* ಬಿಜೆಪಿ ಟ್ವೀಟ್‌ಗೆ ಕುಮಾರಸ್ವಾಮಿ ಆಕ್ರೋಶ
* ಬೊಮ್ಮಾಯಿ ಕಾಮನ್ ಮ್ಯಾನ್ ಅಲ್ಲ
* ಸಿ.ಟಿ.ರವಿ ಮತ್ತು ನಳಿನ್ ಕುಮಾರ್ ಕಟೀಲ್‌ಗೆ ಎಚ್ಚರಿಕೆ ನೀಡಿದ ಎಚ್‌ಡಿಕೆ
ವಿಜಯಪುರ(ಅ.22): ಅವರ ರೀತಿ ನಾನು ಜೀವನ ಮಾಡಿಲ್ಲ. ನನ್ನನ್ನು ಕೆಣಕಿದರೆ ಒಬ್ಬೊಬ್ಬರ ಬಣ್ಣ ಬಯಲಾಗುತ್ತದೆ. ಬಂಡವಾಳ ಹೊರ ಬರುತ್ತದೆ ಹುಷಾರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್(RSS) ಶಾಖೆಯಲ್ಲಿ ತರಬೇತಿ ಪಡೆದು ಬಂದವರ ಒಬ್ಬೊಬ್ಬರ ಬಂಡವಾಳ ತಗೆದು ಬಿಟ್ಟರೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರೆದ ಪುಸ್ತಕ ತೆರೆದ ಬಾವಿಯಷ್ಟೇ ಅಪಾಯ ಅನ್ನುವ ಬಿಜೆಪಿಗರ(BJP) ಟ್ವೀಟ್(Tweet) ವಿಚಾರವಾಗಿ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಅಧಿಕಾರಿಯ ಪತಿಯೊಬ್ಬರು ಕೆಆರ್‌ಎಸ್‌ಗೆ(KRS) ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣಿಕರ್ತರು ಯಾರು ಅನ್ನುವುದನ್ನು ಹೇಳಲಿ ಎಂದು ಕಿಡಿಕಾರಿದರು.
undefined
ಬಿಜೆಪಿಯವರು ಸಮಯ ಸಾಧಕರು: BSY ವಿರುದ್ಧ HDK ವಾಗ್ದಾಳಿ
ಕೆಪಿಎಸ್‌ಸಿಯಲ್ಲಿ(KPSC) ಆಯ್ಕೆಯಾಗಿ ಪತಿ ಕೆಆರ್‌ಎಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಆತ್ಮಹತ್ಯೆಯನ್ನು ಸಿ.ಟಿ. ರವಿ ಸ್ಮರಿಸಿಕೊಳ್ಳಲಿ. ಆ ಕುಟುಂಬ ಹಾಳು ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಇಂಥ ಕೆಲಸ ನಾವು ಮಾಡಿಲ್ಲ. ಆರ್‌ಎಸ್‌ಎಸ್ ಸಂಚಾಲಕರ ಮಕ್ಕಳನ್ನು ಕ್ಯಾರಿಂಗ್ ಮಾಡಿ ಯಾರು ಬಾಂಬೆಗೆ ಕದ್ದು ಹೋಗಿದ್ದರು. ಅದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್ ಹೇಳುತ್ತಾರಾ? ಅವರ ರೀತಿ ನಾನು ಜೀವನ ಮಾಡಿಲ್ಲ. ನನ್ನನ್ನು ಕೆಣಕಿದರೆ ಒಬ್ಬೊಬ್ಬರ ಬಣ್ಣ ಬಯಲಾಗುತ್ತದೆ. ಬಂಡವಾಳ ಹೊರ ಬರುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ನನ್ನ ಬಗ್ಗೆ ಚರ್ಚೆ ಮಾಡಿದರೆ ನಿಮ್ಮ ಇತಿಹಾಸ ತಗೆಯುತ್ತೇನೆ. ಈ ಚರ್ಚೆ ನಿಲ್ಲಿಸಿ ನಿಮ್ಮ ದುಡಿಮೆ ಮೇಲೆ ರಾಜಕೀಯ ಮಾಡಿ ಎಂದು ಕುಟುಕಿದರು.
ಬೊಮ್ಮಾಯಿ ಕಾಮನ್ ಮ್ಯಾನ್ ಅಲ್ಲ: ಎಚ್‌ಡಿಕೆ ಟಾಂಗ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಹಿಡಿತ ಸಾಧಿಸಿಲ್ಲ. ಜನ ಸಾಮಾನ್ಯರ ಜೀವನವನ್ನು ನರಕ ಮಾಡಿದ್ದಾರೆ. ಹಾಗಾಗಿ ಅವರು ಎಂದೂ ಕಾಮನ್‌ಮ್ಯಾನ್ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮಕ್ಕೆ ಉಪ ಚುನಾವಣೆ(Byelection) ಪ್ರಚಾರಾರ್ಥ ತೆರಳಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದೂ ಕಾಮನ್‌ಮ್ಯಾನ್ ಅಲ್ಲ. ಅವರು ಎಂದೂ ಜನಪರವಲ್ಲ. ಬಿಜೆಪಿಯವರು ಈ ಹಿಂದೆ ಐದು ವರ್ಷ ಆಡಳಿತ ನಡೆಸಿದ್ದನ್ನು ನೋಡಿದ್ದೇವೆ. ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿ ಈಗ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ನೋಡುತ್ತಿದ್ದೇವೆ. ಬಿಜೆಪಿಯವರಿಗೆ ಜನಪರ ಕಾಳಜಿ ಇಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.