ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧೆ ಖಚಿತ: ಬಿಎಸ್‌ವೈ

Published : Jun 16, 2022, 05:00 AM IST
ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧೆ ಖಚಿತ: ಬಿಎಸ್‌ವೈ

ಸಾರಾಂಶ

*  ಯಾವ ಕ್ಷೇತ್ರ​ದಿಂದ ಸ್ಪರ್ಧಿ​ಸು​ತ್ತಾ​ರೆಂದು ನಿರ್ಧಾ​ರ​ವಾ​ಗಿಲ್ಲ *  ಅಪರಾಧ ಸಾಬೀತಾದರೆ ಶಿಕ್ಷೆ *  ಇಡಿಯವರು ತನಿಖೆ ಮಾಡುತ್ತಿ​ದ್ದಾರೆ. ಕಾದು ನೋಡೋಣ 

ತುಮ​ಕೂ​ರು(ಜೂ.16):  ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧಿ​ಸು​ವುದು ಖಚಿತ. ಆದರೆ ಕ್ಷೇತ್ರ ಯಾವು​ದೆಂದು ನಿರ್ಧಾ​ರ​ವಾ​ಗಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಬಿ.ಎಸ್‌.ಯಡಿ​ಯೂ​ರಪ್ಪ ತಿಳಿ​ಸಿ​ದ್ದಾರೆ.

ಅವರು ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಗುಬ್ಬಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬು​ದರ ಬಗ್ಗೆ ಖಚಿ​ತತೆ ಇಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದ್ದು ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ದೃಷ್ಟಿ. ಆ ದೃಷ್ಟಿಯಿಂದ ರಾಜ್ಯಪ್ರವಾಸ ಪ್ರಾರಂಭವಾಗಿದೆ ಎಂದರು. ವಾರಕ್ಕೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುವುದಾಗಿ ತಿಳಿ​ಸಿದ ಅವರು ಎಲ್ಲಾ ವರ್ಗದ ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದ​ರು.

ಸೈಡ್ ಲೈನ್ ಎನ್ನುವ ಸಿದ್ದು ಹೇಳಿಕೆಗೆ ವಿಜಯೇಂದ್ರ ಸ್ಪರ್ಧೆಯ ತಿರುಗೇಟು ಕೊಟ್ಟ ಬಿಎಸ್‌ವೈ

ಬಿಜೆಪಿಗೆ ಬರಲು ಅನೇಕ ಜನರು ತುದಿಗಾಲಲ್ಲಿ:

ಅನೇಕ ಜನ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದ ಅವರು ಯಾರ್ಯಾರು ಬರುವು​ದ​ರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತೋ ಅವರನ್ನು ಸೇರಿಸಿಕೊಂಡು ಪಕ್ಷ ಬಲಪಡಿಸುತ್ತೇವೆ ಎಂದರು. ಈಗಾಗಲೇ ಅನೇಕ ಮಂದಿ ಬರು​ತ್ತಿ​ದ್ದಾರೆ. ಇನ್ನು ಯಾರು ಬರು​ತ್ತಾರೋ ಬರಲಿ. ಪಕ್ಷಕ್ಕೆ ಬರು​ವ​ವ​ರನ್ನು ಬೇಡ ಅಂತಾ ಹೇಳು​ವು​ದಕ್ಕೆ ಆಗು​ವು​ದಿಲ್ಲ ಎಂದರು.

ರಾಜಾಹುಲಿ ಯಡಿಯೂರಪ್ಪ ಪುತ್ರನ ರೋಚಕ ರಾಜನೀತಿ! ಅಖಾಡದಲ್ಲಿ ದಾಳ ಉರುಳಿಸಲು ಸಜ್ಜಾದ ಮರಿಟೈಗರ್!

ಯಾರಿಗೆ ಏನು ಜವಬ್ದಾರಿ ಕೊಡಬೇಕು ಅನ್ನೋದು ಪಕ್ಷ ತೀರ್ಮಾನ ಮಾಡುತ್ತದೆ. ಂಎಲ…ಎ ಗಳು ಈಗ ಬಂದರೆ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದ ಅವರು ಈಗ ಯಾರು ಎಂಎಲ…ಎಗಳು ಬರುವು​ದಿಲ್ಲ ಎಂದರು.
ರಾಹುಲ್‌ ಗಾಂಧಿ ವಿಚಾರ ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತದೆಯೋ ಅವರನ್ನು ತನಿಖೆ ಮಾಡುತ್ತಾರೆ. ಯಾರ ಬಗ್ಗೆ ಏನು ಅನುಮಾನ ಇರುತ್ತೋ ಆಗ ತನಿಖೆ ಮಾಡುತ್ತಾರೆ ಎಂದ​ರು.

ಅಪರಾಧ ಸಾಬೀತಾದರೆ ಶಿಕ್ಷೆ:

ತನಿಖೆ ವೇಳೆ ಸತ್ಯಾ​ಸ​ತ್ಯ​ತೆ​ಗಳು ತನಿಖೆ ಬಳಿಕ ಗೊತ್ತಾ​ಗು​ತ್ತದೆ ಎಂದ ಅವರು ನಿರುಪರಾಧಿಯಾದರೆ ಯಾವುದೇ ಗೊಂದಲ ಇಲ್ಲದೆ ಹೊರಗೆ ಬರುತ್ತಾರೆ. ಅಪರಾಧ ಸಾಬೀತಾದರೆ ಎಲ್ಲರಂತೆ ಶಿಕ್ಷೆಯಾಗುತ್ತದೆ ಎಂದ​ರು.
ಕಾನೂನಿಗೆ ರಾಹುಲ್‌ ಗಾಂಧಿ ಬೇರೆ, ಯಡಿಯೂರಪ್ಪ ಬೇರೆ, ಮತ್ತೊಬ್ಬ ಬೇರೆ ಅನ್ನೋ ಪ್ರಶ್ನೆಯಿಲ್ಲ. ಇಡಿಯವರು ತನಿಖೆ ಮಾಡುತ್ತಿ​ದ್ದಾರೆ. ಕಾದು ನೋಡೋಣ ಎಂದರು. ಹೊಸ ಲೋಕಯುಕ್ತರು ನೇಮಕವಾಗಿದ್ದು ಅವರು ಒಳ್ಳೆ ಕೆಲಸ ಮಾಡಲಿ ಅಂತ ಹಾರೈಸುತ್ತೇನೆ ಎಂದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್