ಸಂಪುಟ ವಿಸ್ತರಣೆ: ಸಂಭಾವ್ಯ ಪಟ್ಟಿ ರೆಡಿ, ಬಿಎಸ್‌ವೈ ಲೀಸ್ಟ್‌ನಲ್ಲಿ ಯಾರೆಗೆಲ್ಲ ಸ್ಥಾನ.?

By Suvarna News  |  First Published Jan 29, 2020, 5:28 PM IST

ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚೆ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋಗಲು ಈಗಾಗಲೇ ಫ್ಲೈಟ್ ಬುಕ್ ಆಗಿದ್ದು, ಸಂಭಾವ್ಯ ಸಚಿವರ ಪಟ್ಟಿ ಹಿಡಿದು ರಾ‍ಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಚರ್ಚೆ ನಡೆಸಲಿದ್ದಾರೆ. ಹಾಗಾದ್ರೆ, ಬಿಎಸ್‌ವೈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.


ಬೆಂಗಳೂರು, (ಜ.29):  ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ವಿಸ್ತರಣೆ ಸಂಬಂಧ ಸಂಭಾವ್ಯ ಪಟ್ಟಿ ರೆಡಿಯಾಗಿದೆ.

"

Latest Videos

undefined

ಈ ಪಟ್ಟಿಯನ್ನು ಹಿಡಿದು ಯಡಿಯೂರಪ್ಪ ಅವರು ನಾಳೆ (ಗುರುವಾರ) ದೆಹಲಿಗೆ ತೆರಳಿಲಿದ್ದು, ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಬಿಎಸ್‌ವೈ ತಮ್ಮ ಪಟ್ಟಿ ಮುಂದಿಡಲಿದ್ದಾರೆ. ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತೋ ಅಥವಾ ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವಂತೆ ಹೇಳುತ್ತೋ ಎನ್ನುವುದೇ ಭಾರೀ ಕುತೂಹಲ ಮೂಡಿಸಿದೆ. 

ಸಂಪುಟ ವಿಸ್ತರಣೆ: ಕೆಲ ಸಂಭಾವ್ಯ ಸಚಿವರ ಹೆಸರು ಘೋಷಿಸಿದ ಯಡಿಯೂರಪ್ಪ

ಒಂದು ವೇಳೆ ಸಿಎಂ ರೆಡಿ ಮಾಡಿಕೊಂಡ ಹೋದ ಪಟ್ಟಿಗೆ ಗುರುವಾರ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ, ಎರಡು ದಿನದಲ್ಲಿಯೇ ಸಂಪುಟ ವಿಸ್ತರಣೆಯಾಗಲಿದೆ. ಇಲ್ಲವಾದಲ್ಲಿ ಹೈಕಾಂಡ್ ಹೇಳಿದಾಗಲೇ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ.

"

ಹಾಗಾದ್ರೆ ಯಡಿಯೂರಪ್ಪ ತಯಾರು ಮಾಡಿರುವ ಪಟ್ಟಿಯ ಪ್ರಕಾರ ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತೆ ಎನ್ನುವುದನ್ನು ನೋಡುವುದಾದರೆ, ಸರ್ಕಾರ ಬರಲು ಕಾರಣರಾದ 11 ನೂತನ ಶಾಸಕರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಎಸ್‌ವೈ ಒಲವು ತೋರಿಸಿದ್ದಾರೆ. 

ಇದರ ಜತೆಗೆ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರನ್ನು ಸಹ ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಎಸ್‌ವೈ ನಿರ್ಧರಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು (ಬುಧವಾರ) ಬೆಳಗ್ಗೆ ಸ್ವತಃ ಯಡಿಯೂರಪ್ಪ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ

ಬೆಳಗಾವಿಯಲ್ಲಿ ಗೆದ್ದ ಎಲ್ಲಾ ಶಾಸಕರಿಗೆ ಸಚಿವ ಸ್ಥಾನ ಖಚಿತ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಉಮೇಶ್ ಕತ್ತಿ ಅವರು ಸಹ ಮಂತ್ರಿಯಾಗುತ್ತಾರೆ ಎಂದು ಘೋಷಣೆ ಮಾಡಿದ್ದಾರೆ.

ಬಿಎಸ್‌ವೈ ಪಟ್ಟಿಯಂತೆ ಬೆಳಗಾವಿ ಜಿಲ್ಲಾ ಶಾಸಕರುಗಳಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ. ಶ್ರೀಮಂತ್ ಪಾಟೀಲ್ ಜೊತೆಗೆ ಉಮೇಶ್ ಕತ್ತಿಗೂ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಆದ್ರೆ, ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಾ ಎನ್ನುವುದೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ.  

ಒಂದು ವೇಳೆ ಕೊನೆಗಳಿಗೆಯಲ್ಲಿ ಬೆಳಗಾವಿ ಶಾಸಕರ ಪೈಕಿ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಅವರನ್ನು ಕೈಬಿಟ್ಟರೂ ಅಚ್ಚರಿಪಡಬೇಕಿಲ್ಲ.

ಹೈಕಮಾಂಡ್‌ನ ವರಸೆ ಬೇರೆ ಇದೆ. ಗೆದ್ದ ನೂತನ ಶಾಸಕರುಗಳಲ್ಲಿ 6 ಇನ್ನುಳಿದ ಮೂವರು ಮೂಲ ಬಿಜೆಪಿ ಶಾಸಕರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆನ್ನುವುದು ಹೈಕಮಾಂಡ್‌ನ ಸಂದೇಶವಾಗಿದೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಬಿಎಸ್‌ವೈ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ಬರಲು ಕಾರಣದವರನ್ನು ಸಚಿವರನ್ನಾಗಿ ಮಾಡಬೇಕೆನ್ನುವುದು ಯಡಿಯೂರಪ್ಪನವರ ವಾದ. 

ಹೀಗೆ ಬಿಎಸ್‌ವೈ ಮತ್ತು ಹೈಕಮಾಂಡ್‌ ನಡುವಿನ ಹಗ್ಗಾಜಗ್ಗಾಟದಿಂದಲೇ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಬಿಎಸ್‌ವೈ ಕೊಟ್ಟ ಮಾತಿನಂತೆ ಉಪಚುಚುನಾವಣೆಯಲ್ಲಿ ಗೆದ್ದ 12ರ ಪೈಕಿ 11 ಶಾಸಕರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
 

click me!