ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್‌: ಮಾಜಿ ಶಾಸಕ ಸುರೇಶ್‌ ಗೌಡ

Published : Oct 07, 2023, 10:15 AM IST
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್‌: ಮಾಜಿ ಶಾಸಕ ಸುರೇಶ್‌ ಗೌಡ

ಸಾರಾಂಶ

ಕುಮಾರಸ್ವಾಮಿ ಅವರು ತಂದೆ ಸಾಧನೆ ಹೇಳಿಕೊಳ್ಳೋದು ಏನು ತಪ್ಪು? ನಿಮ್ಮಪ್ಪ ಏನಾದ್ರು ಸಾಧನೆ ಮಾಡಿದ್ರೆ ತೋರಿಸು. ಜೆಡಿಎಸ್ ಬಿಜೆಪಿ‌ ಒಂದಾಗಿದೆ ಎಂದು‌ ಕಣ್ಣು ಬಿಟ್ಟುಕೊಂಡು‌ ಹೇಳ್ತಾ ಇದೀಯಾ.ನಿಂಗೆ ಎಲ್ಲಿ ಎಲ್ಲಿ‌ ನೋವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್‌ ಗೌಡ ವಾಗ್ದಾಳಿ ನಡೆಸಿದ್ದಾರೆ. 

ಮಂಡ್ಯ (ಅ.07): ಕುಮಾರಸ್ವಾಮಿ ಅವರು ತಂದೆ ಸಾಧನೆ ಹೇಳಿಕೊಳ್ಳೋದು ಏನು ತಪ್ಪು? ನಿಮ್ಮಪ್ಪ ಏನಾದ್ರು ಸಾಧನೆ ಮಾಡಿದ್ರೆ ತೋರಿಸು. ಜೆಡಿಎಸ್ ಬಿಜೆಪಿ‌ ಒಂದಾಗಿದೆ ಎಂದು‌ ಕಣ್ಣು ಬಿಟ್ಟುಕೊಂಡು‌ ಹೇಳ್ತಾ ಇದೀಯಾ. ನಿಂಗೆ ಎಲ್ಲಿ ಎಲ್ಲಿ‌ ನೋವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್‌ ಗೌಡ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಅತ್ಯಂತ ಭ್ರಷ್ಟಾಚಾರ ಮಾಡ್ತಾ ಇರೋದು ಚಲುವರಾಯಸ್ವಾಮಿ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್‌. ಇವನು ಕೇವಲ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಬೈಯ್ಕೊಂಡು ರಾಜಕೀಯ ಮಾಡಬೇಕು ಅಷ್ಟೇ.  ನಾವು ಬಿಜೆಪಿ ಜೊತೆ ಮೈತ್ರಿಯಾಗಿರೋದೆ ಇಂತಹ ಭ್ರಷ್ಟ ಸರ್ಕಾರ ತೆಗೆಯಲು. ಇವರ ಭ್ರಷ್ಟಾಚಾರ ಒಂದೇ ಒಂದೇ  ಹೊರಗೆ ಬರುತ್ತೆ ಎಂದರು.

ಮಂಡ್ಯ ಜಿಲ್ಲೆಯ ಇಲಾಖೆಗಳಲ್ಲಿ ಚಲುವರಾಯಸ್ವಾಮಿ ಸಂಬಂಧಿಕರೆ ಇದ್ದಾರೆ. ಮಂಡ್ಯ‌ ಜಿಲ್ಲೆ ಇವರ ಅಪ್ಪನ ಮನೆ ಆಸ್ತಿನಾ. ಇವರು ಎಲ್ಲಾ ಗಂಜಿ ಗಿರಾಕಿಗಳು. ಇವರು ಕುಮಾರಸ್ವಾಮಿ ಅವರು ಕೊಟ್ಟ ಪ್ರಸಾದದಿಂದ ಬದುಕಿದ್ದಾರೆ. ಚಲುವರಾಯಸ್ವಾಮಿ ಯಕಕ್ಷಿತ್ ಒಬ್ಬ ಗುತ್ತಿಗೆದಾರ. ಇಂತಹವನು ಈ‌ ಮಟ್ಟಕ್ಕೆ ಬರಲು‌ ಕುಮಾರಸ್ವಾಮಿ ಅವರು ಕಾರಣ. ಚಲುವರಾಯಸ್ವಾಮಿ ಏನು 50 ಸಾವಿರ ಲೀಡ್‌ನಲ್ಲಿ‌ ಗೆದ್ದಿಲ್ಲ. ಖರ್ಗೆ ಅವರನ್ನು ಸಿಎಂ‌ ಮಾಡ್ತೀವಿ ಎಂದು ದಲಿತರಿಗೆ, ಡಿಕೆ ಸಿಎಂ ಮಾಡ್ತೀವಿ ಎಂದು ಒಕ್ಕಲಿಗರಿಗೆ ಸುಳ್ಳು‌ ಹೇಳಿದ್ದಾರೆ. ಚುನಾವಣೆ ವೇಳೆ ಹೆಂಗಸು‌ ಅಳುವುದಿಲ್ಲ‌ ಹಾಗೆ ನಾಗಮಂಗಲದಲ್ಲಿ ಅತ್ತಿದ್ದಾರೆ ಎಂದು ಟೀಕಿಸಿದರು. 

ವಿದ್ಯಾರ್ಥಿನಿಯಿಂದ ಶೌಚಾಲಯ ಕ್ಲೀನ್ ಮಾಡಿಸಿರೋ ಶಿಕ್ಷಕರು: ಆಸಿಡ್, ಬ್ಲಿಚಿಂಗ್ ವಾಸನೆಗೆ ಅಸ್ವಸ್ಥಗೊಂಡ ಬಾಲಕಿ

ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಫಸ್ಟ್‌: ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 300 ರಿಂದ 400 ಕೋಟಿ ರು. ಲೂಟಿ ಹೊಡೆದಿದ್ದಾನೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್‌ ಮಾಡುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ, ಈ ಸರ್ಕಾರ ಭ್ರಷ್ಟಹಣವನ್ನು ಏರ್‌ಲಿಫ್ಟ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ ಗ್ಯಾರಂಟಿಯಿಂದ ಯಾವುದೇ ಯೋಜನೆಗೆ ಹಣ ಇಲ್ಲ: ರಾಜೀವ್‌ ಚಂದ್ರಶೇಖರ್

ಸರ್ಕಾರದ ಸಚಿವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಅಧಿಕಾರ ಸಿಕ್ಕಾಗ ಜನಗಳಿಗೆ ಒಳ್ಳೆಯದು ಮಾಡಬೇಕು. ಆದರೆ, ಇವರು ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ರು. ಲೂಟಿ ಹೊಡೆದಿದ್ದಾನೆ ಎಂದು ಆರೋಪಿಸಿದರು. ಟ್ರಾನ್ಸ್‌ಫರ್‌ನಲ್ಲಿ .150 ಕೋಟಿ, ಜಲಧಾರೆ ಯೋಜನೆ .100 ಕೋಟಿ ನಂತೆ ಅಧಿಕಾರಗಳ ಬಳಿ ಲೂಟಿ ಮಾಡಲಾಗುತ್ತಿದೆ. .300 ಕೋಟಿಗಳನ್ನು ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಇಡೀ ಕಾಂಗ್ರೆಸ್‌ ಹಣ ಏರ್‌ಲಿಫ್ಟ್‌ ಮಾಡ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಕರ್ನಾಟಕದಿಂದ ಫಂಡ್‌ ಹೋಗುತ್ತಿದೆ ಎಂದು ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