ಮೋದಿ ಭೇಟಿಯಿಂದ ಕಾರ್ಯಕರ್ತರ ಆತ್ಮವಿಶ್ವಾಸ ವೃದ್ಧಿ: ವಿಜಯೇಂದ್ರ

By Kannadaprabha News  |  First Published Mar 17, 2024, 8:44 PM IST

ಮೋದಿ ಕೊಡುಗೆಗಳು, ರಾಜ್ಯ ಸರಕಾರದ ವೈಫಲ್ಯ ಎರಡೂ ನಮಗೆ ಅನುಕೂಲಕರವಾಗಿದೆ. ನಮ್ಮ ಪ್ರಜ್ಞಾವಂತ ಮತದಾರರು ದೇಶದ ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿಸುತ್ತಾರೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳು ನಮ್ಮ ಪರವಾಗಿವೆ: ವಿಜಯೇಂದ್ರ 


ಕಲಬುರಗಿ(ಮಾ.17): ಕಲಬುರಗಿ ಬಹಿರಂಗ ಸಭೆ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ಹೋಗಿದ್ದಾರೆ ಎಂದು ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಬಹಳ ದಿನಗಳಿಂದ ಲೋಕಸಭೆ ಚುನಾವಣೆ ದಿನಾಂಕದ ಘೋಷಣೆ ನಿರೀಕ್ಷೆಯಲ್ಲಿದ್ದೆವು. ಆಯೋಗ ಶನಿವಾರ ದಿನಾಂಕ ಘೋಷಣೆ ಮಾಡಿದೆ. ಮೋದಿ ಕೊಡುಗೆಗಳು, ರಾಜ್ಯ ಸರಕಾರದ ವೈಫಲ್ಯ ಎರಡೂ ನಮಗೆ ಅನುಕೂಲಕರವಾಗಿದೆ. ನಮ್ಮ ಪ್ರಜ್ಞಾವಂತ ಮತದಾರರು ದೇಶದ ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿಸುತ್ತಾರೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳು ನಮ್ಮ ಪರವಾಗಿವೆ ಎಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ವಿಜಯೇಂದ್ರ ಪ್ರತಿಕ್ರಿಯಿಸಿದರು.

Tap to resize

Latest Videos

undefined

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ: ಆರ್‌ ಅಶೋಕ್ ವಾಗ್ದಾಳಿ

ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಹುಡುಕುವುದರಲ್ಲಿ ತಲ್ಲೀನವಾಗಿದೆ. ಸಚಿವರನ್ನು ಚುನಾವಣಾ ಕಣಕ್ಕಿಳಿಸಲು ಒತ್ತಡ ಹಾಕುತ್ತಿದ್ದಾರೆ. ಆದರೆ ಅಭ್ಯರ್ಥಿಯಾಗಲು ಸಚಿವರು ಧೈರ್ಯ ಮಾಡುತ್ತಿಲ್ಲ. ಮೋದಿ ಜನಪ್ರಿಯತೆ, ಜನರ ಒಲವು ನಮಗೆ ಕಾಂಗ್ರೆಸ್ ಸೋಲಿಸಲು ಬ್ರಹ್ಮಾಸ್ತ್ರಗಳಾಗಿವೆ. ನಮ್ಮ ಪಕ್ಷದಲ್ಲಿನ ಗೊಂದಲಗಳೆಲ್ಲವೂ ಸದ್ಯದಲ್ಲೇ ಬಗೆಹರಿಯಲಿವೆ ಎಂದು ವಿಜಯೇಂದ್ರ ಹೇಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ದೇಶದ ಜನರ ಬಯಕೆ. ರಾಜ್ಯ ದಲ್ಲೂ ಇದೇ ವಾತಾವರಣ ಇದೆ. ಮೋದಿ ಅವರ ಜನಪ್ರೀಯತೆ ಮತವಾಗಿ ಪರಿವರ್ತನೆ ಮಾಡಬೇಕು. ಜೆಡಿಎಸ್ ಜೊತೆ ಒಂದಾಗಿ ರಾಜ್ಯದಲ್ಲಿ ಮತ್ತೊಂದು ಐತಿಹಾಸಿಕ ಗೆಲುವು ಬಿಜೆಪಿಗೆ ಸಿಗಲಿದೆ ಎಂದರು. ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೇರೆ ಸಮಾಜದವರ ಕೊಲೆ ದಬ್ಬಾಳಿಕೆ ಗುಂ ಡಾಗಿರಿ ಕಲಬುರಗಿಯಲ್ಲಿ ಹೆಚ್ಚಾಗಿದೆ. ಈ ಜಿಲ್ಲೆಯ ಮಂತ್ರಿಗಳು ಬರೀ ಉಪದೇಶ ಕೊಡ್ತಾ ರೆ. ಮತದಾರರು ಈ ಬಾರಿ ಇಂಥವರಿಗೆ ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.

click me!