
ಮೈಸೂರು, (ಜ.26): ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲು ನೂತನ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಮೂಲ ಬಿಜೆಪಿಗರು ಸಹ ನಮಗೂ ಮಂತ್ರಿ ಸ್ಥಾನ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರಿಗೆ ಯಾರಿಗೆ ಸಚಿವ ಸ್ಥಾನ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ತಲೆ ಬಿಸಿ ಶುರುವಾಗಿದೆ. ಇದರ ಮಧ್ಯೆ ನೂತನ ಶಾಸಕರ ಪೈಕಿ 6 ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವ ಮಾತುಗಳನ್ನ ಹೇಳಿತ್ತಿದ್ದಾರೆ ಎನ್ನಲಾಗುತ್ತಿದೆ.
ಒಗ್ಗಟ್ಟಿನಿಂದ BSY ಕುರ್ಚಿ ಗಟ್ಟಿಗೊಳಿಸಿದ ಶಾಸಕರಲ್ಲೇ ಭಿನ್ನಮತ ಸ್ಫೋಟ..?
ಇದು ಬಿಎಸ್‌ವೈಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೆಲ್ಲದರ ಮಧ್ಯೆ ಯಡಿಯೂರಪ್ಪ ಇಂದು (ಭಾನುವಾರ) ಓರ್ವ ನೂತನ ಶಾಸಕನಿಗೆ ಸಚಿವ ಸ್ಥಾನ ಖಚಿತಪಡಿಸಿದ್ದಾರೆ.
ಭಾನುವಾರ ಸಿಎಂ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಇದರಲ್ಲಿ ಚಿಕ್ಕಬಳ್ಳಾಪುರ ನೂತನ ಡಾ.ಕೆ.ಸುಧಾಕರ್ ಅವರು ಉಪಸ್ಥಿತರಿದ್ದರು.
ಈ ವೇಳೆ ಮುಂದಿನ ಸಚಿವರಾದ ಸುಧಾಕರ್ ಎಂದು ಸಿಎಂ ಭಾಷಣ ಆರಂಭಿಸಿದರು. ಈ ಮೂಲಕ ಸುಧಾಕರ್‌ಗೆ ಸಚಿವ ಸ್ಥಾನ ಸಿಗುವುದನ್ನು ಖಚಿತಪಡಿಸಿದರು.
ಮುಂದಿನ ಸಚಿವ ಸುಧಾಕರ್ ಎನ್ನುತ್ತಿದ್ದಂತೆಯೇ ಶಾಸಕ ಡಾ.ಸುಧಾಕರ್ ನಗು ಬೀರಿದರು. ಒಟ್ಟಿನಲ್ಲಿ ಸುಧಾಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ಯಡಿಯೂರಪ್ಪ ಖಚಿತಪಡಿಸಿದಂತಾಗಿದೆ.
ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.