* ಹೊರಟ್ಟಿ ಶಿಷ್ಯನನ್ನೇ ನಿಲ್ಲಿಸಿ ಹೊರೆ ಇಳಿಸಿಕೊಂಡ ಮಹಿಳೆ
* ಉತ್ತರ ಕರ್ನಾಟಕದಲ್ಲಿ ಅಕ್ಷರಶಃ ಮುಖಭಂಗ ಅನುಭವಿಸುವಂತಾದ ಜೆಡಿಎಸ್
* 2023ರಲ್ಲಿ 123ರ ಗುರಿ ಇಟ್ಟುಕೊಂಡು ಮುನ್ನುಗ್ಗುತ್ತಿರುವ ಕುಮಾರಸ್ವಾಮಿ
ಹುಬ್ಬಳ್ಳಿ(ಜೂ.16): ವಿಧಾನಪರಿಷತ್‌ನಲ್ಲಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದವರು ಬಸವರಾಜ ಹೊರಟ್ಟಿ. ಬರೋಬ್ಬರಿ 4 ದಶಕಗಳ ಜನತಾ ಪರಿವಾರದ ಸಂಬಂಧ ಕಡಿದುಕೊಂಡು ಬಿಜೆಪಿಯಿಂದ ನಿಂತು ಗೆಲುವು ಕಂಡಿದ್ದಾರೆ. ಇವರನ್ನು ಹೇಗಾದರೂ ಮಾಡಿ ಸೋಲಿಸಿ ಪಾಠ ಕಲಿಸಬೇಕೆಂಬ ಹಟದಿಂದ ಕಣಕ್ಕಿಳಿಸಿದ್ದ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಅಕ್ಷರಶಃ ಮುಖಭಂಗ ಅನುಭವಿಸುವಂತಾಗಿದೆ.
4 ದಶಕಗಳಿಂದ ಜನತಾ ಪರಿವಾರದ ಸಂಬಂಧ ಹೊಂದಿದ್ದ ಹೊರಟ್ಟಿ, ಈ ಭಾಗದಲ್ಲಿ ಜೆಡಿಎಸ್ ಎಂದರೆ ಥಟ್ಟನೆ ನೆನಪಾಗುವುದು ಹೊರಟ್ಟಿಎಂಬಂತಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಜೆಡಿಎಸ್ ಮಾತ್ರ ಸಂಘಟನೆ ಆಗುತ್ತಲೇ ಇರಲಿಲ್ಲ. ಪ್ರತಿ ಚುನಾವಣೆಯಲ್ಲೂ ಹೊರಟ್ಟಿಬಿಟ್ಟರೂ ಉಳಿದವರೆಲ್ಲರೂ ಸೋಲುವುದು ಗ್ಯಾರಂಟಿ ಎಂಬಂತಾಗಿತ್ತು. ಹೀಗಾಗಿ ಸುಮ್ಮನೆ ಇಲ್ಲಿರುವುದು ವ್ಯರ್ಥ ಎಂದುಕೊಂಡು ಈ ಸಲ ಪರಿಷತ್ ಚುನಾವಣೆ ವೇಳೆ ಹೊರಟ್ಟಿಬಿಜೆಪಿಗೆ ವಲಸೆ ಹೋದರು. ಅಲ್ಲಿನವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಈ ನಡುವೆ ಜೆಡಿಎಸ್ ಬಿಟ್ಟು ಹೋದ ಹೊರಟ್ಟಿಗೆ ತಕ್ಕ ಪಾಠ ಕಲಿಸಬೇಕೆಂಬ ಹಠತೊಟ್ಟಿತ್ತು.
undefined
MLC Election: ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಹೊರಟ್ಟಿ ಬಾದಶಾ!
