ದೇಶದ ಹಿತ, ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರದ ಸ್ಪಂದನೆ: ರೇಣುಕಾಚಾರ್ಯ

By Kannadaprabha News  |  First Published Feb 29, 2024, 9:23 PM IST

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳ ಮನೆ, ಮನೆಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 


ಹೊನ್ನಾಳಿ (ಫೆ.29): ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳ ಮನೆ, ಮನೆಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ವಿವಿಧ ಬಡಾವಣೆಯಲ್ಲಿ ವಿಕಸಿತ ಭಾರತಕ್ಕಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮಚಲೋ ಕಾರ್ಯಕ್ರಮ ಹಾಗೂ ಮತ್ತೊಮ್ಮೆ ನರೇಂದ್ರಮೋದಿ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ದೇಶದ ಹಿತಕ್ಕಾಗಿ ಹಾಗೂ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿರುವುದರಿಂದ ವಿಶ್ವದಲ್ಲಿಯೇ ಸರ್ವಶ್ರೇಷ್ಠ ಜನಪ್ರತಿನಿಧಿಯಾಗಿ ಹೊರಹೊಮ್ಮಿ ಮೊದಲ ಸ್ಥಾನದಲ್ಲಿದ್ದಾರೆ ಎಂದರು. 

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಮಾತ್ರವಲ್ಲದೇ ದೇಶದ ಹಿತಕ್ಕೆ ಕಂಟಕವಾಗಿದ್ದ ಪರಿಚ್ಛೇದ 370 ಕಾಯ್ದೆ ತೆಗೆದು ಹಾಕಿದ್ದು ಬಹುದೊಡ್ಡ ಸಾಧನೆ. ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ, ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ, ಮುದ್ರಾ ಯೋಜನೆ, ಬೆಳೆವಿಮೆ, ಮೇಕ್‌ ಇನ್ ಇಂಡಿಯಾ, ಉಜ್ವಲ ಯೋಜನೆ, ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿ ಸೇರಿ ಹತ್ತು ಹಲವು ಯೋಜನೆಗಳ ಜಾರಿಗೆ ತಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

Tap to resize

Latest Videos

undefined

ಕಾಂಗ್ರೆಸ್‌ಗೆ ದೇಶಕಿಂತ ದೇಶದ್ರೋಹಿಗಳೇ ಮೆಚ್ಚು: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲ: ಉಚಿತ ಗ್ಯಾರಂಟಿಗಳ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ನಂತರ ಎಲ್ಲಾ ಗ್ಯಾರಂಟಿಗಳ ಸ್ಥಗಿತಗೊಳಿಸುವುದು ಖಚಿತ . ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ. ಯಾವುದೇ ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತಿಲ್ಲ ಈ ಮಾತನ್ನು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು. ಲೋಕಸಭಾ ಚುನಾವಣೆ ಬರುತ್ತಿದೆ, ನಾವೆಲ್ಲರೂ ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ತಿಳಿಸಬೇಕು.

ಈ ವಿಷಯದಲ್ಲಿ ಯಾರೂ ಮೈಮರೆಯಬಾರದು, ಕೆಲಸ ಮಾಡಿದ್ದೇವೆ, ರಾಷ್ಟ್ರಕ್ಕೊಬ್ಬ ಸಮರ್ಥ ನಾಯಕ ಸಿಕ್ಕಿದ್ದಾರೆ, ಅಂತಹ ಪ್ರಧಾನಿ ನಾವು ಉಳಿಸಿಕೊಳ್ಳಬೇಕು, ನಮ್ಮ ಪ್ರಧಾನಿ ದೇಶದಲ್ಲಿ ಮಾತ್ರ ಅಲ್ಲದೆ ಇಡೀ ಪ್ರಪಂಚದಲ್ಲಿ ಮೋದಿಯಂತಹ ನಾಯಕ ಇರಬೇಕಿತ್ತು ಎಂದು ಹೇಳುತ್ತಿರುವ ವಿಷಯ ಪತ್ರಿಕೆಯಲ್ಲಿ ಬಂದಿರುವುದು ನಾವು ನೀವು ನೋಡಿದ್ದೇವೆ. ಹೆಮ್ಮೆಯಿಂದ ನಮ್ಮ ಪಕ್ಷಕ್ಕೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ರಾಜ್ಯ ಬಿಜೆಪಿ ಒಬಿಸಿ ಉಪಾಧ್ಯಕ್ಷ ಕುಭೇಂದ್ರಪ್ಪ, ಪುರಸಭೆ ಸದಸ್ಯರಾದ ರಂಗನಾಥ್, ಧರ್ಮಪ್ಪ, ಕೆ.ವಿ.ಶ್ರೀಧರ್ ಹಾಗೂ ಇತರ ಮುಖಂಡರು ಇದ್ದರು.

ಸಂಸದ ರಾಘವೇಂದ್ರ ಗೆಲ್ಲಿಸಿ, ಮೋದಿ ಕೈ ಬಲಪಡಿಸಬೇಕು: ಯಡಿಯೂರಪ್ಪ ಮನವಿ

ದೂರದೃಷ್ಟಿಯುಳ್ಳ ಯೋಜನೆಗಳ ಜಾರಿ: ನರೇಂದ್ರ ಮೋದಿಯವರು ಚುನಾವಣೆಗಾಗಿ ಇಲ್ಲ ಸಲ್ಲದ ಯೋಜನೆಗಳ ಯಾವುದೇ ಕಾರಣಕ್ಕೂ ಜಾರಿಗೆ ತರಲಿಲ್ಲ. ಮೋದಿಯವರು ದೂರದೃಷ್ಟಿಯುಳ್ಳ ಶಾಶ್ವತ ಯೋಜನೆಗಳ ರೂಪಿಸಿ ಜನರ ಹಾಗೂ ದೇಶದ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370ಕ್ಕೂಹೆಚ್ಚು ಸ್ಥಾನಗಳ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ರೇಣುಕಾಚಾರ್ಯ ಹೇಳಿದರು.

click me!