ಬಿಜೆಪಿ ಟಿಕೆಟ್ ಹಂಚಿಕೆ ಅಸಮಾಧಾನ, ಪಟ್ಟಿ ಪ್ರಕಟಕ್ಕೂ ಮುನ್ನವೇ ಬೆಂಗಳೂರಿಗೆ ಹೊರಟ ಬಿಎಸ್‌ವೈ!

Published : Apr 10, 2023, 05:00 PM ISTUpdated : Apr 10, 2023, 05:04 PM IST
ಬಿಜೆಪಿ ಟಿಕೆಟ್ ಹಂಚಿಕೆ ಅಸಮಾಧಾನ, ಪಟ್ಟಿ ಪ್ರಕಟಕ್ಕೂ ಮುನ್ನವೇ ಬೆಂಗಳೂರಿಗೆ ಹೊರಟ ಬಿಎಸ್‌ವೈ!

ಸಾರಾಂಶ

ಟಿಕೆಟ್ ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ವರಿಷ್ಟರ ಸಭೆಯಲ್ಲಿ ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ ಅವರು ಬೇಸರಗೊಂಡಿದ್ದಾರೆ. ಹೀಗಾಗಿ  ಪಟ್ಟಿ ಪ್ರಕಟಕ್ಕೂ ಮುನ್ನವೇ ದೆಹಲಿಯಿಂದ  ಬಿಎಸ್‌ವೈ ಬೆಂಗಳೂರಿಗೆ ಹೊರಟಿದ್ದಾರೆ.

ನವದೆಹಲಿ (ಏ.10): ಟಿಕೆಟ್ ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ವರಿಷ್ಟರ ಸಭೆಯಲ್ಲಿ ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ ಅವರು ಬೇಸರಗೊಂಡಿದ್ದಾರೆ. ಹೀಗಾಗಿ  ಪಟ್ಟಿ ಪ್ರಕಟಕ್ಕೂ ಮುನ್ನವೇ ದೆಹಲಿಯಿಂದ  ಬಿಎಸ್‌ವೈ ಬೆಂಗಳೂರಿಗೆ ಹೊರಟಿದ್ದಾರೆ. ಸಂಜೆ 5:15 ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಹೈಕಮಾಂಡ್ ಗೆ ನಾನು ಹೇಳುವುದೆಲ್ಲಾ ಮುಗಿದಿದೆ ಹಾಗಾಗಿ ಹೊರಡುವೆ ಎಂದು ಆಪ್ತರ ಬಳಿ ಬಿಎಸ್ ವೈ ಹೇಳಿಕೊಂಡಿದ್ದಾರೆ. ತಮ್ಮ ಮನೆಯಿಂದ ಹೊರಡುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು  ಕಾರಿನ ತನಕ ಬಂದು ಬಿಟ್ಟು ಹೋಗಿದ್ದಾರೆ. ನಡ್ಡಾ ಮನೆಗೆ ಬಂದು ಕೇವಲ 10 ನಿಮಿಷದಲ್ಲೇ ಯಡಿಯೂರಪ್ಪ ತೆರಳಿದ್ದಾರೆ.

ಸಿಎಂ ಹೋದ ಬಳಿಕ ನಡ್ಡಾ ಮನೆಗೆ ಬಂದ ಬಿಎಸ್ ವೈ
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಕರ್ನಾಟಕ ನಾಯಕರ ಪ್ರತ್ಯೇಕ ಸಭೆಗಳಲ್ಲಿ ಬಿಎಸ್ ಯಡಿಯೂರಪ್ಪ ಭಾಗಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಪ್ರತ್ಯೇಕ ಸಭೆಯೇ ಈ ಬೇಸರಕ್ಕೆ ಕಾರಣ ಎನ್ನಲಾಗಿದೆ. ನಿನ್ನೆ ಸಭೆಯ ಬಳಿಕ ಬಿಎಸ್ ವೈ ಬೇಸರದಿಂದ ಹೊರ ಹೋಗಿದ್ದರು. ಹೀಗಾಗಿ ಇಂದಿನ ಸಭೆಗೆ ಸಿಎಂ ಬೊಮ್ಮಾಯಿ ಹೋದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸಕ್ಕೆ ಬಿಎಸ್ ವೈ ಬಂದಿದ್ದರು. 

