ಸಮಾವೇಶಕ್ಕೆ ರಾಜ್ಯಾದ್ಯಂತ 4 ಸಾವಿರ ಬಸ್ಸುಗಳು, 20 ಸಾವಿರ ನಾಲ್ಕು ಚಕ್ರ ವಾಹನಗಳಲ್ಲಿ 5 ಲಕ್ಷದಷ್ಟು ಜನ ಓಬಿಸಿ ಸಮಾವೇಶಕ್ಕೆ ಹರಿದು ಬರುವ ನಿರೀಕ್ಷೆ
ಕಲಬುರಗಿ(ಅ.29): ಸಮಾಜದಲ್ಲಿರುವ ಇತರೆ ಹಿಂದುಳಿದ ವರ್ಗದವರನ್ನು ತನ್ನತ್ತ ಸೆಳೆಲು ಹಾಗೂ ಅವರಿಗಾಗಿ ತೈನು ಹೊಂದಿರುವ ಯೋಜನೆಗಳ ಮಾಹಿತಿ ನೀಡುವ ಉದ್ದೇಶದೊಂದಿಗೆ ವಿಧಾನ ಸಭೆ ಚುನಾವಣೆಯ ಹೊಸ್ತಿಲಲ್ಲೇ ಕೇಸರಿ ಪಡೆ ಅ.30 ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶಕ್ಕೆ ಭರದ ಸಿದ್ಧತೆಯಲ್ಲಿದೆ.
ಸಮಾವೇಶಕ್ಕೆ ಆಹ್ವಾನಿಸಲು ಈಗಾಗಲೇ ಮಾಜಿ ಸಚಿವ ಈಶ್ವರಪ್ಪ, ನೆಲ ನರೇಂದ್ರಬಾಬೂ, ಮಾಲೀಕಯ್ಯಾ ಗುತ್ತೇದಾರ್ ಸೇರಿದಂತೆ ಮುಖಂಡರ 8 ತಂಡಗಳು ರಾಜ್ಯಾದ್ಯಂತ ಪಕ್ಷ ಸಂಘಟನೆಯ 39 ಜಿಲ್ಲೆಗಳಲ್ಲಿ ಸಂಚರಿಸುವ ಮೂಲಕ ಕಲಬುಗಿಗೆ ಬರುವಂತೆ ಎಲ್ಲರನ್ನು ಕೋರಿದ್ದಾರೆ. ಹೀಗಾಗಿ ಸಮಾವೇಶಕ್ಕೆ ರಾಜ್ಯಾದ್ಯಂತ 4 ಸಾವಿರ ಬಸ್ಸುಗಳು, 20 ಸಾವಿರ ನಾಲ್ಕು ಚಕ್ರ ವಾಹನಗಳಲ್ಲಿ 5 ಲಕ್ಷದಷ್ಟು ಜನ ಕಲಬುರಗಿ ಓಬಿಸಿ ಸಮಾವೇಶಕ್ಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಬಿಜೆಪಿ ವಕ್ತಾರ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನರೇಂದ್ರ ಬಾಬೂ ಹೇಳಿದ್ದಾರೆ.
ರಾಗಾ ಗಮನ ಸೆಳೆದ ಕಲಬುರಗಿ ಕೈ ಮುಖಂಡರು
ಕಲಬುರಗಿ ಹೊರ ವಲಯ ನಾಗನಹಲ್ಳಿ ಪೊಲೀಸ್ ತರಬೇತಿ ಶಾಲೆ ಪಕ್ಕದಲ್ಲಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿಯವರಿಗೆ ಸೇರಿರುವ 100 ಎಕರೆ ವಿಶಾಲ ಭೂಪ್ರದೇಶದಲ್ಲಿ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇಲ್ಲೇ ಸುದ್ದಿಗೋಷ್ಠಿ ನಡೆಸಿದ ಇವರು ಕಲಬುರಗಿ ವಿಭಾಗದಿದಂಲೇ 2. 50 ಲಕ್ಷ ಜನ ಪಾಲ್ಗೊಳ್ಳುತ್ತಿದ್ದಾರೆ. ಇನ್ನುಳಿದಂತೆ ರಾಜ್ಯಾದ್ಯಂತ 224 ಕ್ಷೇತ್ರಗಳಿಂದ 3 ಲಕ್ಷದಷ್ಟುಜನ ಪಾಲ್ಗೊಳ್ಳುತ್ತಿದ್ದಾರೆ. 200 ಕ್ಕೂ ಹೆಚ್ಚು ಜಾತಿ ಸಮುದಾಯದವರು ಆಗಮಿಸುತ್ತಿದ್ದಾರೆಂದರು.