ಇದಕ್ಕಾಗಿ ಒಂದು ಕಾಲದಲ್ಲಿ ಹೊರಟ್ಟಿಶಿಷ್ಯನೇ ಆಗಿದ್ದ, ಅವರೊಂದಿಗೆ 5 ಚುನಾವಣೆಗಳಲ್ಲಿ ಓಡಾಡಿದ್ದ ಶ್ರೀಶೈಲ ಗಡದಿನ್ನಿ ಇತ್ತೀಚಿನ ವರ್ಷದಲ್ಲಿ ಹೊರಟ್ಟಿಅವರೊಂದಿಗೆ ಮುನಿಸಿಕೊಂಡಿದ್ದರು. ಹೊರಟ್ಟಿಅವರ ಸಂಘಟನೆಗೆ ಪರ್ಯಾವಾಗಿ ಸಂಘಟನೆಯನ್ನು ಹುಟ್ಟುಹಾಕಿದ್ದರು. ಹೊರಟ್ಟಿಅವರೊಂದಿಗಿನ ಗಡದಿನ್ನಿಯ ಮುನಿಸಿನ ಬಗ್ಗೆ ಅರಿತ ಜೆಡಿಎಸ್, ಇವರನ್ನು ಕಣಕ್ಕಿಳಿಸಿದರೆ ಹೊರಟ್ಟಿಗೆ ಪಾಠ ಕಲಿಸಬಹುದು. ಚುನಾವಣೆಯಲ್ಲಿ ತಾನೂ ಗೆಲ್ಲದಿದ್ದರೂ ಹೊರಟ್ಟಿಮತಗಳನ್ನು ಇವರು ತೆಗೆದುಕೊಂಡರೆ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಗೆದ್ದರೂ ಪರವಾಗಿಲ್ಲ. ಪಕ್ಷವನ್ನು ನಡುನೀರಲ್ಲಿ ಬಿಟ್ಟು ಹೋಗಿರುವ ಹೊರಟ್ಟಿಅವರ ಸೋಲು ಮುಖ್ಯ ಎಂದುಕೊಂಡು ಗಡದಿನ್ನಿ ಅವರನ್ನು ಪಕ್ಷದಿಂದ ಕಣಕ್ಕಿಳಿಸಿತ್ತು.
ಠೇವಣಿ ಕಳೆದುಕೊಂಡ ಶಿಷ್ಯ:
ಬಿಜೆಪಿ ಸಂಘಟನೆ, ಹೊರಟ್ಟಿವರ್ಚಸ್ಸಿನ ಮುಂದೆ ಅವರ ಶಿಷ್ಯ, ನನಗೆ ಹಾಗೂ ಶಿಕ್ಷಕ ಸಮುದಾಯಕ್ಕೆ ಹೊರಟ್ಟಿಅವರಿಂದ ಅನ್ಯಾಯವಾಗಿದೆ ಎಂದು ಹೇಳಿಕೊಂಡು ಗಡದಿನ್ನಿ ಪ್ರಚಾರ ಮಾಡಿದ್ದರು. ಇನ್ನು ಒಂದು ಹಂತದಲ್ಲಿ ಇವರು ಗೆದ್ದೇ ಬಿಡುತ್ತಾರೆ ಎಂಬ ವಿಶ್ವಾಸ ಕುಮಾರಸ್ವಾಮಿಗೂ ಇತ್ತು. ಅದಕ್ಕಾಗಿ ತಾವೇ ಸ್ವತಃ ಆಗಮಿಸಿ ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ಕೂಡ ಮಾಡಿ ಹೊರಟ್ಟಿವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದುಂಟು.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಭರ್ಜರಿ ಗೆಲುವು: ಅಧಿಕೃತ ಘೋಷಣೆಯೊಂದೇ ಬಾಕಿ
ಆದರೆ ಇವರ ಮಾತಿಗೆ ಮತದಾರ ಮರಳಾಗಲಿಲ್ಲ. ಹೊರಟ್ಟಿಅವರ ಮತ ಕಸಿಯಲು ಸಾಧ್ಯವಾಗಲಿಲ್ಲ. ಕನಿಷ್ಠ ಪಕ್ಷ ಮೂರಂಕಿಯನ್ನೂ ದಾಟಲು ಸಾಧ್ಯವಾಗಲಿಲ್ಲ. ಈ ಮೂಲಕ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸುವಂತಾಗಿದೆ ಅಲ್ಲದೇ, ಜೆಡಿಎಸ್ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಇದೀಗ ಮುಂದೆ 2023ರಲ್ಲಿ 123ರ ಗುರಿ ಇಟ್ಟುಕೊಂಡು ಕುಮಾರಸ್ವಾಮಿ ಮುನ್ನುಗ್ಗುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಿಲಾಪಿ ರಾಜಕಾರಣದಲ್ಲಿ ನಿರತವಾಗಿರುವ ಜೆಡಿಎಸ್ ಮುಖಂಡರನ್ನು ಅದ್ಹೇಗೆ ಸರಿದಾರಿಗೆ ತಂದು ತಮ್ಮ ಗುರಿ ಮುಟ್ಟುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!