ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ: ನಳಿನ್‌ ಕುಮಾರ ಕಟೀಲ್

By Kannadaprabha News  |  First Published Nov 5, 2023, 11:10 AM IST

ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ನೇತೃತ್ವದ ತಂಡವು ವಿಜಯಪುರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ, ಪರಿಸ್ಥಿತಿ ಅವಲೋಕಿಸಿತು. ತೊಂದರೆ ಎದುರಿಸುತ್ತಿರುವ ರೈತರ ಅಹವಾಲು ಆಲಿಸಿತು.


ವಿಜಯಪುರ (ನ.05): ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್ ನೇತೃತ್ವದ ತಂಡವು ವಿಜಯಪುರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ, ಪರಿಸ್ಥಿತಿ ಅವಲೋಕಿಸಿತು. ತೊಂದರೆ ಎದುರಿಸುತ್ತಿರುವ ರೈತರ ಅಹವಾಲು ಆಲಿಸಿತು. ತಿಕೋಟಾ ತಾಲೂಕಿನ ಜಾಲಗೇರಿ ಹಾಗೂ ವಿಜಯಪುರ ಜುಮನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಬರ ತಂಡವು ಭೇಟಿ ನೀಡಿ ಅನೇಕ ರೈತರು ತಾವು ಎದುರಿಸುತ್ತಿರುವ ನೋವನ್ನು ಕಂಡುಕೊಂಡರು. ಜಿಲ್ಲೆಯ ತಿಕೋಟಾ ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ತಿಕೋಟಾ ತಾಲೂಕಿನಲ್ಲಿಯೂ ಬರ ಭೀಕರವಾಗಿದೆ ಎಂದು ಕಟೀಲ್ ತಂಡದ ಸದಸ್ಯರು ತಿಕೋಟಾ ತಾಲೂಕನ್ನೇ ಆಯ್ಕೆ ಮಾಡಿ ಬರ ಅಧ್ಯಯನ ನಡೆಸಿದರು.

ಹೇಳಲಾಗದಷ್ಟು ಸಂಕಷ್ಟ: ಈ ಸಂದರ್ಭದಲ್ಲಿ ರೈತರಾದ ಅನಿಲ್ ಲಮಾಣಿ, ಸಿದ್ಧು ಒಡೆಯರ ಮುಂತಾದ ರೈತರು ‘ನಮಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ, ಯಾವ ರೀತಿಯ ಸ್ಪಂದನೆಯೂ ನಮಗೆ ದೊರಕದಂತಾಗಿದೆ. ನಮ್ಮ ಸಂಕಷ್ಟ ಯಾರಿಗೂ ಬರಬಾರದು, ಸಾಲ ಮಾಡಿದ ಬೆಳೆ ಕೈಗೆ ಬರುತ್ತಿಲ್ಲ. ಏನಾದರೂ ಮಾಡಿ ವಿದ್ಯುತ್ ಸಂಪರ್ಕ ಬಳಸಿ ನೀರು ಹರಿಸೋಣ ಎಂದರೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅತ್ತ ಪರಿಹಾರವೂ ಇಲ್ಲ, ಇತ್ತ ವಿದ್ಯುತ್ ಸಹ ಇಲ್ಲ. ಸಾಲ ಏರುತ್ತಲೇ ಇದೆ. ಯಾವ ರೀತಿ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದರೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದರು.

Tap to resize

Latest Videos

ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನ: ನಳಿನ್‌ ಕಟೀಲ್‌ ಭವಿಷ್ಯ

ವರದಿಯನ್ನೇ ಕೊಟ್ಟಿಲ್ಲ: ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್‌ಕುಮಾರ ಕಟೀಲ್ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ. ಈಗಾಗಲೇ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿದೆ. ಆದರೆ, ರಾಜ್ಯ ಸರ್ಕಾರ ಬರದಿಂದ ಎಷ್ಟು ನಷ್ಟವಾಗಿದೆ ಎಂಬ ವರದಿಯನ್ನೇ ಕೊಟ್ಟಿಲ್ಲ ಎಂದು ದೂರಿದರು. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ತಿಕೋಟಾ ತಾಲೂಕನ್ನು ಬರಗಾಲ ಪಟ್ಟಿಯಿಂದ ಹೊರಗಿಡಲ್ಪಟ್ಟಿದೆ, ಪ್ರಭಾವಿ ಸಚಿವರು ತಾವು ಪ್ರತಿನಿಧಿಸುವ ಕ್ಷೇತ್ರವಾಗಿರುವ ತಿಕೋಟಾವನ್ನೇ ಬರ ಪೀಡಿತ ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ ಎಂದು ಎಂಬಿಪಿ ವಿರುದ್ಧ ದೂರಿದರು.

ವಿದ್ಯುತ್‌ ಇಲ್ಲದ್ದಕ್ಕೆ ಬೆಳೆ ನಷ್ಟ: ಇಲ್ಲಿಯವರೆಗೆ ಯಾರೊಬ್ಬ ಸಚಿವರು ರೈತರ ಅಹವಾಲು ಆಲಿಸುವ ಕೆಲಸ ಮಾಡಿಲ್ಲ. ಇದುವರೆಗೂ ರೈತರ ಆಹವಾಲು ಆಲಿಸಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಸಮರ್ಪಕವಾಗಿ ವಿದ್ಯುತ್ ನೀಡಿದ್ದಿರೆ ರೈತರು ಬೆಳೆದ ತಮ್ಮ ಅಲ್ಪಸ್ವಲ್ಪ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಪೂರ್ಣ ಪ್ರಮಾಣದಲ್ಲಿ ಕೃಷಿ ನಷ್ಟವಾಗಿದೆ ಎಂದು ಆರೋಪಿಸಿದರು. ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆಯೇ ಹೊರತು, ರೈತರ ಹಿತ ಕಾಪಾಡಲು ಯೋಚಿಸುತ್ತಿಲ್ಲ. ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ ಎಂದರು.

ಬಿಜೆಪಿಗೆ ಅಧಿಕಾರ ಎನ್ನುವುದು ಸೇವೆ: ನಳಿನ್‌ ಕುಮಾರ್‌ ಕಟೀಲ್

ಸಂಸದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಉಪಸ್ಥಿತರಿದ್ದರು.

click me!