ಪಾಲಿಕೆ ಈ ಆಯುಕ್ತರು ನನ್ನ ಮಾತುಕೇಳಬೇಕು. ಅವರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಣ್ಣ ತಪ್ಪನ್ನು ಪಾಟೀಲ ದೊಡ್ಡದಾಗಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನಾವಶ್ಯಕವಾಗಿ ತೌಡು ಕುಟ್ಟುವ ಕೆಲಸ ಮಾಡಿದ್ದಾರೆ. ತೆರಿಗೆ ಪರಿಷ್ಕರಣೆ ಪ್ರಕರಣದ ಕುರಿತು ತನಿಖೆಯಾಗಬೇಕು. ಈ ಕಡತಕ್ಕೆ ಮೇಯರ್ ಸಹಿಯೂ ಇದೆಯೋ? ಇಲ್ಲವೋ? ಎನ್ನುವುದು ಸಿಓಡಿ ಇಲ್ಲವೇ ಸಿಐಡಿ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ ಎಂದು ಹೇಳಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ(ಅ.22): ತೆರಿಗೆ ಪರಿಷ್ಕರಣೆ ವಿಚಾರ ಸಂಬಂಧ ಪಾಲಿಕೆ ಆಯುಕ್ತರನ್ನು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಬ್ಲಾಕ್‌ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ಪಾಲಿಕೆ ಸಾಮಾನ್ಯಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆ ಕಡತದಲ್ಲಿ ಸಣ್ಣ ತಪ್ಪಾಗಿದೆ. ತೆರಿಗೆ ಪರಿಷ್ಕರಣೆ ಸಂಬಂಧ ಹಿಂದಿನ ಸರ್ಕಾರ ಪಾಲಿಕೆಗೆ ಪತ್ರ ಬರೆದಿತ್ತು. ಮೂರು ವರ್ಷದಿಂದ ಈ ಪ್ರಕ್ರಿಯೆ ನಡೆದಿತ್ತು. ಆದರೆ, ಪಾಲಿಕೆ ಸಾಮಾನ್ಯಸಭೆಯಲ್ಲಿ ತೆರಿಗೆ ಪರಿಷ್ಕರಣೆ ಸಂಬಂಧ ಠರಾವು ಮಾಡಲಾಗಿತ್ತು. ಆದರೆ, ಅದನ್ನು ಬೆಂಗಳೂರಿಗೆ ಬೇರೆ ದಿನಾಂಕಕ್ಕೆ ಕಳುಹಿಸಲಾಗಿತ್ತು. ಸಣ್ಣ ವಿಚಾರವನ್ನೇ ಶಾಸಕ ಅಭಯ ಪಾಟೀಲ ದೊಡ್ಡದ್ದಾಗಿ ಮಾಡಿದ್ದಾರೆ.
ಬೆಳಗಾವಿ: ಮಹಿಳೆಯನ್ನು ಹತ್ಯೆ ಮಾಡಿ ಕಾಣೆಯಾದ ಕಥೆ ಕಟ್ಟಿ ಸಿಕ್ಕಿ ಬಿದ್ದ ಕೊಲೆಗಡುಕರು
ಇದರಲ್ಲಿ ಭ್ರಷ್ಟಾಚಾರವಲ್ಲ, ಕಳುವಿನ ಆರೋಪವಲ್ಲ, ದುರುಪಯೋಗವಲ್ಲ. ಮೇಯರ್ ನೇತೃತ್ವದಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ. ಇದರಿಂದ ಹಿಂದೆ ಇದೇ ಅಭಯ ಪಾಟೀಲರ ಕೈವಾಡವಿದೆ ಎಂದು ಆರೋಪಿಸಿದರು.
ಪಾಲಿಕೆ ಈ ಆಯುಕ್ತರು ನನ್ನ ಮಾತುಕೇಳಬೇಕು. ಅವರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಣ್ಣ ತಪ್ಪನ್ನು ಪಾಟೀಲ ದೊಡ್ಡದಾಗಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನಾವಶ್ಯಕವಾಗಿ ತೌಡು ಕುಟ್ಟುವ ಕೆಲಸ ಮಾಡಿದ್ದಾರೆ. ತೆರಿಗೆ ಪರಿಷ್ಕರಣೆ ಪ್ರಕರಣದ ಕುರಿತು ತನಿಖೆಯಾಗಬೇಕು. ಈ ಕಡತಕ್ಕೆ ಮೇಯರ್ ಸಹಿಯೂ ಇದೆಯೋ? ಇಲ್ಲವೋ? ಎನ್ನುವುದು ಸಿಓಡಿ ಇಲ್ಲವೇ ಸಿಐಡಿ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ ಎಂದು ಹೇಳಿದರು.
