ಜಾತಿಗಳ ಹೆಸರಿನಲ್ಲಿ ಹಿಂದುಗಳನ್ನು ಒಡೆಯುವ ಹುನ್ನಾರ ರಾಹುಲ್‌ ಗಾಂಧಿಯದ್ದು: ಚಕ್ರವರ್ತಿ ಸೂಲಿಬೆಲೆ

By Kannadaprabha News  |  First Published Oct 7, 2023, 12:58 PM IST

ಜಾತಿ ಗಣತಿ ಹೆಸರಿನಲ್ಲಿ, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ಅಖಂಡವಾಗಿರುವ ಹಿಂದೂಗಳನ್ನು ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. 


ಕಲಬುರಗಿ (ಅ.07): ಜಾತಿ ಗಣತಿ ಹೆಸರಿನಲ್ಲಿ, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ಅಖಂಡವಾಗಿರುವ ಹಿಂದೂಗಳನ್ನು ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಶುಕ್ರವಾರ ಸಂಜೆ ಹಿಂದು ಜಾಗರಣ ವೇದಿಕೆಯ ಅಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ, ವಿಶ್ವಗುರು ಭಾರತ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಹಾರದಲ್ಲಿ ಜಾತಿ ಗಣತಿ ಮಾಡುತ್ತಿದ್ದು, ಇದನ್ನು ಕರ್ನಾಟಕದಲ್ಲಿಯೂ ನಡೆಸಬೇಕು ಎಂದು ಸರ್ಕಾರದ ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಒಡೆಯುವ ಕೆಲಸವೆ ಹೊರತು, ಜೋಡಿಸುವ ಕೆಲಸವಲ್ಲ. ಸನಾತನ ಧರ್ಮದ ನಿರ್ಮೂಲನೆ ಮಾಡುವವರು ಈ ನೆಲದಲ್ಲಿ ಬೇರೂರಿದ್ದು, ನನಗೆ ಜೈಲಿಗೆ ಹಾಕುವ ಬೆದರಿಕೆ ನೀಡಿದ್ದಾರೆ. ಆದರೆ, ಜೈಲಿಗೆ ಹೋಗುವುದು ನಮ್ಮಂತಹವರಿಗೆ ಹೊಸದೇನಲ್ಲ. ಹೀಗಾಗಿ ನಿನ್ಯಾವ ಕೊತ್ವಾಲ್ ನಾಯಕ ನನ್ನನ್ನು ಜೈಲಿಗೆ ಹಾಕಲು ಎಂದು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿವಿದರು. ಜಗತ್ತಿನ 20 ರಾಷ್ಟ್ರಗಳು ಭಾರತದಲ್ಲಿ ಒಂದೇ ವೇದಿಕೆಯ ಅಡಿಯಲ್ಲಿ ಕೂತು ಭಾರತದ ಆತಿಥ್ಯವನ್ನು ಸ್ವೀಕರಿಸಿದ್ದು, ಭಾರತದ ಶಕ್ತಿ ಏನೆಂಬುದು ಸಾಬೀತಾಗಿದೆ. 

Latest Videos

undefined

ವಿದ್ಯಾರ್ಥಿನಿಯಿಂದ ಶೌಚಾಲಯ ಕ್ಲೀನ್ ಮಾಡಿಸಿರೋ ಶಿಕ್ಷಕರು: ಆಸಿಡ್, ಬ್ಲಿಚಿಂಗ್ ವಾಸನೆಗೆ ಅಸ್ವಸ್ಥಗೊಂಡ ಬಾಲಕಿ

