ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ: ಸಚಿವ ಅಶೋಕ್‌

By Kannadaprabha News  |  First Published Mar 18, 2023, 2:20 AM IST

ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲಿ ಜನ ಹಾಗೂ ರೈತ ಪರ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಅಲೆ ವ್ಯಾಪಕವಾಗಿದೆ. 


ಪಾವಗಡ (ಮಾ.18): ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲಿ ಜನ ಹಾಗೂ ರೈತ ಪರ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಅಲೆ ವ್ಯಾಪಕವಾಗಿದೆ. ವಿಧಾನಸಭೆ ಚುನಾವಣೆ ಬಳಿಕ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಅನೇಕ ರೀತಿಯ ಜನಪರ ಯೋಜನೆ ಅನುಷ್ಟಾನಗೊಳಿಸಿವುದಾಗಿ ಕಂದಾಯ ಸಚಿವ ಆರ್‌.ಆಶೋಕ್‌ ಹೇಳಿದರು. ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಗರದ ಶ್ರೀಶನೇಶ್ವರಸ್ವಾಮಿ ವೃತ್ತಕ್ಕೆ ಆಗಮಿಸಿದಾಗ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಹಾಗೂ ದೇಶದ ಪ್ರಗತಿ ಬಿಜೆಪಿಯಿಂದ ಸಾಧ್ಯ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅನೇಕ ರೀತಿಯ ಸಮಸ್ಯೆ ನಿವಾರಣೆಯಾಗಿದೆ. ಸಾಮಾಜಿಕ ನ್ಯಾಯ ಆದ್ಯತೆ ಮೇರೆಗೆ ಎಲ್ಲಾ ವರ್ಗದ ಜನತೆಗೆ ಸೌಲಭ್ಯ ಕಲ್ಪಿಸುತ್ತಿದ್ದು, ರಾಷ್ಟ್ರದಲ್ಲಿ ಬಿಜೆಪಿ ಅಲೆ ವ್ಯಾಪಕವಾಗಿದೆ. ಇದನ್ನು ಕಾಂಗ್ರೆಸ್‌ ಇತರೆ ಪಕ್ಷಗಳು ಸಹಿಸಲು ಸಾಧ್ಯವಾಗುತ್ತಿಲ್ಲ. 

Tap to resize

Latest Videos

ಕಾಂಗ್ರೆಸ್‌ನದ್ದು ಪುಕ್ಕಟ್ಟೆ ಕಾರ್ಡ್‌: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಲೇವಡಿ

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿ, ಕೋಟ್ಯಂತರ ರು. ವೆಚ್ಚದ ವಸತಿ ಶಾಲೆ ನಿರ್ಮಾಣ, ಗ್ರಾಮೀಣ ಜನತೆಯ ಆರೋಗ್ಯ ನಿಮಿತ್ತ 22 ಕೋಟಿ ವೆಚ್ಚದ ತಾಯಿ ಮಕ್ಕಳ ಆಸ್ಪತ್ರೆ, ಕುಡಿವ ನೀರು ಹಾಗೂ ನೀರಾವರಿ ಅನುಷ್ಠಾನಕ್ಕೆ ತುಂಗಭದ್ರಾ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿವೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಸರ್ವತೋಭಿವೃದ್ಧಿಗೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಇಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ತಾಲೂಕು ಬಿಜೆಪಿ ಹಿರಿಯ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾವಗಡ ರವಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೃಷ್ಣನಾಯಕ್‌, ಶಿವಕುಮಾರ್‌ ಸಾಕೇಲ್‌, ಕೊತ್ತೂರು ಹನುಮಂತರಾಯಪ್ಪ, ಆನೇಕಲ್‌ ಕೆ.ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮದ್ದಿಬಂಡೆ ಕೃಷ್ಣಮೂರ್ತಿ, ಕಾರ್ಯದರ್ಶಿ ಶೇಖರ್‌ಬಾಬು, ವಕ್ತಾರ ಕಡಪಲಕರೆ ನವೀನ್‌, ರಂಗಸಮುದ್ರ ಮಹಲಿಂಗಪ್ಪ, ಕೋಟೇಶ್ವರರೆಡ್ಡಿ, ಎಸ್‌ಸಿ ಘಟಕದ ರಾಮಾಂಜಿನಪ್ಪ, ರಾಜೇಂದ್ರ, ಎಸ್‌ಟಿ ಮೋರ್ಚಾ ಅಧ್ಯಕ್ಷ ಬ್ಯಾಡನೂರು ಶಿವು, ಗುಂಡಾರ್ಲಹಳ್ಳಿ ತಿಪ್ಪೇಸ್ವಾಮಿ, ಹೊಸಹಳ್ಳಿ ಪ್ರಸಾದ್‌ಬಾಬು, ಮಧುಪಾಳೇಗಾರ್‌, ಜಾಲೋಡು ಶಿವಲಿಂಗಪ್ಪ, ಓಬಳಾಪುರ ರವಿಕುಮಾರ್‌, ಮಹಿಳಾ ಘಟಕದ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಸ್ಥಳೀಯ ಸಮಿತಿಯ ಅಭಿಪ್ರಾಯ ಪರಿಗಣಿಸಿ ರಾಜ್ಯ ಹೈಕಮಾಂಡ್‌ನಿಂದ ಶೀಘ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಪಟ್ಟಿಬಿಡುಗಡೆಗೊಳಿಸಲಿದ್ದು, ಸ್ಥಳೀಯ ಹಾಗೂ ಗೆಲ್ಲುವ ಅಭ್ಯರ್ಥಿಯ ಆಯ್ಕೆಗೆ ಆದ್ಯತೆ ನೀಡಲಿದ್ದೇವೆ. ರಾಜ್ಯ ಹಾಗೂ ತಾಲೂಕಿನ ಸಮಗ್ರ ಪ್ರಗತಿಗೆ ಬಿಜೆಪಿ ಬೆಂಬಲಿಸುವ ಮೂಲಕ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ.
-ಆರ್‌. ಅಶೋಕ್‌ ಕಂದಾಯ ಸಚಿವ

click me!