ನಮ್ ಗೌಡ್ರು ಮೋದಿ ಪ್ರಧಾನಿಯಾದ್ರೆ ದೇಶ ಬಿಟ್ಟು ಹೋಗ್ತೇನೆ ಅಂದಿದ್ರು, ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರ: ಡಿಕೆ ಶಿವಕುಮಾರ

By Kannadaprabha News  |  First Published Mar 3, 2024, 6:37 AM IST

ಜೆಡಿಎಸ್ ಎಲ್ಲಿದೆ?. ಆ ಪಕ್ಷದ ಪರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಏನಾದರೂ ಮಾತನಾಡುತ್ತಿದ್ದಾರಾ?. ಕುಮಾರಸ್ವಾಮಿ ಮಾತನಾಡುತ್ತಿರೋದು ಬಿಜೆಪಿ ಪರವಾಗಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.


ಚನ್ನಪಟ್ಟಣ (ಮಾ.3): ಜೆಡಿಎಸ್ ಎಲ್ಲಿದೆ?. ಆ ಪಕ್ಷದ ಪರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಏನಾದರೂ ಮಾತನಾಡುತ್ತಿದ್ದಾರಾ?. ಕುಮಾರಸ್ವಾಮಿ ಮಾತನಾಡುತ್ತಿರೋದು ಬಿಜೆಪಿ ಪರವಾಗಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಯಾವತ್ತಾದರೂ ಒಂದು ದಿನ ಜೆಡಿಎಸ್ ಪರ ಕುಮಾರಸ್ವಾಮಿ ಮಾತನಾಡಿದ್ದಾರಾ?. ಜೆಡಿಎಸ್ ಕೈ ಬಲಪಡಿಸಿ ಅಂತ ಏನಾದರೂ ಹೇಳಿದ್ದಾರಾ?. ಜೆಡಿಎಸ್ ಹೋಯ್ತು, ತೆನೆ ಬಿಸಾಕಿದ್ದಾಯ್ತು ಎಂದರು.

Tap to resize

Latest Videos

 

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಉಗ್ರ ಚಟುವಟಿಕೆ ಹೆಚ್ಚಳ -ಈಶ್ವರಪ್ಪ

ನಮ್ ಗೌಡರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟುಹೋಗುತ್ತೇನೆ ಅಂದಿದ್ದರು. ಅವರ ಪಕ್ಷ ಏನಾಗುತ್ತೆ ಅಂತ ಕುಮಾರಸ್ವಾಮಿ ಯೋಚನೆ ಮಾಡಬೇಕು. ಪಾಪ ನಮ್ಮ ಗೌಡರು ಕಷ್ಟಪಟ್ಟು ಕಟ್ಟಿದ ಪಕ್ಷಕ್ಕೆ ಇಂಥ ಪರಿಸ್ಥಿತಿ ಬಂತಲ್ಲ ಅಂತ ನನಗೂ ನೋವಿದೆ ಎಂದರು.

click me!