ಮೂಡಿಗೆರೆ ಬಿಜೆಪಿಯಲ್ಲಿ ಬಂಡಾಯ: ಎಂಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಒತ್ತಾಯ

By Ravi JanekalFirst Published Mar 16, 2023, 3:31 PM IST
Highlights

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹಾಲಿ ಶಾಸಕರ ವಿರುದ್ಧ ರೆಬಲ್ ಆಗಿ ಪ್ರತ್ಯೇಕ ಬಂಡಾಯದ ಸಭೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.16) : ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. 120 ಪ್ಲಸ್ ಸೀಟು ಗೆಲ್ಲುವ ಗುರಿಯಿರುವ ಬಿಜೆಪಿ ಶತಯಾಗತಾಯ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹಾಲಿ ಶಾಸಕರ ವಿರುದ್ಧ ರೆಬಲ್ ಆಗಿ ಪ್ರತ್ಯೇಕ ಬಂಡಾಯದ ಸಭೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಕುಮಾರಸ್ವಾಮಿ ಹಠಾವೋ, ಬಿಜೆಪಿ ಬಚಾವೋ ಎನ್ನುವ ಘೋಷಣೆ 

ಮೂಡಿಗೆರೆ ಪಟ್ಟಣದ ಪ್ರೀತಂ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುತ್ತಿರೋ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ಎಂ.ಪಿ.ಕುಮಾರಸ್ವಾಮಿ(BJP MLA MP Kumaraswamy)ಗೆ ಟಿಕೆಟ್ ಬೇಡವೇ ಬೇಡ ಅಂತ ಬಹಿರಂಗ ಸಭೆ ನಡೆಸುತ್ತಿದ್ದಾರೆ. ಅವರು ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬೂತ್ ಕಮಿಟಿ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಹೋದಾಗಲು ನೀವು ಯಾರು ಎಂದು ಕೇಳುತ್ತಾರೆ. ಚುನಾವಣೆ ಸಮಯದಲ್ಲಿ ಹಣಕಾಸಿನ ನೆರವು ನೀಡಿದವರನ್ನೂ ನೀವು ಯಾರು ಎಂದು ಕೇಳುತ್ತಾರೆ.

Bengaluru-Mysuru expressway: ಈಗಾಗ್ಲೆ ಕಿತ್ತೋಗಿದೆ ; ಇದು 40 % ಅಲ್ಲ, 60 % : ಬಿಕೆ ಹರಿಪ್ರಸಾದ್

ಅವರು ಶಾಸಕರಾದರೆ ಬರೀ ಗುಂಪುಗಾರಿಕೆ ಮಾಡುತ್ತಾರೆ. ಕಳೆದ ಎಲೆಕ್ಷನ್‍ನಲ್ಲಿ ಇನ್ಮುಂದೆ ಹಾಗೇ ಮಾಡುವುದಿಲ್ಲ ಎಂದು ಹೇಳಿ ಗೆದ್ದು ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಈ ಬಾರಿ ಅವರಿಗೆ ಟಿಕೆಟ್ ಬೇಡವೇ ಬೇಡ ಎಂದು 1000 ಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ ಹಠಾವೋ, ಬಿಜೆಪಿ ಬಚಾವೋ ಎಂದು ಸಭೆ ನಡೆಸುತ್ತಿದ್ದಾರೆ. 

ಇಂದು ಮಧ್ಯಾಹ್ನ ಮೂಡಿಗೆರೆ ಆಗಮಿಸಲಿರುವ ವಿಜಯ ಸಂಕಲ್ಪ ಯಾತ್ರೆ(BJP Vijayasankalpa yatre) ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yadiyurappa)ನವರ ಎದುರೇ ಸಾವಿರಾರು ಕಾರ್ಯಕರ್ತರು ಅವರಿಗೆ ಟಿಕೆಟ್ ಬೇಡ. ಅವರಿಗೆ ಕೊಟ್ಟರೆ ನಮ್ಮ ದಾರಿ ನಮಗೆ ಎಂದು ಹೇಳಲು ಸಿದ್ಧರಾಗಿದ್ದಾರೆ. ಆದರೆ, ಇಂದು ಬಿಜೆಪಿಯ ಆಂತರಿಕೆ ಬೇಗುದಿ ನಡು ರಸ್ತೆಯಲ್ಲಿ ಸ್ಫೋಟಗಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ಕಾಂಗ್ರೆಸ್‌ನದ್ದು ಗ್ಯಾರೆಂಟಿ ಕಾರ್ಡ್ ಅಲ್ಲ; ಜಸ್ಟ್ ವಿಸಿಟಿಂಗ್ ಕಾರ್ಡ್: ಸಿಎಂ ಲೇವಡಿ

click me!