ಹೀಗಾಗಿ ಪ್ರಧಾನಿ ಮೋದಿಗೆ ಹಾಗೂ ಅವರ ದೂರದೃಷ್ಟಿಯ ಆಲೋಚನೆಗಳಿಗೆ ಗೌರವ ನೀಡಿದರೆ, ಈ ದೇಶಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು. ಭಾರತ ವಿಶ್ವಗುರುವಾಗಲು ಎರಡು ಸಣ್ಣ ಗೆರೆಗಳು ಮಾತ್ರ ಬಾಕಿಯಿದ್ದು, ಆ ಕನಸು ನನಸು ಮಾಡುವ ಸಂಕಲ್ಪ ದೇಶದ ಪ್ರಧಾನಿ ಮೋದಿ ಅವರದ್ದಾಗಿದೆ. ಇಂತಹ ಕಾಲಘಟ್ಟಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ ಎಂದರು. ಭಾರತದ ಮೂಲ ಬೇರು ಸನಾತನ ಧರ್ಮ, ಇದನ್ನು ನಿಮೂ೯ಲನೆ ಮಾಡಬೇಕೆಂಬ ಸ್ಟಾಲಿನ್ ಕನಸು ನನಸಾಗುವುದಿಲ್ಲ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯನವರ ಸಂಪೂರ್ಣ ಕ್ಯಾಬಿನೆಟ್ ಸಚಿವರು ಶಕ್ತಿ ಹಾಕಿದ್ರೂ, ಭಾರತ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಯಾವ ದೇಶವನ್ನು ಹಾವಾಡಿಗರ ದೇಶ, ಬುದ್ಧಿ ಇಲ್ಲದವರ ದೇಶವೆಂದು ಹೇಳಿದ ದೇಶಗಳಿಗೆ ಭಾರತ ಕೋವಿಡ್ ಕಾಲದಲ್ಲಿ ವ್ಯಾಕ್ಸಿನ್ ವಿತರಣೆ ಮಾಡಿತು. ಇಂತಹ ಸೇವಾ ಮನೋಭಾವ ಹೊಂದಿರುವ ನಾಯಕನನ್ನು ಸೋಲಿಸುವ ಹುನ್ನಾರವನ್ನು ಇಂಡಿಯಾ ಒಕ್ಕೂಟ ಹೊಂದಿದ್ದು, ನಿಮ್ಮ ಕನಸು 2024ರಲ್ಲಿಯೂ ಕೂಡ ನೆರವೇರುವುದಿಲ್ಲ. ಹೀಗಾಗಿ ನಾವೆಲ್ಲರೂ ದೇಶವನ್ನು ವಿಶ್ವದಾದ್ಯಂತ ಗಟ್ಟಿಯಾಗಿ ನಿಲ್ಲಿಸುವಂತಹ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಮಾಡೋಣಾ ಎಂದರು.

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್‌: ಮಾಜಿ ಶಾಸಕ ಸುರೇಶ್‌ ಗೌಡ

ಇಂದಿನ ತರುಣರು, ಮುಂದಿನ ಮುದುಕರು, ಈ ಭಾರತವನ್ನು ವಿಶ್ವಗುರುವಾಗಿ ನೋಡುತ್ತಾರೆ ಎಂದು ಆರ್‌ಎಸ್‌ಎಸ್‌ ಸಂಘ ಚಾಲಕರಾದ ಡಾ.ಮೋಹನ್ ಭಾಗ್ವತ್ ಹೇಳಿದ್ದು, ಸುರಕ್ಷಿತ, ಸುಭದ್ರ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಮತ್ತೊಂದು ಸಲ ಮೋದಿಯವರನ್ನು 2024ರಲ್ಲಿ ಆರಿಸಿ ತರಬೇಕು. ಹೀಗಾಗಿ ಅಟಲ್ ಜೀ ಅವರಿಗೆ ಆದಂತಹ ಸೋಲು, ಮೋದಿ ಅವರಿಗೆ ಆಗಬಾರದು, ಹೀಗಾಗಿ ಜಾಗೃತರಾಗಿ, ಎದ್ದೇಳಿ ಎಂದು ದೇಶದ ಜನರಿಗೆ ಕರೆ ನೀಡಿದರು.
- ಚಕ್ರವರ್ತಿ ಸೂಲಿಬೆಲೆ

click me!