Oxygen Man: 3 ರಾಜ್ಯದ ಚುನಾವಣಾ ಪ್ರಚಾರಕ್ಕೆ ಕನ್ನಡಿಗ ಶ್ರೀನಿವಾಸ್ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ

Kannadaprabha News   | Asianet News
Published : Feb 05, 2022, 10:13 AM ISTUpdated : Feb 05, 2022, 10:39 AM IST
Oxygen Man: 3 ರಾಜ್ಯದ ಚುನಾವಣಾ ಪ್ರಚಾರಕ್ಕೆ ಕನ್ನಡಿಗ ಶ್ರೀನಿವಾಸ್ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ

ಸಾರಾಂಶ

*  ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ಆಕ್ಸಿಜನ್‌ ಮ್ಯಾನ್‌ ಖ್ಯಾತಿ *  ಯುವ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಶ್ರೀನಿವಾಸ್ ವಿರುದ್ಧ ಆರೋಪ *  ಆರೋಪಗಳಿಗೆ ಲೆಕ್ಕಿಸದೆ ಹೈಕಮಾಂಡ್ ವಿಶ್ವಾಸ ಹೊಂದಿರುವುದರ ಪ್ರತೀಕ ಈ ನೇಮಕ 

ಬೆಂಗಳೂರು(ಫೆ.05): ದೇಶದಲ್ಲಿ ನಡೆಯುತ್ತಿರುವ ಪಂಚ ರಾಜ್ಯ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ(Election Campaign) ರಾಜ್ಯದಿಂದ ಅತಿ ಹೆಚ್ಚು ರಾಜ್ಯಗಳಿಗೆ ಕಾಂಗ್ರೆಸ್(Congress) ಪರ ಸ್ಟಾರ್‌ ಪ್ರಚಾರಕರಾಗಿ ನೇಮಕಗೊಂಡ ಹಿರಿಮೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್(BV Srinivas) ಪಾತ್ರರಾಗಿದ್ದಾರೆ.

ಎಐಸಿಸಿ(AICC) ಬಿಡುಗಡೆ ಮಾಡಿರುವ ಉತ್ತರಖಂಡ(Uttarakhand), ಗೋವಾ(Goa) ಹಾಗೂ ಪಂಜಾಬ್(Punjab) ಮೂರೂ ರಾಜ್ಯಗಳ ಸ್ಟಾರ್‌ ಪ್ರಚಾರಕರ(Star Campaigners) ಪಟ್ಟಿಯಲ್ಲಿ ಶ್ರೀನಿವಾಸ್‌ ಸ್ಥಾನ ಪಡೆದಿದ್ದಾರೆ. ಕೊರೋನಾ(Coronavirus) ಸಮಯದಲ್ಲಿ ಸಾಕಷ್ಟು ಪರಿಹಾರ ಕಾರ್ಯಗಳ ಮೂಲಕ ಆಕ್ಸಿಜನ್‌ ಮ್ಯಾನ್(Oxygen Man) ಎಂದೇ ಹೆಸರಾದ ಶ್ರೀನಿವಾಸ್‌ಗೆ ಉತ್ತರ ಭಾರತದಲ್ಲೂ(North India) ಸಾಕಷ್ಟು ಅಭಿಮಾನ ಬಳಗವಿದೆ. ಹೀಗಾಗಿ ಮೂರು ರಾಜ್ಯಗಳಿಗೆ ಸ್ಟಾರ್‌ ಪ್ರಚಾರಕರಾಗಿ ನೇಮಕವಾಗಿದ್ದಾರೆ.

ಕನ್ನಡಿಗ ಶ್ರೀನಿವಾಸ್ ಕೊರೋನಾ ಸೇವೆಗೆ ಸೋನಿಯಾ ಶಹಬ್ಬಾಸ್!

