Karnataka Politics ದಿಲ್ಲಿಯಲ್ಲಿ ನಡ್ಡಾ-ವಿಜಯೇಂದ್ರ ಭೇಟಿ

Kannadaprabha News   | Asianet News
Published : Mar 10, 2022, 04:27 AM IST
Karnataka Politics ದಿಲ್ಲಿಯಲ್ಲಿ ನಡ್ಡಾ-ವಿಜಯೇಂದ್ರ ಭೇಟಿ

ಸಾರಾಂಶ

- ರಾಜ್ಯ ಬಿಜೆಪಿ, ಸರ್ಕಾರದಲ್ಲಿ ಬದಲಾವಣೆ ವದಂತಿಗೆ ರೆಕ್ಕೆಪುಕ್ಕ - ಕುತೂಹಲ ಮೂಡಿಸಿದ ವಿಜಯೇಂದ್ರ ಭೇಟಿ - ಪಕ್ಷ ಸಂಘಟನೆ ಕುರಿತಾಗಿ ಚರ್ಚೆ

ಬೆಂಗಳೂರು/ನವದೆಹಲಿ (ಮಾ.10): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (B. S. Yediyurappa) ಅವರ ಪುತ್ರರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ (State BJP VP) ಬಿ.ವೈ.ವಿಜಯೇಂದ್ರ (BY Vijayendra) ಬುಧವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP Chief JP Nadda) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ (Five State Election Results) ಮುಗಿದ ಬಳಿಕ ಕರ್ನಾಟಕದಲ್ಲಿ ಪಕ್ಷ ಹಾಗೂ ಸರ್ಕಾರದ ಸಂಪುಟದಲ್ಲಿ ಕೆಲವು ಬದಲಾವಣೆಗಳನ್ನು ಕೈಗೊಳ್ಳಬಹುದು ಎಂಬ ವದಂತಿ ಮಧ್ಯೆಯೇ ವಿಜಯೇಂದ್ರ ಅವರ ಈ ಭೇಟಿ ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವುದರಿಂದ ಅವರ ಪುತ್ರ ವಿಜಯೇಂದ್ರ ಅವರಿಗೆ ಸರ್ಕಾರದಲ್ಲಿ ಸ್ಥಾನ ಕಲ್ಪಿಸಬೇಕು ಎಂಬ ಬೇಡಿಕೆ ಅವರ ಬೆಂಬಲಿಗರಿಂದ ಬಲವಾಗಿ ಕೇಳಿಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರೂ ಒಲವು ಹೊಂದಿದ್ದಾರೆ. ಪಕ್ಷದ ರಾಜ್ಯ ನಾಯಕರು ಹಾಗೂ ವರಿಷ್ಠರು ಒಪ್ಪಿದಲ್ಲಿ ವಿಜಯೇಂದ್ರ ಸಚಿವರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಸಂದೇಶ ಹೊತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತಾಡಿದ ಅವರು, ‘ಸುಮಾರು 20 ನಿಮಿಷಗಳ ಕಾಲ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದೆ. ಈ ವೇಳೆ ರಾಜ್ಯದಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಯಿತು. ಸಂಘಟನೆ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ’ ಎಂದಷ್ಟೇ ತಿಳಿಸಿದರು.

HD Kumaraswamy ಇನ್ಮುಂದೆ ತಾಜ್‌ ವೆಸ್ಟೆಂಡ್‌ಗೆ ಹೋಗಲ್ಲ!
ಸದ್ಯಕ್ಕೆ ಜೆಡಿಎಸ್‌ನಲ್ಲೇ ಇದ್ದೇನೆ
ಕೋಲಾರ:
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಬಹಳಷ್ಟುರಾಜಕೀಯ ವಿದ್ಯಾಮಾನಗಳು ಏರು ಪೆರು ಆಗುವ ಸಾಧ್ಯತೆಗಳಿವೆ ನಾನು ಸದ್ಯಕ್ಕೆ ಜೆಡಿಎಸ್‌ ( JDS ) ಪಕ್ಷದ ಶಾಸಕನಾಗಿಯೇ ( MLA )  ಇದ್ದೇನೆ. ಕಾಂಗ್ರೆಸ್‌ ( Congress )ಪಕ್ಷದಲ್ಲಿ ನನಗೂ ಹಾಗು ನನ್ನ ಮಗನಿಗೆ ಟಿಕೆಟ್‌ ಕೇಳಿದ್ದೇನೆ ಸಿದ್ದರಾಮಯ್ಯನವರು ( siddaramaiah ) ಹೈಕಮಾಂಡ್‌ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ, ನಾನು ಈಗ ಸದ್ಯಕ್ಕೆ ಯಾವ ಪಕ್ಷಕ್ಕೆ ಸೇರಿಲ್ಲ ಜೆಡಿಎಸ್‌ ಪಕ್ಷದ ಶಾಸಕನಾಗಿಯೇ ಉಳಿದಿದ್ದೇನೆ ಮುಂದೆ ಯಾವ ಪಕ್ಷಕ್ಕಾದರೂ ಹೋಗಬಹುದು ಎಂದು ಚಾಮುಂಡೇಶ್ವರಿ ( Chamundeshwari ) ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ( JT Devegowda ) ತಿಳಿಸಿದರು.

Mysuru ಕೆ.ಆರ್‌. ಆಸ್ಪತ್ರೆ ಸಮುಚ್ಛಯ ನವೀಕರಣಕ್ಕೆ ಯೋಜನೆ ರೂಪಿಸಿ
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮಾಜಿ ಸಿಎಂ ಕುಮಾರಸ್ವಾಮಿ ( Kumaraswamy ) ಹಾಗು ದೇವೆಗೌಡರಿಗೆ ( Devegowda ) ಸಲಾಂ ಹೇಳಿ ಬಂದ ನಂತರ ನಾನು ಅವರನ್ನು ಮಾತನಾಡಿಸಿಲ್ಲ ಅವರೂ ನನ್ನನ್ನು ಮಾತನಾಡಿಸಿಲ್ಲ ಎಂದರು. ನಾನು ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ನಾವಿಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದು ನಿಜ ನನ್ನನ್ನು ಕಾಂಗ್ರೆಸ್‌ಗೆ ಬರಲು ಆಹ್ವಾನಿಸಿದಾಗ ನನ್ನ ಮಗ ಹರೀಶ್‌ಗೆ ಹಾಗು ನನಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ಎಂದು ಕೇಳಿದ್ದೇನೆ ಹೈಕಮಾಂಡ್‌ಗೆ ವಿಷಯ ಮುಟ್ಟಿಸುವುದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ ಮತ್ತೆ ನಾನು ಅವರ ಜೊತೆ ಮಾತನಾಡಿಲ್ಲ ನಾನು ಯಾವುದೇ ಪಕ್ಷದಲ್ಲಿ ಸ್ಪರ್ಧೆ ಮಾಡಿದರೂ ಗೆದ್ದಿಕೊಂಡು ಬರುವ ಶಕ್ತಿ ನನ್ನಲ್ಲಿದೆ. ಗೆದ್ದ ನಂತರ ಗೆದ್ದೆತ್ತು ಬಾಲ ಹಿಡಿಯುವ ಜಾಯಮಾನ ನನ್ನದಲ್ಲ, ಗೆಲ್ಲುವ ಮೊದಲೇ ತೀರ್ಮಾನ ಮಾಡಿ ಪಕ್ಷ ಸೇರ್ಪಡೆಯಾಗುತ್ತೇನೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್