ಕಳೆದುಕೊಂಡ ಹಾನಗಲ್ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯಬೇಕು. ಇದಕ್ಕಾಗಿ ಕಾರ್ಯಕರ್ತರು ಬದ್ಧರಾಗಿ ಸಂಕಲ್ಪ ಮಾಡಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕರೆ ನೀಡಿದರು.
ಹಾನಗಲ್ (ಮಾ.18): ಕಳೆದುಕೊಂಡ ಹಾನಗಲ್ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯಬೇಕು. ಇದಕ್ಕಾಗಿ ಕಾರ್ಯಕರ್ತರು ಬದ್ಧರಾಗಿ ಸಂಕಲ್ಪ ಮಾಡಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕರೆ ನೀಡಿದರು. ಶುಕ್ರವಾರ ಸಂಜೆ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವ ಹೆಚ್ಚಿಸಿದ್ದಾರೆ. ಪಾಕಿಸ್ತಾನದ ಪ್ರಜೆಗಳು ನಮಗೂ ಮೋದಿಯಂತೆ ಪ್ರಧಾನಿ ಬೇಕೆಂದು ಹೇಳುತ್ತಿದ್ದಾರೆ. ರೈತರಾದಿಯಾಗಿ ಈ ದೇಶದ ದುಡಿಯುವ ವರ್ಗದ ಹಿತಕ್ಕೆ ಹೆಚ್ಚು ಕೆಲಸ ಮಾಡಿದ ಮೋದಿ ಕೈ ಬಲಪಡಿಸಲು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕಾಂಗ್ರೆಸ್ಸಿಗರು ಗ್ಯಾರಂಟಿ ಕಾರ್ಡ್ ಹಿಡಿದು ಬರುತ್ತಿದ್ದಾರೆ. ಆದರೆ ಬಿಜೆಪಿ ರಿಪೋರ್ಚ್ ಕಾರ್ಡ್ ಹಿಡಿದು ಜನರ ಮುಂದಿದೆ. ಅಭಿವೃದ್ಧಿಯ ರಿಪೋರ್ಚ್ ನಮ್ಮದು. ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್ಸಿಗೆ ಈಗ ಗ್ಯಾರಂಟಿ ಕಾರ್ಡ್ ತೋರಿಸುವ ಸ್ಥಿತಿ ಬಂದಿದೆ. ಅದು ಖುರ್ಚಿ ಪಾರ್ಟಿ. ರಾಹುಲ್ ಗಾಂಧಿಗೆ ದೇಶದ ಅಭಿಮಾನವಿದ್ದರೆ ಪರ ದೇಶದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಕಿಡಿಕಾರಿದರು. ಮುಖಂಡ ವಿವೇಕಾನಂದ ಗಡ್ಡಿ ಮಾತನಾಡಿ, ಈ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವ, ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಒಳಗೊಂಡು ಡಬಲ್ ಎಂಜಿನ್ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್ಸಿಗೆ ಅಧಿಕಾರ ಸಿಗುವುದಿಲ್ಲ ಎಂದು ಗ್ಯಾರಂಟಿ ಘೋಷಣೆ ಮಾಡಿ ಮರಳು ಮಾಡುತ್ತಿದೆ ಎಂದರು.
undefined
ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್.ಡಿ.ಕುಮಾರಸ್ವಾಮಿ
ಮಂಡಲ ಅಧ್ಯಕ್ಷ ನಿಂಗಪ್ಪ ಗೊಬ್ಬೇರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಶಿವರಾಜ ಸಜ್ಜನರ, ರಾಜಶೇಖರ ಕಟ್ಟೇಗೌಡ್ರ, ಕೃಷ್ಣ ಈಳಿಗೇರ, ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ಬಿ.ಕೆ. ಮೋಹನಕುಮಾರ, ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ನಿಜಲಿಂಗಪ್ಪ ಮುದಿಯಪ್ಪನವರ, ನಂದಿನಿ ವಿರೂಪಣ್ಣನವರ, ರೇಖಾ ಕರಿಭೀಮಣ್ಣನವರ, ಬಿ.ಎಸ್. ಅಕ್ಕಿವಳ್ಳಿ, ರಾಜಣ್ಣ ಪಟ್ಟಣದ, ರಾಜಣ್ಣ ಗೌಳಿ, ಪ್ರಶಾಂತ ಪೂಜಾರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಶಿಧರ ಹೊಸಳ್ಳಿ, ರಮೇಶ ಸವಣೂರ, ಎಸ್.ಎಂ. ಕೋತಂಬರಿ, ಶಿವಲಿಂಗಪ್ಪ ತಲ್ಲೂರ, ಮಹೇಶ ಕಮಡೊಳ್ಳಿ ಮೊದಲಾದ ಮುಖಂಡರು ವೇದಿಕೆಯಲ್ಲಿದ್ದರು.
ಬೈಕ್ ರ್ಯಾಲಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಹಾನಗಲ್ಲ ಸಮೀಪದ ಮಲ್ಲಿಗ್ಗಾರದಿಂದ ಪಟ್ಟಣದ ವಿರಕ್ತಮಠದ ವರೆಗೆ ಸಾವಿರಾರು ಬೈಕ್‌ಗಳ ರ್ಯಾಲಿ ನಡೆಯಿತು. ಸಂಸದ ಶಿವಕುಮಾರ ಉದಾಸಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮೊದಲಾದವರು ರಾರಯಲಿಯಲ್ಲಿದ್ದರು.
ದೇವೇಗೌಡರ ಕುಟುಂಬ ತೆರಿಗೆ ಹಣ ಲೂಟಿ ಮಾಡಿಲ್ಲ: ಎಚ್.ಡಿ.ಕುಮಾರಸ್ವಾಮಿ
ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೇ ಪಕ್ಷ ಟಿಕೆಟ್ ಕೊಟ್ಟರೂ ಎಲ್ಲರೂ ಸೇರಿ ಗೆಲ್ಲಿಸೋಣ. ಇದೇ ಎಲ್ಲ ಕಾರ್ಯಕರ್ತರ ಸಂಕಲ್ಪವಾಗಲಿ. ದಿ. ಸಿ.ಎಂ. ಉದಾಸಿ ಅವರ ಕನಸು ನನಸಾಗಿ ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಸಾರ್ಥಕವಾಗಿವೆ. ಇನ್ನು ಕೆಲಸ ಬಹಳ ಇದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಇಲ್ಲಿಯೂ ಗೆಲ್ಲಿಸಿ.
-ಶಿವಕುಮಾರ ಉದಾಸಿ, ಸಂಸದ