ಕಾಂಗ್ರೆಸ್‌ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ : ಚಕ್ರವರ್ತಿ ಸೂಲಿಬೆಲೆ

By Govindaraj S  |  First Published Dec 24, 2023, 8:03 AM IST

ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಇದಕ್ಕಿಂತ ಭಿನ್ನ ನಿರೀಕ್ಷೆ ನಮಗಿರಲಿಲ್ಲ. ಕಾಂಗ್ರೆಸ್ ಒಂದು ರೀತಿ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ. ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲ ಎಂದು ನಮೋ ಬ್ರಿಗೇಡ್ನ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಟುವಾಗಿ ಟೀಕಿಸಿದರು.


ಬೆಳಗಾವಿ (ಡಿ.24): ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಇದಕ್ಕಿಂತ ಭಿನ್ನ ನಿರೀಕ್ಷೆ ನಮಗಿರಲಿಲ್ಲ. ಕಾಂಗ್ರೆಸ್ ಒಂದು ರೀತಿ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ. ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲ ಎಂದು ನಮೋ ಬ್ರಿಗೇಡ್ನ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಟುವಾಗಿ ಟೀಕಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾನೂನು ಹೇಳಿದನ್ನು ಒಪ್ಪಿಕೊಳ್ಳುವಂತಹ ದಾವಂತವೂ ಇಲ್ಲ. ಹೇಗಾದರೂ ಮಾಡಿ ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆಯುವುದೇ ಅವರ ತಂತ್ರವಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಆಗಿ ಮಾರ್ಪಟ್ಟಿದೆ ಎಂದು ಹರಿಹಾಯ್ದರು.

ನಾವು ಶಿಕ್ಷಣ ನೀತಿ ಸಮಾನತೆ ಇರಬೇಕೆಂದು ವಸ್ತ್ರ ಸಂಹಿತೆ ಜಾರಿಯಿದೆ. ಹಿಜಾಬ್ ಹಾಕಿಕೊಂಡು ತಿರುಗುವುದನ್ನು ಪಿಎಫ್ಐ ಮಾಡಿದರು. ಪಿಎಫ್ಐ ಬೆಂಬಲಿಗರಂತೆ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೇಸ್‌ಗಳನ್ನು ತೆರವು ಮಾಡಿದರು. ಈಗ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಹಿಜಾಬ್ ನಿಷೇಧ ತೆರವು ಮಾಡಿದ್ದಾರೆ.ಬಹಳ ದುರಂತಕಾರಿ ಸಂಗತಿ ಇದು ಎಂದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ತ್ರಿವಳಿ ತಲಾಖ್ ಹಿಂಪಡೆದರು. ಹಿಜಾಬ್ ತರಗತಿಯಲ್ಲಿ ಬೇಡ ಎಂದು ಹೇಳಿದರು. ಈಗ ಕಾಂಗ್ರೆಸ್ ಅವುಗಳನ್ನು ಜಾರಿಗೊಳಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷೆ ಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಇದು ಎಂದು ಕಿಡಿಕಾರಿದರು.

Tap to resize

Latest Videos

ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ: ಸಚಿವ ತಂಗಡಗಿ

ಹಿಜಾಬ್‌ಗೆ ಅನುಮತಿ ನೀಡಿದರೆ ಕೇಸರಿ ಶಾಲು ಧಾರಣೆಗೆ ಅನುಮತಿ ಕೊಡಿ ಎಂಬ ಬೇಡಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಇದು ಈ ಹಿಂದೆಯೂ ಗಲಾಟೆ ಆಗಿತ್ತು, ಈಗಲೂ ಗಲಾಟೆ ಆಗಲಿದೆ. ಇದು ಇನ್ನೊಂದು ವೈರತ್ವಕ್ಕೆ ಕಾರಣವಾಗಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕಿಡಿ ಹಚ್ಚಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಕಾಂಗ್ರೆಸ್ ಹಿಜಾಬ್ ಧಾರಣೆ ನಿಷೇಧ ರದ್ದು ಮಾಡುತ್ತಿರುವುದು ದುರಂತ ಎಂದರು.

