ಚಾಮುಂಡಿ ಚಲೋ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ: ಆರ್.ಅಶೋಕ್ ಘೋಷಣೆ

Published : Aug 31, 2025, 06:19 PM IST
R Ashok

ಸಾರಾಂಶ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿದುಕೊಂಡು ಮಾಧ್ಯಮಕ್ಕೆ ತಿಳಿಸುತ್ತೇನೆ. ಚಾಮುಂಡಿ ಚಲೋ ಮಾಡುವ ಚಿಂತನೆಯಿದೆ. ರಾಜ್ಯಾದ್ಯಂತ ಎಲ್ಲಾ ಹಿಂದೂ ಸಂಘಟನೆಗಳು ಈ ಚಲೋದಲ್ಲಿ ಸೇರಲಿದ್ದಾರೆ.

ಬೆಂಗಳೂರು (ಆ.31): ಪದೇ ಪದೆ ಹಿಂದೂಗಳನ್ನು ಕೆಣಕುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲು ‘ಚಾಮುಂಡಿ ಚಲೋ‘ ಮಾಡುವ ಚಿಂತನೆಯಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಾನು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿದುಕೊಂಡು ಮಾಧ್ಯಮಕ್ಕೆ ತಿಳಿಸುತ್ತೇನೆ. ಚಾಮುಂಡಿ ಚಲೋ ಮಾಡುವ ಚಿಂತನೆಯಿದೆ. ರಾಜ್ಯಾದ್ಯಂತ ಎಲ್ಲಾ ಹಿಂದೂ ಸಂಘಟನೆಗಳು ಈ ಚಲೋದಲ್ಲಿ ಸೇರಲಿದ್ದಾರೆ. ಒಂದೊಂದೇ ಹಿಂದೂ ದೇವಸ್ಥಾನ ಮುಟ್ಟುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನಾವು ಎಚ್ಚರಿಕೆ ಸಂದೇಶ ನೀಡಲಿದ್ದೇವೆ ಎಂದರು.

ಸಿಎಂ ಸಿದ್ದು ಹಿಂದೂ ವಿರೋಧಿ ಕೆಲಸ: ಸಿದ್ದರಾಮಯ್ಯ ದಸರಾದಲ್ಲೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ಹಿಂದೂಗಳ ವಿರೋಧಿಯಾಗಿ ಕಾಣುತ್ತಿದ್ದಾರೆ. ಮಾತು ತೆಗೆದರೆ ನಾನು ಹಿಂದೂ ಎನ್ನುವ ಸಿದ್ದರಾಮಯ್ಯ ಹಿಂದೂ ವಿರೋಧಿ ಕೆಲಸ ಮಾಡುವುದರಲ್ಲಿ ಎತ್ತಿ ಕೈ. ಇದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ಇದೆಲ್ಲ ಮುಸ್ಲಿಂ ವೋಟ್‌ ಬ್ಯಾಂಕ್‌ ರಾಜಕಾರಣ ಎಂದು ಹಲವು ಮುಸ್ಲಿಂ ನಾಯಕರೇ ಹೇಳಿದ್ದಾರೆ. ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಆದರೂ ಮುಸ್ಲಿಂ ವ್ಯಕ್ತಿಯಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ಏಕೆ? ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಮತ್ತು ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಮುಸ್ಲಿಂ ನಾಯಕರೇ ಹೇಳುತ್ತಿದ್ದಾರೆ. ಅವರು ಮುಸ್ಲಿಂ ಸಮುದಾಯಕ್ಕೆ ಏನೂ ಮಾಡಿಲ್ಲ. ಈ ರೀತಿ ಪ್ರಚೋದನೆ ಮಾಡಿ ವೋಟ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಧರ್ಮಸ್ಥಳದಲ್ಲಿ ಸಮಾವೇಶ ಹಿಂದೂಗಳ ಕಾರ್ಯಕ್ರಮ: ಧರ್ಮ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ನಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಇದು ಯಾವುದೇ ಪೊಲಿಟಿಕಲ್‌ ಪಾರ್ಟಿ ಕಾರ್ಯಕ್ರಮವಲ್ಲ. ಇದು ಹಿಂದೂಗಳಿಗೆ ಸಂಬಂಧಪಟ್ಟಿದ್ದು. ಧರ್ಮಸ್ಥಳ ಅಪವಿತ್ರ ಮಾಡಬೇಕು ಎಂದು ಕೆಲ ವಿದೇಶಿ ಶಕ್ತಿಗಳು ರಾಜ್ಯ ಹಾಗೂ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದ್ದಾರೆ. ಇಂಥವರನ್ನು ಸರ್ಕಾರ ಮಟ್ಟ ಹಾಕಬೇಕಿತ್ತು. ಅದರೆ, ಸರ್ಕಾರದ ಎಡ ಬಿಡಂಗಿತದಿಂದ ಇದು ದೊಡ್ಡ ವಿಚಾರವಾಗಿಬಿಟ್ಟಿದೆ. ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!