ಯಡಿಯೂರಪ್ಪ ಬೇಸರಗೊಂಡಿದ್ದರು ಎಂಬ ಚರ್ಚೆಯ ನಡುವೆಯೇ  ಜೆಪಿ ನಡ್ಡಾ ಮನೆಯಿಂದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತೆರಳುವಾಗ ಗೇಟಿನವರೆಗೂ ಬಂದು ಜೆಪಿ ನಡ್ಡಾ ಬಿಟ್ಟು ಹೋದರು. ನಡ್ಡಾ ಮನೆಗೆ ಬಂದು ಕೇವಲ 10 ನಿಮೀಷದಲ್ಲೇ  ಯಡಿಯೂರಪ್ಪ ತೆರಳಿದರು.

ಇನ್ನು ಬಿಜೆಪಿ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ನಿನ್ನೆ ಎಲ್ಲಾ ಕ್ಷೇತ್ರದ ಬಗ್ಗೆ ಆಗಿತ್ತು. ಆದರೆ ಕೆಲವೊಂದು ಕ್ಷೇತ್ರದ ಬಗ್ಗೆ ಗೊಂದಲವಾಗಿತ್ತು. ಅದರ ಬಗ್ಗೆ ಅಧ್ಯಕ್ಷರು ವಿವರ ಕೇಳಿದ್ರು ಹಾಗಾಗಿ ವಿವರ ನೀಡಿ ಬಂದಿದ್ದೇನೆ. ಇಂದು ರಾತ್ರಿ ಅಥವಾ ನಾಳೆ ಟಿಕೆಟ್ ಹಂಚಿಕೆ ಲಿಸ್ಟ್ ಬಿಡುಗಡೆಯಾಗಲಿದೆ. ನಾನು ಕೊಟ್ಟಿರೋ ಎಲ್ಲಾ ಅಭಿಪ್ರಾಯಗಳನ್ನು ನಾಯಕರು ಕೇಳಿದ್ದಾರೆ ಎಂದರು.

ಬಿಜೆಪಿ ಪಟ್ಟಿ ರಿಲೀಸ್ ಮತ್ತೆ ಮುಂದಕ್ಕೆ! ಕೇಸರಿ ಕಲಿಗಳ ಆಯ್ಕೆ ವಿಳಂಬವಾಗುತ್ತಿರೋದ್ಯಾಕೆ?

ಬೆಳಿಗ್ಗೆ ಸಭೆಗೆ ಯಾಕೆ ಗೈರಾಗಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ ಕೆಲವೊಂದು ಸ್ಟ್ಯಾಟರ್ಜಿ ಮಾಡಲು ಪ್ರತ್ಯೆಕವಾಗಿ ಸಭೆ ಕರೆದಿದ್ರು ಹಾಗಾಗಿ ಅವರು ಹೋಗಿದ್ರು. ಜಾಹಿರಾತು ಸೇರಿದಂತೆ ಹಲವು ವಿಚಾರ ಚರ್ಚೆ ಮಾಡಿದ್ದಾರೆ ಎಂದು ನಡ್ಡಾ ಭೇಟಿಯ ನಂತರ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಡೌಟ್ ಸಂದೇಶಕ್ಕೆ ಬೆಚ್ಚಿದ ಆಕಾಂಕ್ಷಿಗಳು!

ನಾವು ಸರ್ಕಾರ ರಚನೆ ಮಾಡಲಿದ್ದೇವೆ. ಯಾವುದೇ ಗೊಂದಲಗಳಿಲ್ಲ. ಟಿಕೆಟ್ ಹಂಚಿಕೆಯಲ್ಲೂ ವಿಳಂಬ ಆಗಿಲ್ಲ ಎಂದ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎಂಬ ವಿಚಾರಕ್ಕೆ ನಾನೆಲ್ಲೂ ಬೇಸರ ಗೊಂಡಿಲ್ಲ, ನಾನು ಖುಷಿಯಾಗೆ ಇದ್ದೇನೆ ಎಂದರು.

Karnataka Assembly Election 2023: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