ಯಡಿಯೂರಪ್ಪ ಕರ್ನಾಟಕದ ಮೋದಿ ಇದ್ದಂತೆ: ಶ್ರೀರಾಮುಲು

By Kannadaprabha News  |  First Published Mar 3, 2024, 8:07 AM IST

ರಾಷ್ಟ್ರಕ್ಕೆ ನರೇಂದ್ರ ಮೋದಿಯಾದರೆ ರಾಜ್ಯದಲ್ಲಿ ಇನ್ನೊಬ್ಬ ಮೋದಿಯಾಗಿ ಯಡಿಯೂರಪ್ಪ ಇದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ ಯಡಿಯೂರಪ್ಪ ನೇತೖತ್ವದಲ್ಲಿ ಗೆಲ್ಲಲಿದೆ ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.


ಕೂಡ್ಲಿಗಿ (ಮಾ.3): ರಾಷ್ಟ್ರಕ್ಕೆ ನರೇಂದ್ರ ಮೋದಿಯಾದರೆ ರಾಜ್ಯದಲ್ಲಿ ಇನ್ನೊಬ್ಬ ಮೋದಿಯಾಗಿ ಯಡಿಯೂರಪ್ಪ ಇದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ ಯಡಿಯೂರಪ್ಪ ನೇತೖತ್ವದಲ್ಲಿ ಗೆಲ್ಲಲಿದೆ ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಔತಣಕೂಟದಲ್ಲಿ ಅವರು ಮಾತನಾಡಿದರು. ದೇಶ ಇಂದು ವಿಶ್ವದಲ್ಲಿ ಗುರುತಿಸಿಕೊಳ್ಳುವುದಕ್ಕೆ ನರೇಂದ್ರ ಮೋದಿ ಕಾರಣ. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಮುಂದಿನ ದಿನಗಳಲ್ಲಿ ಅಮೆರಿಕಾ, ರಷ್ಯಾ, ಜಪಾನ್‌ನಂತಹ ದೇಶಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದರು.

Latest Videos

undefined

 

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್; 4 ಬಾರಿ ಸಮನ್ಸ್ ನೀಡಿದ್ರೂ ಹಾಜರಾಗದ ಶ್ರೀರಾಮುಗೆ ಕೋರ್ಟ್ ತರಾಟೆ!

ಶ್ರೀಕೃಷ್ಣನಂತೆ ಯಡಿಯೂರಪ್ಪ ಅವರು ನಿಂತು ವಿಜಯೇಂದ್ರ ಅವರಿಗೆ ಅರ್ಜುನನಂತೆ ಶಕ್ತಿ ತುಂಬಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಲಿದ್ದೇವೆ. ನಾವೆಲ್ಲ ನಿಮ್ಮ ಜತೆ ನಾವಿದ್ದೇವೆ ಎಂದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಹೇಳಿದ್ದು, ನನ್ನ ಆತ್ಮಬಲ ಹೆಚ್ಚಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 10 ವರ್ಷಗಳ ಆಡಳಿತಾವಧಿಯಲ್ಲಿ ಉಜ್ವಲ, ಕಿಸಾನ್ ಸಮ್ಮಾನ್ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಉತ್ತಮ ಆಡಳಿತಗಾರರಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರಲ್ಲದೆ, ಚಿತ್ರದುರ್ಗ - ಹೊಸಪೇಟೆ, ಬಳ್ಳಾರಿ -ಹಿರಿಯೂರು ಸೇರಿ ನಾನಾ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿರುವುದನ್ನು ಯಾರೂ ಮರೆಯುವಂತಿಲ್ಲ ಎಂದರು.

ಮೋದಿ ಹಾಗೂ ಶ್ರೀರಾಮನ ಕೈಯಲ್ಲಿ ಸಿಕ್ಕು 'ಇಂಡಿಯಾ ಒಕ್ಕೂಟ' ಚಿಂದಿ ಚಿತ್ರಾನ್ನ ಆಗೋಗಿದೆ: ಶ್ರೀರಾಮುಲು ವ್ಯಂಗ್ಯ

ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬಣವಿಕಲ್ಲು ಕಾಮಶೆಟ್ಟಿ ನಾಗರಾಜ, ಮುಖಂಡರಾದ ರಾಮದುರ್ಗ ಸೂರ್ಯಪಾಪಣ್ಣ, ಗುಳಿಗಿ ವೀರೇಂದ್ರ, ಹುರುಳಿಹಾಳ್ ರೇವಣ್ಣ, ಮೊರಬ ಶಿವಣ್ಣ, ಬಿ. ಭೀಮೇಶ್, , ರೇಖಾ ಮಲ್ಲಿಕಾರ್ಜುನ, ಹುಲಿಕೆರೆ ಗೀತಾ, ಕೋಲಮ್ಮನಹಳ್ಳಿ ಭೀಮಣ್ಣ, ಕೆ. ಚನ್ನಪ್ಪ, ಕೊಲುಮೆಹಟ್ಟಿ ವೆಂಕಟೇಶ್, ಯಜಮಾನಪ್ಪ, ಸೂಲದಹಳ್ಳಿ ಮಾರೇಶ್ ಇತರರಿದ್ದರು. ತಾಲೂಕಿನ 2 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು, ಮುಖಂಡರು, ಜನತೆ ಭಾಗವಹಿಸಿದ್ದರು.

click me!