ಉಪ ಚುನಾವಣೆ ಫಲಿತಾಂಶ ಬಿಜೆಪಿಗೊಂದು ಪಾಠ: ಬಿಜೆಪಿ ಶಾಸಕ

By Web DeskFirst Published Nov 6, 2018, 1:20 PM IST
Highlights

ಪಂಚಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ, ಹಣದ ನಡುವೆ ಬಿಜೆಪಿ ಪಕ್ಷ ಪಂಚ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ನೈತಿಕವಾಗಿ ಬಿಜೆಪಿ ಗೆದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟಕ್ಕೆ ಇದು ಪ್ರೇರಣೆಯಾಗಲಿದೆ ಎಂದು ಸಿ.ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು[ನ.06]: ಉಪಚುನಾವಣೆಯ ಫಲಿತಾಂಶ ಮುಂಬರುವ ಯಾವುದೇ ಚುನಾವಣೆಗೆ ದಿಕ್ಸೂಚಿಯಲ್ಲ. ಸಂಘಟನಾತ್ಮಕವಾಗಿ ಬೆಳೆಯಲು ಇದು ವೇದಿಕೆಯಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ನೈತಿಕವಾಗಿ ಗೆದ್ದಿದೆ ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ಪಂಚಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ, ಹಣದ ನಡುವೆ ಬಿಜೆಪಿ ಪಕ್ಷ ಪಂಚ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ನೈತಿಕವಾಗಿ ಬಿಜೆಪಿ ಗೆದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟಕ್ಕೆ ಇದು ಪ್ರೇರಣೆಯಾಗಲಿದೆ ಎಂದು ಸಿ.ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣೆ ಕಣದಿಂದ ಹಿಂದೆ ಹೋಗುವ ಮೂಲಕ ಬಿಜೆಪಿಗೆ ಅವಮಾನ ಮಾಡಿದ್ದರು. ಇದರ ನಡುವೆಯೂ ರಾಮನಗರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಪಕ್ಷದ ಸಿದ್ದಾಂತ ಹೊಂದಿವರಿಗೆ ಟಿಕೆಟ್ ನೀಡದೇ ಇರುವುದು ನಮಗೆ ಒಂದು ಪಾಠವನ್ನು ಈ ಚುನಾವಣೆ ಕಲಿಸಿದೆ ಎಂದು ಫಲಿತಾಂಶದ ಬಗ್ಗೆ ರವಿ ವಿಶ್ಲೇಷಣೆ ಮಾಡಿದ್ದಾರೆ.

ಪಂಚ ಕ್ಷೇತ್ರಗಳ ಉಪಚುನಾವಣೆ ಪೈಕಿ ಶಿವಮೊಗ್ಗ ಹೊರತು ಪಡಿಸಿ ಮತ್ತೆ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ. ಮಂಡ್ಯ, ರಾಮನಗರ, ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷಗಳು ಕೈವಶ ಮಾಡಿಕೊಂಡಿವೆ.

click me!