ಅಖಾಡಕ್ಕಿಳಿದ ಬಿಎಲ್ ಸಂತೋಷ್, ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ..?

By Suvarna News  |  First Published Aug 23, 2020, 4:33 PM IST

ರಾಜ್ಯ ಬಿಜೆಪಿ ಘಟಕದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಕಳೆದ ಮೂರು ದಿನಗಳಿಂದ ಬಿಜೆಪಿಯಲ್ಲಿ ನಾಯಕರ ಭೇಟಿ, ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ.


ಬೆಂಗಳೂರು, (ಆ.23): ಕರ್ನಾಟಕ ಬಿಜೆಪಿಯಲ್ಲಿ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ. ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ  ರಚನೆಯಾದ ನಂತರ ಪಕ್ಷದಲ್ಲಿ ರಾಜಕೀಯ ಗರಿಗೆದರಿದೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಖಾಡಕ್ಕಿಳಿದಿದ್ದು, ಕಳೆದ ಮೂರು ದಿನಗಳಿಂದ ಹಲವು ನಾಯಕರ ಜತೆ ಸರಣೆ ಸಭೆ ನಡೆಸುತ್ತಿದ್ದು, ಇದು ಪಕ್ಷದಲ್ಲಿ ಹಲವು ಚರ್ಚೆಗಳಿಗೆ ಹುಟ್ಟು ಹಾಕಿದೆ.

Tap to resize

Latest Videos

ಇಂದು (ಭಾನುವಾರ) ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ  ಹಿರಿಯ ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಹಲವು ಮಹತ್ವದ ಚರ್ಚೆಗಳನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕುತೂಹಲ ಕೆರಳಿಸಿದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ

ನಿನ್ನೆ (ಶನಿವಾರ) ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಜತೆಗೂಡಿ ಸಂತೋಷ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರ ಜೊತೆ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

 ವರಿಷ್ಠರ ಸೂಚನೆಯಂತೆ  ಸಂತೋಷ್ ಅವರು ಬಿಜೆಪಿ ನಾಯಕ ಸಭೆ ಮೇಲೆ ಸಭೆ ನಡೆಸುತ್ತಿದ್ದು, ನಾಯಕತ್ವ ಬದಲಾವಣೆಯ ಸೂಚನೆಯ ಎನ್ನುವ ಮಾತುಗಳು ಕೇಳಿಬರುತ್ತಿವೆ.

2023ರ ಚುನಾವಣೆಗೆ ಪಕ್ಷ ಈಗಿನಿಂದಲೇ ಸಿದ್ಧತೆ ನಡೆದಿದೆಯೋ ಅಥವಾ ನಾಯಕತ್ವದ ಬದಲಾವಣೆ ಮಾಡಲು ನಾಯಕ ಅಭಿಪ್ರಾಯ ಸಂಗ್ರಹ ಕಾರ್ಯ ನಡೆದಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ಬಿಲ್‌ ಸಂತೋಷ್ ಅವರ ಸದ್ಯದ ನಡೆ ರಾಜ್ಯ ಬಿಜೆಪಿಯಲ್ಲಿ ಭಾರೀ ಕುತೂಹಲ ಮೂಡಿಸಿದೆ.

"

click me!