
ಬೆಳಗಾವಿ (ಏ.11): ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವ ಯತ್ನಾಳ್ ಅವರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಳಗಾವಿಯಲ್ಲಿಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಯತ್ನಾಳ್‌ಗೆ ಈಗಾಗಲೇ ಪಕ್ಷದಿಂದ ಮೂರು ಬಾರಿ ನೋಟಿಸ್ ನೀಡಲಾಗಿದೆ. ಪಕ್ಷ ಕ್ರಮ ಕೈಗೊಳ್ಳುತ್ತೆ, ಶಾಸಕರನ್ನು ಉಚ್ಚಾಟನೆ ಮಾಡಬೇಕಿದ್ರೆ ಪಕ್ಷದಲ್ಲಿ ಕೆಲವು ನಿಯಮಗಳಿವೆ. ಇಷ್ಟು ಬಾರಿ ನೋಟಿಸ್ ನೀಡಬೇಕು ಅಂತಾ ನಿಯಮ ಇದೆ, ಇದು ಪಕ್ಷದ ಆಂತರಿಕ ವಿಷಯ ಎಂದರು.
ಇನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಯತ್ನಾಳ್ ಅವರಿಗೆ ಈಗಾಗಲೇ ಪಕ್ಷದಿಂದ ನೋಟಿಸ್ ಹೋಗಿದೆ. ಯತ್ನಾಳ್‌ರವರ ಜವಾಬ್ದಾರಿಯನ್ನು ತಿಳಿಸುವ ಕೆಲಸ ಆಗಿದೆ. ಪಕ್ಷ ಬಿ ಫಾರಂ ನೀಡಿದ ಶಾಸಕನಿಗೆ ಶಿಸ್ತುಕ್ರಮ ಕೈಗೊಳ್ಳಬೇಕೆಂದರೆ ಕೆಲವು ಸಂವಿಧಾನಗಳಿವೆ. ಆ ಸಂವಿಧಾನದ ಆಧಾರದಲ್ಲಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಮೂರು ನೋಟಿಸ್ ಕೊಟ್ಟಿದ್ದು ಯತ್ನಾಳ್ ಸಮಯ ಕೇಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಪಕ್ಷ ಏನ್ ಮಾಡಬೇಕೋ ಅದು ಮಾಡುತ್ತದೆ ಎಂದರು.
'ಬೆಳಗಾವಿ ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ' ..
ಸುರ್ಜೇವಾಲ ಹೇಳಿಕೆ ವಿಚಾರ : ಉಪಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿ ಆಗುತ್ತದೆ ಎಂಬ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಐದು ರಾಜ್ಯಗಳ ಚುನಾವಣೆ, ಉಪಚುನಾವಣೆ ಇದ್ಯಾವುದರೂ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಐದು ರಾಜ್ಯದಲ್ಲಿ ಮೂರು ರಾಜ್ಯ ಗೆದ್ದೆ ಗೆಲ್ತೇವೆ, ಎರಡು ರಾಜ್ಯಗಳಲ್ಲಿ ಅಕೌಂಟ್ ಓಪನ್ ಮಾಡುತ್ತೇವೆ. ಕಾಂಗ್ರೆಸ್ ಒಂದು ರಾಜ್ಯ ಗೆದ್ದು ತೋರಿಸಲಿ.
ಕಾಂಗ್ರೆಸ್ ಪಕ್ಷ ಒಂದು ಸರ್ಕಸ್ ಕಂಪನಿ ಆಗಿದೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ, ಪರಮೇಶ್ವರ್ ಅವರದ್ದು ಒಂದೊಂದು ಗ್ಯಾಂಗ್ ಆಗಿದೆ. ಆ ಸರ್ಕಸ್ ಕಂಪನಿ ಸರಿ ಮಾಡಲು ಸುರ್ಜೇವಾಲರನ್ನು ಕಳಿಸಿಕೊಟ್ಟಿದ್ದಾರೆ. ಮೊದಲು ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಗಲಾಟೆ ಸರಿ ಮಾಡಲಿ. ಸಿದ್ದರಾಮಯ್ಯ ಗೆ ಮನುಷ್ಯತ್ವ ಇದ್ದರೆ ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಏಕೆ ಭೇಟಿ ನೀಡಲಿಲ್ಲ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.