17 ಅನರ್ಹ ಶಾಸಕರು ಸೇರಿದಂತೆ ಪಕ್ಷಕ್ಕೆ ಬರಮಾಡಿಕೊಂಡ BSYಗೆ ಹೊಸ ಸಂಕಷ್ಟ

Published : Nov 27, 2019, 10:05 PM IST
17 ಅನರ್ಹ ಶಾಸಕರು ಸೇರಿದಂತೆ ಪಕ್ಷಕ್ಕೆ ಬರಮಾಡಿಕೊಂಡ BSYಗೆ ಹೊಸ ಸಂಕಷ್ಟ

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಅನರ್ಹ ಶಾಸಕರು ಸೇರಿದಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಹೊಸ ಸಂಕಷ್ಟ ಶುರುವಾಗಿದೆ. ಅನರ್ಹರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಬಿಎಸ್ ವೈ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು, [ನ.27]: ಸುಪ್ರೀಂಕೋರ್ಟ್ ನಿಂದ ಅನರ್ಹ ಎನಿಸಿಕೊಂಡು ಉಪಚುನಾವಣೆ ಎದುರಿಸುತ್ತಿರುವ 17 ಶಾಸಕರು ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಖಾಸಗಿ ದೂರು ದಾಖಲಾಗಿದೆ.

ಜನಪ್ರತಿನಿಧಿ ನ್ಯಾಯಾಲಯಕ್ಕೆ ಜನಾಧಿಕಾರ ಸಂಘರ್ಷ ಪರಿಷತ್ ನಿಂದ ದೂರು ನೀಡಿತ್ತು. ಇದನ್ನು ಇಂದು [ಬುಧವಾರ] ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್‌ನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7 ಮತ್ತು 12 ಪ್ರಕಾರ ಕೇಸ್ ದಾಖಲು ಮಾಡಿಕೊಂಡಿದೆ.

ಸುಪ್ರೀಂ ರಿಲೀಫ್ ಕೊಟ್ರು ಅನರ್ಹ ಶಾಸಕರಿಗೆ ಇನ್ನೂ ತಪ್ಪಿಲ್ಲ ಕೋರ್ಟ್ ತಾಪತ್ರಯ

23.07.2019ರಂದು ನಡೆದ ನೋ ಕಾನ್ಫಿಡೆನ್ಸ್ ಮೋಷನ್ ದಿನ [ವಿಶ್ವಾಸಮತ ಯಾಚನೆಗೆ] ಹಾಜರಾಗದ ಆರೋಪದಲ್ಲಿ ದೂರು ನೀಡಲಾಗಿತ್ತು. ಸುಪ್ರೀಂಕೋರ್ಟ್ ನಿಂದ ಈಗಾಗಲೇ 17 ಶಾಸಕರು ಅನರ್ಹ ಎನಿಸಿಕೊಂಡು ಉಪಚುನಾವಣೆ ಅಖಾಡಕ್ಕಿಳಿದಿದ್ದು, ಇದೇ ಡಿಸೆಂಬರ್ 5ಕ್ಕೆ ಮತದಾನ ಹಾಗೂ ಡಿ 9ಕ್ಕೆ ಮತ ಎಣಿಕೆ ನಡೆಯಲಿದೆ.

ಅದಕ್ಕಾಗಿ ಯಡಿಯೂರಪ್ಪ ಅವರು ಅನರ್ಹ ಶಾಸಕರನ್ನು ಗೆಲ್ಲಿಸಿಕೊಳ್ಳವುದರ ಜತೆಗೆ ಸರ್ಕಾರವನ್ನು ಉಳಿಸಿಕೊಳ್ಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಭರ್ಜರಿ ಮತಯಾಚೆಯಲ್ಲಿ ಬ್ಯುಸಿಯಾಗಿದ್ದರೆ. ಇದರ ಮಧ್ಯೆ ಇದೀಗ 17 ಶಾಸಕರು ಸೇರಿದಂತೆ ಬಿಎಸ್ ವೈಗೆ ಹೊಸ ತಾಪತ್ರಯ ಶುರುವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