ಯುಪಿಎಸ್‌ಸಿಗೆ ಪತ್ರ ಬರೆದರೆ, ಪಾಲಿಕೆ ಸೂಪರ್‌ಸೀಡ್
ತೆರಿಗೆ ಪರಿಷ್ಕರಣೆ ವಿಚಾರ ಸಂಬಂಧ ಪಾಲಿಕೆ ಆಯುಕ್ತರ ವಿರುದ್ಧ ಶಾಸಕ ಅಭಯ ಪಾಟೀಲ ಅವರು ಯುಪಿಎಸ್‌ಸಿ ಸೇರಿದಂತೆ ಮೂರ್ನಾಲ್ಕು ಏಜೆನ್ಸಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಯುಪಿಎಸ್‌ಗೆ ಪತ್ರ ಬರೆದರೆ, ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲಾಗುವುದು ಎಂದು ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.
ಪಾಲಿಕೆ ಆಯುಕ್ತರಿಗೆ ಐಎಎಸ್‌ಗೆ ಮುಂಬಡ್ತಿ ಸಿಗಲಿದೆ. ಅವರ ವಿರುದ್ಧ ಯುಪಿಎಸ್‌ಸಿಗೆ ನಮಗೆ ದೂರು ನೀಡಲು ಅಧಿಕಾರ ಇಲ್ಲ. ನಾವು ಏನೇ ಇದ್ದರೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಬಹುದು. ಆಯುಕ್ತರನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ವಿರುದ್ಧ ಕಿಡಿಕಾರಿದರು.
ಈ ಹಿಂದೆಯೂ ಬಹಳಷ್ಟು ದಬ್ಬಾಳಿಕೆಯನ್ನೂ ಅಭಯ ಪಾಟೀಲ ಮಾಡಿದ್ದಾರೆ. ಸ್ಮಾರ್ಟಸಿಟಿ ಕಂಬ ನಿತ್ಯ ಕಣ್ಣೀರು ಹಾಕುತ್ತಿದೆ. ಭಾರ ತಾಳಲಾರದೇ ಅಭಯ ಪಾಟೀಲ ಕೃಪೆಯಿಂದ ನಿತ್ಯ ಟೈಲ್ಸ್‌ಗಳು ಅಳುತ್ತಿವೆ. ಇದು ಬ್ಲಾಕ್ ಮೇಲ್ ತಂತ್ರ. ಈ ಹಿಂದೆ ಅಂದಾಜು ಕಮೀಟಿಯಲ್ಲಿದ್ದಾಗ, ಅವರ ಮನೆಗೆ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಅಭಯ ಪಾಟೀಲರ ಬ್ಲಾಕ್ ಮೇಲ್ ಮಾಡುವ ತಂತ್ರ ಹೊಸದೇನಲ್ಲ. ಮೇಯರ್ ಶೋಭಾ ಸೋಮನಾಚೆ ಶಾಸಕ ಅಭಯ ಪಾಟೀಲರ ಕೈಗೊಂಬೆಯಾಗಿದ್ದಾರೆ. ತೆರಿಗೆ ಪರಿಷ್ಕರಣೆ ಮೂಲ ಕಡತವೇ ಇಲ್ಲ. ಅದನ್ನು ಕೂಡ ಪಾಟೀಲ ಅವರೇ ತಮ್ಮ ಮನೆಯಲ್ಲಿ ಇಟ್ಟುಕೊಂಡಬೇಕು. ಇದನ್ನು ಕೂಡ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ
ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ 138 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜೈಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಗೆ ಇದೇ ಅಭಯ ಪಾಟೀಲರೇ ಅನುಮತಿ ಕೊಡಿಸಿದ್ದಾರೆ. ಇಡೀ ಜಗತ್ತಿನಲ್ಲೇ ಈ ರೀತಿ ಎಲ್ಲಿಯೂ ಆಗಲಿಕ್ಕಿಲ್ಲ. ಮೊದಲು ಇದಕ್ಕೆ ವಿರೋಧ ಮಾಡಿ, ಬಳಿಕ ಪಾಲಿಕೆ ಸಾಮಾನ್ಯಸಭೆಯಲ್ಲಿ ಅವರೇ ಅನುಮತಿ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಸ್ಮಾರ್ಟಸಿಟಿ ಕಾಮಗಾರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅನಧಿಕೃತವಾಗಿ ನಿವೇಶನ ಹಂಚಿಕೆ, ಕಾವು ಕಟ್ಟಾ ಹೀಗೆ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲಾಗುವುದು. ಈಗಾಗಲೇ ಸ್ಮಾರ್ಟಸಿಟಿ ಕಾಮಗಾರಿ ತನಿಖೆಗೆ ಕಮೀಟಿ ನೇಮಕವಾಗಿದೆ.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಸೇರಿ ಎಲ್ಲರನ್ನೂ ಹೊಂದಾಣಿಕೆಯಾಗಬಹುದು. ಆದರೆ, ಅಭಯ ಪಾಟೀಲ ಬಹಳ ಅಹಂಕಾರಿ ಮನುಷ್ಯ. ಇವನಿಗೆ ಶ್ರೀಮಂತಿಕೆ ಬಂದಂತೆ ಮಾಡುತ್ತಾನೆ ಎಂದು ಕಿಡಿಕಾರಿದರು.