'ಮಾಜಿ ಸಿಎಂಗೆ ಬೇಕಾದ ಭದ್ರತೆ ಎಚ್‌ಡಿಕೆಗೆ ಇದೆ, ಬೆದರಿಕೆ ಇದ್ರೆ ದೂರು ನೀಡಲಿ'

By Kannadaprabha NewsFirst Published Jan 26, 2020, 9:58 AM IST
Highlights

ಮಾಜಿ ಸಿಎಂಗೆ ಬೇಕಾದ ಭದ್ರತೆ ಎಚ್‌ಡಿಕೆಗೆ ಇದೆ| ಅಶ್ವತ್ಥನಾರಾಯಣ, ಬೊಮ್ಮಾಯಿ ಸಿಡಿಮಿಡಿ| ಬೆದರಿಕೆ ಇದ್ರೆ ದೂರು ನೀಡಲಿ, ಆರೋಪ ಬೇಡ| ಬಿಜೆಪಿ ಕಾರ‍್ಯಕರ್ತರು ಜೀವ ಬೆದರಿಕೆ ಹಾಕುವುದಿಲ್ಲ| ಅದೇನಿದ್ದರೂ ಬೇರೆ ಪಕ್ಷದ ಕಾರ‍್ಯಕರ್ತರಿಗೆ ಬಿಟ್ಟದ್ದು| ಎಚ್‌ಡಿಕೆ ಒಕ್ಕಲಿಗರ ಹೆಸರು ಬಳಸುತ್ತಿರುವುದು ತಪ್ಪು

ಬೆಂಗಳೂರು[ಜ.26]: ಜೀವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಜೀವ ಬೆದರಿಕೆ ಇದ್ದರೆ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಹಾಗೂ ಮತ್ತಷ್ಟುಹೆಚ್ಚಿನ ಭದ್ರತೆ ಒದಗಿಸಲಾಗುವುದು. ಆದರೆ, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಟೀಕಾ ಪ್ರಹಾರ ನಡೆಸಿದ್ದಾರೆ. ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮತ್ತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಪ್ರತ್ಯೇಕವಾಗಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಿಗೆ ಯಾವ ಭದ್ರತೆ ಕೊಡಬೇಕೋ ಅದೇ ಭದ್ರತೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ. ಜೀವ ಬೆದರಿಕೆ ಬಗ್ಗೆ ಮಾಹಿತಿ ನೀಡಿದರೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ!

ಜೀವ ಬೆದರಿಕೆ ಇದೆ ಎಂದಿರುವ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆದರಿಕೆ ವಿಚಾರವನ್ನು ರಾಜಕೀಯವಾಗಿ ನೋಡದೆ ಗಂಭೀರವಾಗಿ ಪರಿಗಣಿಸಲಾಗುವುದು. ಆದರೆ, ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದ ವೇಳೆ ಎಷ್ಟುಭದ್ರತೆ ನೀಡಲಾಗಿತ್ತೋ ಅಷ್ಟೇ ಭದ್ರತೆಯನ್ನು ಕುಮಾರಸ್ವಾಮಿ ಅವರಿಗೂ ನೀಡಲಾಗಿದೆ. ಗೃಹ ಸಚಿವನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

ಒಕ್ಕಲಿಗರ ಹೆಸರು ದುರ್ಬಳಕೆ:

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಜೀವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಬಿಜೆಪಿ ಕಾರ್ಯಕರ್ತರು ಯಾರಿಗೂ ಜೀವ ಬೆದರಿಕೆ ಹಾಕುವವರಲ್ಲ. ಅದೇನಿದ್ದರೂ ಬೇರೆ ಪಕ್ಷದವರಿಗೆ ಬಿಟ್ಟಿದ್ದು. ಆದರೆ, ಜೀವ ಬೆದರಿಕೆ ಪತ್ರ ಸಂಬಂಧ ದೊಡ್ಡ ಹುದ್ದೆ ಅಲಂಕರಿಸಿದವರು ಒಕ್ಕಲಿಗ ಸಮುದಾಯದ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಮಾತ್ರ ಖಂಡನೀಯ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರಿಗೆ ಜೀವ ಬೆದರಿಕೆ ಇದ್ದರೆ ಅವರಿಗೆ ಸಂಪೂರ್ಣ ರಕ್ಷಣೆ ನೀಡಲು ಸರ್ಕಾರ ಮತ್ತು ಗೃಹ ಇಲಾಖೆ ಸಿದ್ಧವಿದೆ. ಬೆದರಿಕೆ ಇರುವ ಬಗ್ಗೆ ಪೊಲೀಸ್‌ ಇಲಾಖೆಗೆ ತಿಳಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜಾತಿ ಒಡೆಯುವ, ಸಮಾಜ ಒಡೆಯುವ, ಜಾತಿ-ಜಾತಿಗಳ ನಡುವೆ ವೈಷಮ್ಯ ಮೂಡಿಸುವ ಕೆಲಸಕ್ಕೆ ಕುಮಾರಸ್ವಾಮಿ ಕೈ ಹಾಕಬಾರದು. ಬಿಜೆಪಿಯ ಯಾವ ವ್ಯಕ್ತಿಯಿಂದ ಯಾವ ರೀತಿ ಬೆದರಿಕೆ ಬಂದಿದೆ ಎಂದು ಹೇಳಿಲ್ಲ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರಕ್ಕೆ ಎಚ್‌ಡಿಕೆ ಖಡಕ್ ಮಾತು...!

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸಹ ಕುಮಾರಸ್ವಾಮಿ ರೀತಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಶಿವಕುಮಾರ್‌ ಅವರಂತಹ ಹಿರಿಯರು ಮತ್ತು ಅನುಭವಿ ರಾಜಕೀಯ ವ್ಯಕ್ತಿಗಳು ಸಮಾಜ ಕಟ್ಟುವುದನ್ನು ಬಿಟ್ಟು, ಜಾತಿಗಳನ್ನು ಎತ್ತಿಕಟ್ಟಿ, ಜಾತಿಗಳ ನಡುವೆ ವೈಮನಸ್ಯ ಮೂಡಿಸಲು ಹೊರಟಿರುವುದು ನಿಜ

click me!