ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸ್ಪಂದಿಸಲಿದೆ: ಶಾಸಕ ವಿಜಯೇಂದ್ರ

By Kannadaprabha News  |  First Published Nov 10, 2023, 2:00 AM IST

ಇಡೀ ರಾಜ್ಯಕ್ಕೆ 340 ಕೋಟಿ ರು.ಗಳ ಅವೈಜ್ಞಾನಿಕ ಬರ ಪರಿಹಾರ ಘೋಷಣೆ ಮಾಡಿದ ರಾಜ್ಯ ಸರ್ಕಾರ, ರೈತ ವಿರೋಧಿ ಸರ್ಕಾರ ಎಂಬುವುದಾಗಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. 


ಹುಮನಾಬಾದ್ (ನ.10): ಇಡೀ ರಾಜ್ಯಕ್ಕೆ 340 ಕೋಟಿ ರು.ಗಳ ಅವೈಜ್ಞಾನಿಕ ಬರ ಪರಿಹಾರ ಘೋಷಣೆ ಮಾಡಿದ ರಾಜ್ಯ ಸರ್ಕಾರ, ರೈತ ವಿರೋಧಿ ಸರ್ಕಾರ ಎಂಬುವುದಾಗಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ತಾಲೂಕಿನ ಹುಡಗಿ ಗ್ರಾಮದ ಜಮೀನಿನಲ್ಲಿ ಬುಧವಾರ ಬರ ಪರಿಸ್ಥಿತಿ ಅಧ್ಯಯನ ಮಾಡಿ, ರೈತರು ಪ್ರತಿ ಏಕರೆಗೆ 25 ಸಾವಿರ ರು. ಕನಿಷ್ಠ ಖರ್ಚು ಮಾಡಿದ್ದು, ರಾಜ್ಯ ಸರ್ಕಾರ ಅವೈಜ್ಞಾನಿಕ ಪರಿಹಾರ ಘೋಷಣೆ ಮಾಡಿ ರಾಜ್ಯದ ರೈತರಿಗೆ ಕೇವಲ ಶೇ.1ರಷ್ಟು ಮಾತ್ರ ನೀಡಿದ್ದಲ್ಲದೆ ಪಂಪಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಳ್ಳಲು ಎರಡು ಲಕ್ಷ ಹಣ ಕಟ್ಟಬೇಕು ಎಂಬ ಆದೇಶ ಹೊರಡಿಸಿದ್ದು, ಅಲ್ಲದೆ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅಸಡ್ಡೆಯ ನಡುವಳಿಕೆ ಪ್ರದರ್ಶಿಸಿದೆ ಎಂದರು.

ಬರಗಾಲ ರಾಜ್ಯದಲ್ಲೆ ಅಷ್ಟೆ ಅಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ಆವರಿಸಿದೆ. ಬರ ಪರಿಹಾರ ವಿತರಿಸಲು ಕೇಂದ್ರ ಖಂಡಿತ ಸ್ಪಂದಿಸಲಿದೆ, ಪರಿಹಾರದ ಹಣವೂ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಜೊತೆಗೆ ಐದು ವರ್ಷ ಸತತ ಪಡಿತರ ಅಕ್ಕಿ ನೀಡುವ ಭರವಸೆ ನೀಡಿದೆ ಎಂದು ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ದರೆ, ಪ್ರಧಾನ ಮಂತ್ರಿಗಳ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಧನದ ಜೊತೆಗೆ ಹಿಂದಿನ ಯಡಿಯೂರಪ್ಪ ಅವರ ರಾಜ್ಯದ ಬಿಜೆಪಿ ಸರ್ಕಾರ ರೈತರಿಗೆ ನಾಲ್ಕು ಸಾವಿರ ಪರಿಹಾರ ಧನ ವಿತರಣೆ ಮಾಡುತ್ತಿದ್ದನ್ನು ಯಾಕೆ ನಿಲ್ಲಿಸಿದೆ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಬರಗಾಲದಲ್ಲಿ ರೈತರಿಗೆ ಸಾಂತ್ವನ ಹೇಳದ ರಾಜ್ಯ ಸರ್ಕಾರ: ಕೆ.ಎಸ್.ಈಶ್ವರಪ್ಪ ಆರೋಪ