ರಾಜ್ಯದಿಂದ ಸಿದ್ದರಾಮಯ್ಯ(Siddaramaiah), ಡಿ.ಕೆ.ಶಿವಕುಮಾರ್(DK Shivakumar), ದಿನೇಶ್‌ ಗುಂಡೂರಾವ್(Dinesh Gundurao) ಸೇರಿದಂತೆ ಹಲವರು ಸ್ಟಾರ್‌ ಪ್ರಚಾರಕರಾಗಿ ನೇಮಕಗೊಂಡಿದ್ದರೂ ಗೋವಾ ರಾಜ್ಯಕ್ಕೆ ಮಾತ್ರ ಸೀಮಿತವಾಗಿ ನೇಮಿಸಲಾಗಿದೆ. ಆದರೆ, ಶ್ರೀನಿವಾಸ್ ಅವರನ್ನು ಮೂರು ರಾಜ್ಯಗಳಿಗೆ ಸ್ಟಾರ್‌ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ. ಆದರೆ, ಇತ್ತೀಚೆಗೆ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಬಿ.ವಿ.ಶ್ರೀನಿವಾಸ್ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಆದರೆ, ಹೈಕಮಾಂಡ್ ಇಂತಹ ಆರೋಪಗಳಿಗೆ ಲೆಕ್ಕಿಸದೆ ಕಾಂಗ್ರೆಸ್‌ ಹೈಕಮಾಂಡ್(Congress High Command) ವಿಶ್ವಾಸ ಹೊಂದಿರುವುದರ ಪ್ರತೀಕ ಈ ನೇಮಕ ಎಂದೇ ಪಕ್ಷದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಗೋವಾ ಚುನಾವಣೆಗೆ ರಾಜ್ಯದ 8 ಮಂದಿ ‘ಕೈ’ ಸ್ಟಾರ್‌ ಪ್ರಚಾರಕರು

ಬೆಂಗಳೂರು: ಗೋವಾ ವಿಧಾನಸಭೆ ಚುನಾವಣೆಗೆ(Goa Assembly Election) ರಾಷ್ಟ್ರೀಯ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಸೇರಿದಂತೆ ರಾಜ್ಯದ ಎಂಟು ಮಂದಿ ಇದ್ದಾರೆ.

ಫೆ.14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ನಿಂದ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ರಾಹುಲ್‌ ಗಾಂಧಿ ಸೇರಿದಂತೆ 30 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಎಐಸಿಸಿ ಪ್ರಕಟಿಸಿದೆ.

ಈ ಪಟ್ಟಿಯಲ್ಲಿ ರಾಜ್ಯದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್‌ ಗುಂಡೂರಾವ್, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಸತೀಶ್‌ ಜಾರಕಿಹೊಳಿ ಅವರಿದ್ದಾರೆ.

ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯ ಖಂಡಿಸಿ ಕಲ್ಯಾಣ ಕ್ರಾಂತಿಯಾತ್ರೆ: ಖಂಡ್ರೆ

ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ ಭಾಗದ ಎಲ್ಲಾ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ‘ಕಲ್ಯಾಣ ಕ್ರಾಂತಿಯಾತ್ರೆ’ (Kalayana Krantiyatra) ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ(Eshwara Khandre) ತಿಳಿಸಿದ್ದರು.

ಕೆಪಿಸಿಸಿ ಕಚೇರಿಯಲ್ಲಿ ಫೆ.1 ರಂದು ನಡೆದ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತು ಕಲ್ಯಾಣ ಕರ್ನಾಟಕ ಭಾಗದ ನಮ್ಮ ಪಕ್ಷದ ಶಾಸಕರ ಸಭೆ ಮಾಡಿ ಆ ಭಾಗದ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರದ(Government of Karnataka) ನಿರ್ಲಕ್ಷ್ಯ ಧೋರಣೆ ಕುರಿತು ಚರ್ಚಿಸಿದ್ದೇವೆ. ಸುಮಾರು 10 ಶಾಸಕರು ಭಾಗಿಯಾಗಿದ್ದರು. ಉಳಿದವರು ಕರೆ ಮಾಡಿ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಲ್ಯಾಣ ಕ್ರಾಂತಿ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದರು.

ಪೊಲೀಸರಿಂದ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿಚಾರಣೆ!

ಈ ಸಂಬಂಧ ಸರ್ಕಾರ ಕೋವಿಡ್‌ ಮಾರ್ಗಸೂಚಿಗಳನ್ನು(Covid Guideline) ಸಡಿಲಗೊಳಿಸಿದ ಕೂಡಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌(DK Shivakumar) ಮತ್ತು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ(Siddaramaiah) ಅವರೊಂದಿಗೆ ಚರ್ಚಿಸಿ ಸೂಕ್ತ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದು 30 ತಿಂಗಳು ಕಳೆದರೂ ಯಾವುದೇ ಅನುದಾನ ನೀಡಿಲ್ಲ. ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದೆ ಅಷ್ಟೆ. ಯಾವ ಕಲ್ಯಾಣ ಕಾರ್ಯಗಳೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