ಕಾಲೇಜು ಮಕ್ಕಳಲ್ಲಿ ಸಹಜವಾಗಿಯೇ ವಸ್ತ್ರಧಾರಣೆ ಸಂಬಂಧ ಗಲಾಟೆಗೆ ಕಾರಣವಾಗಲಿದೆ. ಇದನ್ನು ಬಿಜೆಪಿಯವರು, ವಿಪಕ್ಷ ನಾಯಕ ಆರ್. ಅಶೋಕ ಹೇಳುವುದಲ್ಲ. ಮುಸ್ಲಿಂ ಹುಡುಗಿಯರು ಹಿಜಾಬ್ ಹಾಕಿಕೊಂಡಾಗ ಹಿಂದೂ ಹುಡುಗರು ಕೇಸರಿ ಹಾಕೊಂಡಾಗ ಯಾರೂ ವಿರೋಧಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಅತ್ಯಂತ ಕಡಿಮೆ ಅವಧಿಯಲ್ಲಿ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದರು.

ತುಷ್ಠಿಕರಣ ಮೂಲಕ ಸಿದ್ದರಾಮಯ್ಯನವರು ಈಗ ಮತಗಳಿಗಳಿಕೆಗೆ ಹಾಗೆ ಮಾಡಿದ್ದಾರೆ. ₹ 10 ಸಾವಿರ ಕೋಟಿ ಮುಸ್ಲಿಂ ಸಮುದಾಯಕ್ಕೆ ನೀಡುವುದಾಗಿ ಸಿಎಂ ಹೇಳಿದ್ದಾರೆ. ಇಷ್ಟೊಂದು ಹಣವನ್ನು ಎಲ್ಲಿಂದ ತೆಗೆದುಕೊಂಡಿದ್ದಾರೆ. ಎಸ್‌ಸಿ, ಎಸ್‌ಟಿ , ಒಬಿಸಿ ಪಂಡ್‌ನಿಂದ ತೆಗೆದುಕೊಡುತ್ತಾರೆಯೇ ಎಂದ ಅವರು, ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ಸಿದ್ದರಾಮಯ್ಯ ತಪ್ಪು ದಾರಿಯಲ್ಲಿ ನಡೆಯುತ್ತಿದ್ದು, ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಕರ್ನಾಟಕವನ್ನು ಕಷ್ಟಪಟ್ಟು 25 ವರ್ಷ ಮುಂದೆ ತೆಗೆದುಕೊಂಡು‌ ಹೋಗಲಾಗಿತ್ತು. ಆದರೆ ಈಗಿನ ಸರ್ಕಾರ 50 ವರ್ಷ ಹಿಂದಕ್ಕೆ ಕರೆದೊಯ್ಯಲು ಬೇಕಾದಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ

ಹಿಂದೂಗಳು ಇಂಥ ಕಷ್ಟ ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಸರ್ಕಾರ ಬಂದ ತಕ್ಷಣವೇ ನಾನು ಹೇಳಿದ್ದೆ. ಪೊಲೀಸರೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದರು. ಇದು ದೊಡ್ಡ ದುರಂತಕಾರಿ ಸಂಗತಿ. ನಾವು ಮಾತನಾಡಬಾರದೆಂದು ಹೀಗೆ ಮಾಡಿದರು. ಆದರೆ ನಾವು ಮಾತನಾಡುತ್ತೇವೆ. ನಾವು ಇದನ್ನು ಸಮಾಜದ ಗಮನಕ್ಕೆ ತರುತ್ತೇನೆ. ಹಿಂದೂ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರ ಪಕ್ಕಾ ಮುಸ್ಲಿಂ ಪಕ್ಷ ಎಂದು ಗೊತ್ತಾಗಿದೆ. ಆದರೆ ಇಂದು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೂ ಗೊತ್ತಾಗಲಿದೆ. ನಮ್ಮನ್ನು ಉದ್ಧಾರ ಮಾಡಲು ಹೀಗೆ ಮಾಡುತ್ತಿಲ್ಲ, ಹಿಂದಕ್ಕೆ ಒಯ್ಯಲು ಹೀಗೆ ಮಾಡುತ್ತಿದ್ದಾರೆ ಎಂದು ಅವರಿಗೂ ಗೊತ್ತಾಗಲಿದೆ ಎಂದರು.

click me!