟೈಂ ಪಿಕ್ಸ್ ಮಾಡ್ತಿದ್ದೇವೆ. ಶೀಘ್ರದಲ್ಲೇ ಜನರ ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕ್ಷೇತ್ರಕ್ಕೆ ಜಮೀರ್, ಕೃಷ್ಣಭೈರೇಗೌಡರು ಬರ್ತಾರೆ. ಇಲ್ಲಿ ರಿವ್ಯೂ ಮೀಟಿಂಗ್ ಮಾಡಿ ಸಮಸ್ಯೆ ಆಲಿಸುತ್ತಾರೆ. ಮತ್ತಷ್ಟು ಇಲಾಖೆ ಸಚಿವರು ಬಂದು ಅಹವಾಲು ಸ್ವೀಕರಿಸುತ್ತಾರೆ ಎಂದರು.

'ಸಿದ್ದರಾಮಯ್ಯ ಬದಲಿಗೆ ನನ್ನನ್ನೇ ಸಿಎಂ ಮಾಡಿ' ಎಂದ ಭೂಪ!

ಬೈಎಲೆಕ್ಷನ್ ಗೋಸ್ಕರ ಡಿಸಿಎಂ ಪ್ರವಾಸ ಎಂ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ, ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಎಲೆಕ್ಷನ್ ಗೋಸ್ಕರವೇ ಬರ್ತಾರೆ ಅಂತ ಅಂದುಕೊಳ್ಳಲಿ. ಇಲ್ಲಿ ಚೇರ್ ಖಾಲಿ ಆಗಿರೋದಕ್ಕೆ ಬಂದು ಕೂತಿದ್ದೀನಿ. ನಮ್ಮ ಡ್ಯೂಟಿ ನಾವು ಮಾಡ್ತಿದ್ದೀವಿ. ನಮಗೆ ರಾಜಕಾರಣ ಮುಖ್ಯ ಅಲ್ಲ, ಜನರ ಬದುಕು ಮುಖ್ಯ ಎಂದರು. ಇದೇ ವೇಳೆ ಉಪಚುನಾವಣೆಗೋಸ್ಕರ ಚನ್ನಪಟ್ಟಣಕ್ಎ ಸ್ಪೆಷಲ್ ಗ್ರಾಂಟ್ ಕೊಟ್ಟಿದ್ದಾರೆಂಬ ಅರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಿಜೆಪಿಯವರು, ದಳದವರು ಕೊಟ್ಟಿರಲಿಲ್ಲವ? ನಾವೂ ಹಾಗೆಯೇ ಕೊಡ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ದರ್ಶನ್ ರನ್ನ ಕಾಣಲು ಬಂದ ದಾಸಪ್ಪ; ಪರಪ್ಪನ ಅಗ್ರಹಾರ ಜೈಲಿನ ಮುಂದೆ ಶಂಖ ಊದಿ ಬಿಡುಗಡೆಗೆ ದೇವರ ಮೊರೆ!

ಚನ್ನಪಟ್ಟಣ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಯಾರೇ ಅಭ್ಯರ್ಥಿ ಆದರೂ ನನಗೆ ಓಟು ಹಾಕಿ ಅಭ್ಯರ್ಥಿ ನಾನೇ ಆದರೂ ನಾಮಿನಿ ಇರ್ತಾರೆ. ನನಗೆ ಓಟು ಹಾಕಿ ಎಂದೇ ಜನರಲ್ಲಿ ಕೇಳ್ತಿನಿ. ಯಾರೇ ಅಭ್ಯರ್ಥಿ ಆದರೂ ನನ್ನ ಮುಖ ನೋಡಿ ಓಟು ಹಾಕಿ ಎಂದು ಮನವಿ ಮಾಡ್ತೇವೆ ಎಂದರು.
 

click me!