ಲೋಕಸಭಾ ಚುನಾವಣೆಗೆ ಸಿದ್ದತೆ ಬಗ್ಗೆ ಸಂಪುಟದಲ್ಲಿ ಸೂಚನೆ: ಸಿದ್ದರಾಮಯ್ಯ

By Govindaraj S  |  First Published Dec 9, 2023, 9:03 PM IST

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಮಹತ್ವದ ಚರ್ಚೆ ನಡೆಯಿದ್ದು, ರಾಜ್ಯದಲ್ಲಿ ತಡ ಮಾಡದೆ ಈಗಿನಿಂದಲೇ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕೆಂಬ ಒಮ್ಮತದ ಅಭಿಪ್ರಾಯ ವಿವಿಧ ಸಚಿವರಿಂದ ವ್ಯಕ್ತವಾಗಿದೆ. 


ಸುವರ್ಣಸೌಧ (ಡಿ.09): ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಮಹತ್ವದ ಚರ್ಚೆ ನಡೆಯಿದ್ದು, ರಾಜ್ಯದಲ್ಲಿ ತಡ ಮಾಡದೆ ಈಗಿನಿಂದಲೇ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕೆಂಬ ಒಮ್ಮತದ ಅಭಿಪ್ರಾಯ ವಿವಿಧ ಸಚಿವರಿಂದ ವ್ಯಕ್ತವಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ತೆಲಂಗಾಣ ರಾಜ್ಯದಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಪಕ್ಷ ಅಧಿಕಾರಕ್ಕೆ ಬಂದಿದೆ. 

ಇದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸರ್ಕಾರದ ಎಲ್ಲ ಸಚಿವರ, ಶಾಸಕರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದಲ್ಲಿ ಪಕ್ಷಕ್ಕೆ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚುನಾವಣೆ ಹತ್ತಿರವಾದಾಗ ಹೋರಾಟ ನಡೆಸಿದರೆ ಸಾಧ್ಯವಾಗುವುದಿಲ್ಲ. ಈಗಿನಿಂದಲೇ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಬೇಕು. ಗೆಲ್ಲುವ ಅಭ್ಯರ್ಥಿಗಳ ಸಮೀಕ್ಷೆಯನ್ನು ಬೇಗ ನಡೆಸಿ ಹೈಕಮಾಂಡ್‌ಗೆ ಸಂಭಾವ್ಯರ ಪಟ್ಟಿ ಕೆಳುಹಿಸುವ ಕೆಲಸ ಮಾಡಬೇಕು. 

Tap to resize

Latest Videos

ವಿದ್ಯಾರ್ಥಿಗಳಿಗೆ ಆಡಳಿತ, ರಾಜಕೀಯ ವ್ಯವಸ್ಥೆಯ ಅರಿವು ಮುಖ್ಯ: ಸಚಿವ ಸಂತೋಷ ಲಾಡ್

ಇದರಿಂದ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ, ಪಕ್ಷ ಸಂಘಟನೆಯ ಕಾರ್ಯನಿರ್ವಹಿಸಲು, ಕಾರ್ಯತಂತ್ರಗಳನ್ನು ರೂಪಿಸಲು ನೆರವಾಗಲಿದೆ ಎಂದು ಸಭೆಯಲ್ಲಿ ವಿವಿಧ ಸಚಿವರು ಸಲಹೆ ನೀಡಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದು ಸಚಿವರುಗಳು ಈಗಿನಿಂದಲೇ ತಮ್ಮ ಉಸ್ತುವಾರಿ ಜಿಲ್ಲೆಗಳು ಹಾಗೂ ತವರು ಜಿಲ್ಲೆಗಳಲ್ಲಿ ಚುನಾವಣಾ ಸಿದ್ಧತೆಯ ಪೂರ್ವ ತಯಾರಿ ನಡೆಸಲು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

ಯತ್ನಾಳ್ ದ್ವೇಷದ ರಾಜಕಾರಣ ಮಾಡುತ್ತಾರೆ: ಯತ್ನಾಳ್ ದ್ವೇಷದ, ಅಲ್ಪಸಂಖ್ಯಾತರ ವಿರುದ್ಧ ದ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಶಿಮ್ ಪೀರಾ ದರ್ಗಾದ ಧರ್ಮಾಧಿಕಾರಿ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮೀ ಮೌಲ್ವಿ ಜೊತೆಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ ಹಾಶ್ಮೀ ಅವರೊಂದಿಗೆ ಬಹಳ ವರ್ಷಗಳಿಂದ ಸಂಬಂಧ ಇದೆ. ಅವರು ಚುನಾವಣೆ ಗೆಲ್ಲಲು ಈ ರೀತಿ ಮಾಡಬಾರದು. ಯತ್ನಾಳ್ ಮಹಾ ಸುಳ್ಳುಗಾರ. ಹಾಶ್ಮೀ ಅವರ ಮೇಲಿನ ಆರೋಪ ಸಾಬೀತು ಮಾಡಲಿ. ಅವರದ್ದೇ ಸರ್ಕಾರ 10 ವರ್ಷಗಳಿಂದ ಇದೆ. ಇಷ್ಟು ವರ್ಷ ಏನು ಮಾಡುತ್ತಿದ್ದರು. ಬರೀ ಆರೋಪ ಮಾಡುವುದಲ್ಲ ಅದನ್ನು ಸಾಬೀತು ಮಾಡಲಿ ಎಂದರು. ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷರ ಸ್ಥಾನ ಕ್ಕೆ ಪ್ರಯತ್ನಿಸಿದ್ದರು. ಎರಡೂ ಸಿಕ್ಕದ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!

ದಕ್ಷಿಣ ಭಾರತದಲ್ಲಿ ಬಿಜೆಪಿ ಇಲ್ಲ: ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆ ಇರಲಿ, ಅದು ಇಲ್ಲವೇ ಇಲ್ಲ ಎಂದರು. ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅನುದಾನ ಕಡಿಮೆ ಯಾಕಾಯಿತು. ಗೋವಿಂದ ಕಾರಜೋಳ ಅವರು ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಣ ಬೇರೆಡೆಗೆ ಉಪಯೋಗವಾಗುತ್ತಿರುವ ಆರೋಪಕ್ಕೆ ಉತ್ತರಿಸಿ, ಅವರು ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅನುದಾನ ಅವರ ಕಾಲದಲ್ಲಿ ಯಾಕೆ ಕಡಿಮೆಯಾಯಿತು ಎಂದು ಉತ್ತರ ಕೊಡಬೇಕು. ನಾನು ಕಡೆ ಬಜೆಟ್ ಮಂಡಿಸಿದಾಗ ₹30 ಸಾವಿರ ಕೋಟಿ ಅನುದಾನವಿತ್ತು. ಇವರ ಕಾಲಕ್ಕೆ ₹25 ಸಾವಿರ ಕೋಟಿಯಾಗಿದೆ. ಯಾಕೆ ಆಯ್ತು ಎಂದು ಉತ್ತರ ಕೊಡಬೇಕು ಎಂದರು.

click me!