ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್ ಗೆ ನಡೆಯುತ್ತೆ: ಕೇಂದ್ರ ಸಚಿವ ಜೋಶಿ ಕಿಡಿ

Published : Aug 31, 2025, 04:52 PM IST
Pralhad joshi

ಸಾರಾಂಶ

ಮೋಹನ್ ಭಾಗವತ್ ಅವರ 'ನಾವಿಬ್ಬರು ನಮಗೆ ಮೂವರು' ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಂಬಲ ವ್ಯಕ್ತಪಡಿಸಿದ್ದಾರೆ. ವೋಟ್ ಬಚಾವ್ ಆಂದೋಲನವನ್ನು ನುಸುಳುಕೋರರ ಬಚಾವ್ ಆಂದೋಲನ ಎಂದು ಕರೆದ ಜೋಶಿ, ಕಾಂಗ್ರೆಸ್ ಮತ್ತು ಮಹುವಾ ಮೈತ್ರಾ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ: ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್‌ಗೆ ತೊಂದರೆ ಇಲ್ಲ, ಆದರೆ ಹಿಂದೂಗಳಿಗೆ ಮೋಹನ್ ಭಾಗವತ್ ಕರೆ ಕೊಟ್ಟರೆ ಅದನ್ನು ಬ್ಯಾನ್ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಬ್ಬರು ನಮಗೆ ಮೂವರು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ನಾನು ಪೂರ್ಣ ಬೆಂಬಲ ನೀಡುತ್ತೇನೆ. ಆದರೆ ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳು ಈ ವಿಷಯವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸುತ್ತಿವೆ ಎಂದರು.

ವೋಟ್ ಬಚಾವ್ ಆಂದೋಲನದ ವಿರುದ್ಧ ಕಿಡಿ

ಇತ್ತೀಚೆಗೆ ಆರಂಭವಾಗಿರುವ ವೋಟ್ ಬಚಾವ್ ಆಂದೋಲನ ಎಂದರೆ ಇದು ನಿಜವಾದ ವೋಟ್ ಬಚಾವ್ ಅಲ್ಲ, ಇದು ನುಸುಳುಕೋರರ ಬಚಾವ್ ಆಂದೋಲನ. ಅಕ್ರಮ ವಲಸಿಗರು ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ. ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಯುದ್ಧ ನಡೆಸುತ್ತಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹುವಾ ಮೈತ್ರಾ ಮತ್ತು ಕಾಂಗ್ರೆಸ್ ವಿರುದ್ಧ ಟೀಕೆ

ಕೇಂದ್ರ ಸಚಿವರು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆಯಾದ ಮಹುವಾ ಮೈತ್ರಾ ವಿರುದ್ಧವೂ ತೀವ್ರ ಕಿಡಿಕಾರಿದರು. ಅವರು ಅಮಿತ್  ಶಾ ವಿರುದ್ಧ ಅಸಭ್ಯ ಪದಗಳನ್ನು ಬಳಸುತ್ತಿದ್ದಾರೆ. ಇದೇ ಕಾಂಗ್ರೆಸ್ ಮಟ್ಟವನ್ನು ತೋರಿಸುತ್ತದೆ. ಸೋಲಿನ ಹತಾಶೆಯಿಂದ ಈ ರೀತಿಯ ಅಸಭ್ಯ ಶಬ್ದಗಳನ್ನು ಬಳಸಿ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಅಮಿತ್ ಶಾ ತಲೆ ಕಡಿಯಬೇಕೆಂದು ಹೇಳುತ್ತಿದ್ದಾರೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತರುವ ಗಂಭೀರ ಹೇಳಿಕೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಅವರ ವಿದೇಶ ಪ್ರವಾಸದ ಉದ್ದೇಶ

ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಚೀನಾ ಪ್ರವಾಸದ ಕುರಿತು ಮಾತನಾಡುತ್ತಾ, ಮೋದಿ ಅವರು ದೇಶದಲ್ಲಿ ಸ್ವದೇಶಿ ಮಂತ್ರವನ್ನು ಪ್ರಚಾರ ಮಾಡುವ ಗುರಿ ಹೊಂದಿದ್ದಾರೆ. ವಿದೇಶ ವ್ಯವಹಾರಗಳ ವಿಷಯದಲ್ಲಿ ಸಂಬಂಧಪಟ್ಟವರು ಪ್ರತಿಕ್ರಿಯಿಸುತ್ತಾರೆ. ಆದರೆ ಪ್ರಧಾನಿ ಯಾವಾಗಲೂ ಭಾರತದ ಹಿತಾಸಕ್ತಿಯನ್ನು ಮೊದಲಿಗಾಗಿಟ್ಟುಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಅಕ್ರಮ ನುಸುಳಿಕೋರರ ಕುರಿತು ಎಚ್ಚರಿಕೆ

ಹುಬ್ಬಳ್ಳಿಯಲ್ಲಿಯೂ ಸಹ ಅಕ್ರಮ ನುಸುಳಿಕೋರರು ವಾಸಕ್ಕೆ ಬಂದಿದ್ದಾರೆ. ಅವರಿಂದ ಸ್ಥಳೀಯರ ಹಕ್ಕು ಕಸಿಯಲ್ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