ರಾಜ್ಯದ ಸಿಎಂ ಬಸವರಾಜ ಬೊಮ್ಮಾ.ಇ, ಮಾಜಿ ಸಿಎಂ ಯಡ್ಯೂರಪ್ಪ, ಕೇಂರ್ದದಲ್ಲಿ ರಾಜ್ಯದ ಸಚಿವರಾಗಿರುವ ಎಲ್ಲರು ಪಾಲ್ಗೊಳ್ಳುತ್ತಿರುವ ಈ ಸಮ್ಮೇಳನದಲ್ಲಿ ಓಬಿಸಿ ಮೋರ್ಚಾ ರಾಷ್ಟ್ರೀಯ ನಾಯಕ ಡಾ. ಲಕ್ಷಣ ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ. ಇವರೆಲ್ಲರಿಗೂ 1 ಸಾವಿರ ಹೋಟಲ್ ಕೋಣೆ ಕಾಯ್ದಿರಿಸಲಾಗಿದೆ. ಕಾರ್ಯಕತರಿಗೆ 50 ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ: ಅಲ್ಲಂಪ್ರಭು ಪಾಟೀಲ್
ಸುದ್ದಿಗೋಷ್ಠಿಯಲ್ಲಿ ಪಕ್ಷ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್, ಶಾಸಕರಾದ ಬಸವರಾಜ ಮತ್ತಿಮಡು, ದತತಾತ್ರೇಯ ಪಾಟೀಲ್ ರೇವೂರ್, ಬಿಜಿ ಪಾಟೀಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕೋಲಿ ಸಮಾಜಕ್ಕೆ ಸಿಎಂ ಸಿಹಿ ಸುದ್ದಿ?:
ಕೋಲಿ ಸಮಾಜಕ್ಕೆ ಎಸ್ಟಿಪ್ರಮಾಣ ಪತ್ರ ನೀಡುವಂತೆ ಕೇಂದ್ರ ಆದೇಶವಿದ್ದರೂ ರಾಜ್ದಲ್ಲಿ ನೀಡುತ್ತಿಲ್ಲವೆಂದು ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದಾಗ ಸ್ಪಂದಿಸಿದ ಶಾಸಕ ರಾಜಕುಮಾರ್ ತೇಲ್ಕೂರ್, ಮಾಲೀಕಯ್ಯಾ ಗುತ್ತೇದಾರ್ ಈ ವಿಚಾರದಲ್ಲಿ ಕೆಲವು ತಾಂತ್ರಿಕ ತೊಡಕುಗಳಿದ್ದವು. ಸಿಎಂ ಅವರೇ ಈ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಾರೆ. ಸಮಾವೇಶದಲ್ಲೇ ಈ ಬಗ್ಗೆ ಅವರು ಮಾತನಾಡುತ್ತಾರೆಂದರು. ಕುರುಬ, ಗೊಂಡ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿಯೂ ಕುರುಬ ಸಮುದಾಯದ ಬೇಸರದಲ್ಲಿರುವ ಬಗ್ಗೆಯೂ ಪ್ರಶ್ನೆ ಕೇಳಿದಾಗ ನಾಯಕರು ಸಮಾವೇಶದಲ್ಲೇ ಈ ವಿಚಾರವಾಗಿಯೂ ಸಿಎಂ ಉತ್ತರಿಸಲಿದ್ದಾರೆಂದರು.