ಕೊಡಗಿಗೆ ಮತ್ತೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ: ಬರಲಿ ನೋಡೋಣ ಎಂದು ಈಶ್ವರಪ್ಪ ಸವಾಲು!

By Ravi JanekalFirst Published Mar 11, 2023, 10:27 AM IST
Highlights

ಕೊಡಗಿನ ಮಣ್ಣು ರಾಷ್ಟ್ರೀಯವಾದಿಗಳ ಮಣ್ಣು ಆದರೆ ಸಿದ್ದರಾಮಯ್ಯ ಟಿಪ್ಪು, ಜಿನ್ನಾ ಸಂತಾನದವರು. ಅಂತಹವರಿಗೆ ಈ ಜಿಲ್ಲೆಯ ಜನರು ಇಲ್ಲಿಗೆ ಬರಲು ಬಿಡುವುದಿಲ್ಲ. ಮತ್ತೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಬರಲಿ ನೋಡೋಣ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. 

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮಾ.11): ಕೊಡಗಿನ ಮಣ್ಣು ರಾಷ್ಟ್ರೀಯವಾದಿಗಳ ಮಣ್ಣು ಆದರೆ ಸಿದ್ದರಾಮಯ್ಯ ಟಿಪ್ಪು, ಜಿನ್ನಾ ಸಂತಾನದವರು. ಅಂತಹವರಿಗೆ ಈ ಜಿಲ್ಲೆಯ ಜನರು ಇಲ್ಲಿಗೆ ಬರಲು ಬಿಡುವುದಿಲ್ಲ. ಮತ್ತೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಬರಲಿ ನೋಡೋಣ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. 

ಕೊಡಗಿ(Kodagu)ನ ಗೋಣಿಕೊಪ್ಪಲಿನಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ(BJP Vijayasankalpa yatre)ಯ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾತನಾಡಿದರು. 

ಸಿದ್ದರಾಮಯ್ಯ(Siddaramaiah) ಕೊಡಗಿಗೆ ಬಂದಾಗ ಇಲ್ಲಿನ ಜನರು ಮೊಟ್ಟೆಯಿಂದ ಹೊಡೆದರು. ಆಗ ಸಿದ್ದರಾಮಯ್ಯ ಮತ್ತೆ ಜಿಲ್ಲೆಗೆ ಬರುವುದಾಗಿ ತೊಡೆತಟ್ಟಿದ್ದರು. ಆದರೆ ಯಾಕೆ ಇದುವರೆಗೆ ಕೊಡಗಿಗೆ ಬರಲಿಲ್ಲ ಎಂದು ಈಶ್ವರಪ್ಪ(KS Eshwarappa) ಪ್ರಶ್ನಿಸಿದರು. ಕಾಂಗ್ರೆಸಿನವರು ರಾಜ್ಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಾರೆ. ಅದರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಅವರು ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡುವಂತೆ ಸಾಕಷ್ಟು ಬಾರಿ ಕೇಳುತ್ತಿದ್ದಾರೆ. ಆದರೆ ಇದುವರೆಗೆ ಕಾಂಗ್ರೆಸ್ ದಾಖಲೆ ನೀಡುತ್ತಿಲ್ಲ ಯಾಕೆ?

ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ

 ಐಟಿ, ಇಡಿ(IT Raid) ದಾಳಿಯಾದಾಗ ಸ್ವತಃ ಡಿಕೆಶಿ(DK Shivakumar) ಮನೆಯಲ್ಲಿ ಎಷ್ಟು ಕೋಟಿ ಹಣ ಸಿಕ್ತು ನೋಡಿದ್ದೀರಾ. ಬಂಡ್ಲುಗಟ್ಟಲೆ ದಾಖಲೆ ಸಿಕ್ತು. ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಬಾರಿನಲ್ಲಿ ಗಲಾಟೆ ಮಾಡಿಕೊಂಡ ನಲಪಾಡ್ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ ಎಂದು ಲೇವಡಿ ಮಾಡಿದರು. 

ಬಜೆಟಿನಲ್ಲಿ ಬೊಮ್ಮಾಯಿ ಅವರು ಹೇಳಿದ್ದಾರೆ, ಅರ್ಕಾವತಿ ಡಿನೋಟಿಫೈನ(Arkavati Denotify)ಲ್ಲಿ 8000 ಕೋಟಿಯಷ್ಟು ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಾತ್ರಿ. ಆದರೆ ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇವರು ಕೂಗಾಡಿಬಿಟ್ಟರೆ ಜನರು ನಂಬಿಕೊಳ್ಳುತ್ತಾರೆ ಎಂದುಕೊಂಡಿದ್ದಾರೆ ಎಂದು ಗೋಣಿಕೊಪ್ಪದಲ್ಲಿ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು. 

ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ಬಿಜೆಪಿಯವರು ಪಿಎಫ್ಐನವರನ್ನು ನಿಷೇಧಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ಮಾಡ್ತೇವೆ ಅವರನ್ನು ಸ್ವತಂತ್ರಗೊಳಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾನೆ. ಆದರೆ ಕೊಡಗು ಜಿನ್ನಾ ಸಂತತಿಗೆ ಅವಕಾಶ ಕೊಡಲ್ಲ ಎಂದು ಭಾಷಣದ ಉದ್ದಕ್ಕೂ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. 

ನಿಮ್ಮಂತವರು ನೂರು ಜನ ಬಂದರು ಈ ಕಾಯ್ದೆಗಳನ್ನು ವಾಪಸ್ ಮಾಡುವುದಕ್ಕೆ ಆಗಲ್ಲ ಎಂದರು. ಮತಾಂತರ ನಿಷೇಧ ಕಾಯ್ದೆ ವಾಪಸ್ ಮಾಡ್ತೀವಿ ಅಂತ ಸಿದ್ಧರಾಮಯ್ಯ ಹೇಳ್ತಾರೆ. ಆದರೆ ನಿಮ್ಮನೆ ಹೆಣ್ಣು ಮಗಳನ್ನು ಹೊತ್ಕೊಂಡು ಹೋಗಿ ಮತಾಂತರ ಮಾಡಿದರೆ ಏನು ಮಾಡ್ತೀರಿ, ಎರಡು ವರ್ಷ ಬಳಸಿಕೊಂಡು ವಾಪಸ್ ಕಳುಹಿಸಿದರೆ ಏನು ಮಾಡ್ತೀರಿ. ಸಿದ್ದರಾಮಯ್ಯ ನಿಮ್ಮ ಮಗಳಿಗೂ ಇಂತಹ ಸ್ಥಿತಿ ಬಂದರೆ ಏನು ಮಾಡ್ತೀರಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ  ಮತಾಂತರ ಕಾಯ್ದೆ ವಾಪಸ್ ಮಾಡ್ತೇವೆ ಅಂತೀರಲ್ಲ ದೇವರು ಒಪ್ಪುತ್ತಾನೇನ್ರಿ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ

ಇನ್ನು ಚಾಮುಂಡೇಶ್ವರಿ ನಿಂತು ಸೋತು, ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿರುವ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಸ್ಪರ್ಧಿಸಿದರೆ ಅಲ್ಲಿ ಕಾಂಗ್ರೆಸಿನವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ. 2013 ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಸ್ಪರ್ಧಿಸಿದ್ದ ಪರಮೇಶ್ವರ್ ಅವರನ್ನು ಕುರುಬರನ್ನು ಬಿಟ್ಟು ಸಿದ್ದರಾಮಯ್ಯ ಪರಮೇಶ್ವರ ಅವರನ್ನು ಸೋಲಿಸಿದರು. ಯಾಕೆ ಎಂದರೆ ಗೆದ್ದರೆ ಸಿಎಂ ಖುರ್ಚಿಗೆ ಪರಮೇಶ್ವರ್ ಅಡ್ಡಗಾಲಾಕುತ್ತಾರೆ ಎಂದು ಪರಮೇಶ್ವರ ಅವರನ್ನು ಸೋಲಿಸಿದರು. ನಂತರದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಸೋಲಿಸಿದರು. ಆದರೆ ಬಾದಾಮಿಯಲ್ಲಿ ಸಣ್ಣ ಮತಗಳ ಅಂತರದಿಂದ ಗೆದ್ದರು ಅಷ್ಟೇ. ಆದರೆ ಪರಮೇಶ್ವರ್ ಅವರಿಗೆ ಇನ್ನೂ ಸಿಟ್ಟು ಹೋಗಿಲ್ಲ. ಈ ಬಾರಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಖಂಡಿತವಾಗಿಯೂ ಪರಮೇಶ್ವರ್, ಮುನಿಯಪ್ಪ ಎಲ್ಲರೂ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದಂತು ಖಚಿತ ಎಂದಿದ್ದಾರೆ. ಒಟ್ಟಿನಲ್ಲಿ ಇಡೀ ಭಾಷಣದ ಉದ್ದಕ್ಕೂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿಯೇ ಈಶ್ವರಪ್ಪ ಮಾತನಾಡಿದರು.

click me!