ಬೀದರ್‌ ಜಿಲ್ಲೆಯ ಉಸ್ತುವಾರಿ ಸಚಿವರ ಜಿಲ್ಲೆಯಯಲ್ಲಿ 10-12 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬರಗಾಲ ಕುರಿತು ಎಷ್ಟು ಸಭೆಗಳನ್ನು ಮಾಡಿದ್ದಾರೆ. ಎಷ್ಟು ತಾಲೂಕುಗಳಿಗೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಶಾಸಕರಾದ ಡಾ. ಸಿದ್ದಲಿಂಗಪ್ಪ (ಸಿದ್ದು) ಪಾಟೀಲ್‌, ಫ್ರಭು ಚವ್ಹಾಣ್‌, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಸುಭಾಷ ಕಲ್ಲೂರ, ಬಾಬು ವಾಲಿ, ಸಂತೋಷ ಪಾಟೀಲ್‌, ಭದ್ರೇಶ ಪಾಟೀಲ್‌, ಸುನೀಲ್‌ (ಕಾಳಪ್ಪ) ಪಾಟೀಲ್‌ ಹಾಗೂ ಸೋಮನಾಥ ಪಾಟೀಲ್‌ ಸೇರಿದಂತೆ ಅನೇಕರಿದ್ದರು.

ಸಮರ್ಪಕ ವಿದ್ಯುತ್‌ಗೆ ಸರ್ಕಾರ ಕೊಕ್ಕೆ, ಬೆಳೆ ನಾಶಕ್ಕೆ ಕಾರಣ: ಬರಗಾಲ ಇದ್ದರೂ ಕೆಲವು ಕಡೆ ರೈತರು ಪಂಪ್‌ಸೆಟ್‌ಗಳಿಂದ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ ಸಮರ್ಪಕವಾಗಿ ವಿದ್ಯುತ್‌ ನೀಡದ ಕಾರಣ ಪರಸ್ಥಿತಿ ಮತ್ತಷ್ಟು ಬಿಗಾಡಿಯಿಸಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು. ಅವರು ತಾಲೂಕಿನ ಮುಡಬಿ, ಚಿಕನಾಗಾಂವ್‌ ಗ್ರಾಮಗಳಲ್ಲಿರುವ ರೈತ ಹೊಲಗಳಿಗೆ ಅವರು ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ ಅವರೊಟ್ಟಿಗೆ  ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ, ಕರ್ನಾಟಕ ಸರ್ಕಾರವು ಭೀಕರ ಬರಗಾಲ ಬಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇದ್ದಿದ್ದು ಖಂಡನೀಯ.

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಈ ಕುರಿತು ರಾಜ್ಯ ಬಿಜೆಪಿಯು ಎಲ್ಲಾ ಕಡೆ ರೈತರ ಸಮಸ್ಯೆಗಳ ಬರ ಅಧ್ಯಯನಕ್ಕೆ ತಂಡವಾಗಿ ಓಡಾಡುತ್ತಿದ್ದು ನಾನು ಇಲ್ಲಿ ಕಂಡ ರೈತರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಲು ಹೋರಾಟ ಮಾಡಲಾಗುವುದು ಎಂದರು. ಈ ಸಂಧರ್ಭದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ರೈತ ಮೋರ್ಚಾ ವೀಭಾಗೀಯ ಪ್ರಮುಖರಾದ ಕುಶಾಲ ಪಾಟೀಲ್‌ ಗಾದಗಿ, ಅರವಿಂದ ಮುತ್ತೆ, ಸಿದ್ದು ಬಿರಾದಾರ, ಸೂರ್ಯಕಾಂತ ಚಿಲ್ಲಾಬಟ್ಟೆ ಮತ್ತಿತರರು ಇದ್ದರು.

click me!