ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 23 ಸಾವಿರ ರೌಡಿಗಳಿಗೆ ಕ್ಲೀನ್‌ಚಿಟ್ ನೀಡಿದ್ದು, ಇದು ರೌಡಿಗಳೇ ಇರುವಂತಹ ರೌಡಿ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್(Saleem ahmed) ಟೀಕಿಸಿದ್ದಾರೆ.
ದಾವಣಗೆರೆ (ಮಾ.15): ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 23 ಸಾವಿರ ರೌಡಿಗಳಿಗೆ ಕ್ಲೀನ್‌ಚಿಟ್ ನೀಡಿದ್ದು, ಇದು ರೌಡಿಗಳೇ ಇರುವಂತಹ ರೌಡಿ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್(Saleem ahmed) ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಯಾವುದೇ ಬದ್ಧತೆಯೇ ಇಲ್ಲ. ಸ್ವಜನ ಪಕ್ಷಪಾತದಿಂದ ಕೂಡಿರುವ ರೌಡಿಗಳ ಸರ್ಕಾರ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಒಬ್ಬ ರೌಡಿಗೆ ತಲೆ ಬಾಗಿ ನಮಸ್ಕರಿಸಿದ್ದು, ನಿಜಕ್ಕೂ ದುರ್ದೈವ, ದುರಂತ ಎಂದರು.
ರಾಮನಗರ: ಡಿಕೆಶಿಯೇ ಅಭ್ಯರ್ಥಿಯೆಂದು ಭಾವಿಸಿ ಕಾಂಗ್ರೆಸ್ ಗೆಲ್ಲಿಸಿ: ಡಿಕೆಶಿ ಕರೆ
ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಸೋಲುತ್ತೇವೆಂಬ ತೀರ್ಮಾನಕ್ಕೆ ಬಂದ ಬಿಜೆಪಿಯವರು ಜನರ ಗಮನ ಸೆಳೆಯಲು ಸಿಡಿ ವಿಷಯವನ್ನು ಮುನ್ನೆಲೆಗೆ ತರುವ ಹುನ್ನಾರ ನಡೆಸಿದ್ದಾರೆ. ಬಿಜೆಪಿಯವರು ಏನೇ ಹೇಳಿದರೂ ಜನರು ನಂಬುವ ಸ್ಥಿತಿಯಲ್ಲಂತೂ ಇಲ್ಲ. ಬಿಜೆಪಿಯವರ ನಾಲ್ಕು ವರ್ಷಗಳ ದುರಾಡಳಿತದಿಂದ ಜನರೂ ಬೇಸತ್ತಿದ್ದಾರೆ ಎಂದರು. ಬಿಜೆಪಿ ಸರ್ಕಾರ ಇನ್ನು 45 ದಿನ ಮಾತ್ರವೇ ಅಧಿಕಾರದಲ್ಲಿರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳಿಸಲು ಜನತೆ ತೀರ್ಮಾನಿಸಿದ್ದಾರೆ. ಜನರು ಇಂತಹ ಭ್ರಷ್ಟಸರ್ಕಾರವನ್ನು ಕಿತ್ತೆಸೆದು, ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡುತ್ತಾರೆ ಎಂದು ಸಲೀಂ ಅಹಮ್ಮದ್ ತಿಳಿಸಿದರು. ಕೆಪಿಸಿಸಿ ವಕ್ತಾರ ಡಿ.ಬಸವರಾಜ ಇತರರಿದ್ದರು.
ಬಿಜೆಪಿ ಸುಳ್ಳಿನ ಸರ್ಕಾರ: ಕೊಟ್ಟ ಭರವಸೆ ಈಡೇರಿಸಿಲ್ಲ: ಮಧು ಬಂಗಾರಪ್ಪ
ಆನವಟ್ಟಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಕೆಲವು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುಣಾವಣೆ ನಡೆಸದೇ, ಬಿಜೆಪಿ ಸರ್ಕಾರ ಎಲ್ಲ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಂಡು ಕೇಂದ್ರೀಕರಣ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಒಬಿಸಿ ಘಟಕ ರಾಜ್ಯಾಧ್ಯಕ್ಷ ಚ ಆರೋಪಿಸಿದರು.
ಕುಬಟೂರು ಗ್ರಾಮದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುಣಾವಣೆ ಸಮೀಪ ಬರುತ್ತಲೇ ಸಾಲು ಸಾಲು ಬಿಜೆಪಿ ಸರ್ಕಾರದ ಸುಳ್ಳು ಭರವಸೆಗಳ ಘೋಷಣೆ ಶುರು ಮಾಡಿಕೊಳ್ಳುತ್ತಾರೆ. ಐದು ವರ್ಷ ಅಧಿಕಾರ ಮಾಡಿ ಆಶ್ರಯ ಮನೆಗಳನ್ನು ನೀಡದ ಸರ್ಕಾರ ಒಮ್ಮೇಲೆ 2500 ಮನೆಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಈ ಹಿಂದೆ ಬಸವ ಯೋಜನೆಯಲ್ಲಿ ವಸತಿ ಮನೆಗಳನ್ನು ನೀಡುವುದಾಗಿ ಕಾರ್ಡ್ ವಿತರಣೆ ಮಾಡಿದರು. ಒಂದು ಮನೆಯೂ ನಿರ್ಮಾಣ ಆಗಲಿಲ್ಲ. ಕೇವಲ ಸುಳ್ಳಿನ ಭರವಸೆಗಳ ಸರ್ಕಾರ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸರ್ಕಾರದ ಕಾಮಗಾರಿಗಳನ್ನು ಮಾಡುವಾಗ ಮನೆಗಳನ್ನಾಗಲಿ, ರಂಗ ಮಂದಿರಗಳನ್ನಾಗಲಿ ಒಡೆಯುವ ಮೊದಲು, ಅವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಈ ಹಿಂದೆ ಸೊರಬದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿ ವಾಸವಾಗಿದ್ದಾಗ, ಅವರಿಗೆ ಕುದುರೆ ಗಣಿಯಲ್ಲಿ ಗ್ರಾಮಸ್ಥರ ವಿಶ್ವಾಸ ಗಳಿಸಿ, ಅವರಿಗೆ ಸೂರಿನ ವ್ಯವಸ್ಥೆ ಮಾಡಲಾಯಿತು. ಈಗ ಅದು ಒಂದು ಗ್ರಾಮವಾಗಿದೆ ಎಂದರು.
ಭಾರತ ಈಗಾಗಲೇ ಹಿಂದೂ ರಾಷ್ಟ್ರ: ಆರೆಸ್ಸೆಸ್ ಪ್ರತಿಪಾದನೆ...
ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ, ಅಧಿಕಾರವನ್ನು ಕೆಳ ಹಂತದವರೆಗೂ ವಿಕೇಂದ್ರೀಕರಣ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡಿದೆ. ಸ್ಥಳೀಯ ಪಂಚಾಯಿತಿ ಚುಣಾವಣೆಗಳಲ್ಲಿ ಮಹಿಳೆಗೆ ಮೀಸಲಾತಿ ನೀಡುವ ಮೂಲಕ ಮಹಿಳೆಯನ್ನು ಮುಖ್ಯ ವೇಧಿಕೆ ತಂದಿದೆ ಹಾಗಾಗಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು.